ತುರುವೇಕೆರೆ: ಇತ್ತೀಚೆಗೆ ತುರುವೇಕೆರೆ ತಾಲ್ಲೂಕಿನ ಅರೇಮಲ್ಲೇನಹಳ್ಳಿ ಗ್ರಾಮದ ನಮ್ಮ ಕಾರ್ಯಕರ್ತ ಬೈರೇಗೌಡರವರ ಪತ್ನಿ ಶ್ರೀಮತಿ ಸುಜಾತರವರು ದನಕರುಗಳನ್ನು ಮೇಯಿಸಲು ಹೋದಾಗ ಚಿರತೆ ದಾಳಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮನಗೆ ಹೋಗಿ ಕುಟುಂಬಕ್ಕೆ ಸಂತ್ವಾನ ಹೇಳಿ ಕುಟುಂಬಕ್ಕೆ 50. ಸಾವಿರ ರೂಪಾಯಿ ನೆರವು ನೀಡಿ, ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಭರವಸೆ ನೀಡಿದ ನಿಕಟಪೂರ್ವ ಶಾಸಕರಾದ ಮಸಾಲ ಜಯರಾಮ್ ರವರು.
ಹಾಗೂ ಇಬ್ಬರೂ ಮಕ್ಕಳ ಪೈಕಿ ಒಬ್ಬರಿಗೆ ಕುಟುಂಬ ನಿರ್ವಹಣೆಗಾಗಿ ಸರ್ಕಾರಿ ಕೆಲಸ ನೀಡುವಂತೆ ಕ್ರಮ ವಹಿಸಲು, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆರವರನ್ಮು ಅಗ್ರಹಿಸಲಾಯಿತು.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಶಿಧರ್ ರವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ರೈತರಿಗೆ/ಸಾರ್ವಜನಿಕರಿಗೆ ತೊಂದರೆಯಾಗಿರುವ ಹಿನ್ನಲೆ ಹೆಚ್ಚಾಗಿರುವ ನರಭಕ್ಷಕ ಚಿರತೆ ಹಾವಳಿಯನ್ನು ತಪ್ಪಿಸಲು ಟಾಸ್ಕಪೋರ್ಸ್ ರಚಿಸುವಂತೆ ಹಾಗೂ ಹೆಚ್ಚುವರಿ ಬೋನ್ ಗಳನ್ನು ಅಳವಡಿಸಲು ಕೂಡಲೇ ಕ್ರಮ ವಹಿಸಲು ಸೂಚಿಸಲಾಯಿತು.
ಈ ಸಂಧರ್ಭದಲ್ಲಿ ಗ್ರಾಮದ ಸ್ಥಳೀಯ ಮುಖಂಡರುಗಳು ಹಾಗೂ ಬಿಜೆಪಿ ಪಧಾಧಿಕಾರಿಗಳು,ಗ್ರಾಮಸ್ಥರು ಗಳು ಉಪಸ್ಥಿತರಿದ್ದರು.





