ಗುಬ್ಬಿ : ತಾಲೂಕಿನ ಸಿ.ಎಸ್.ಪುರ ಹೋಬಳಿಯ ಅಂಕಳಕೊಪ್ಪ ಗ್ರಾಮದ ಯುವಕ ನಾರಾಯಣಸ್ವಾಮಿ ಐಪಿಎಲ್ ಬೆಟ್ಟಿಂಗ್ ಹವ್ಯಾಸಕ್ಕೆ ಹೋಗಿ ನೇಣಿಗೆ ಶರಣಾಗಿದ್ದಾರೆ.

ವೃತ್ತಿಯಲ್ಲಿ ಕೊರಿಯರ್ ಕೆಲಸ ಮಾಡುತ್ತಿದ್ದು     ಬೆಟ್ಟಪ್ಪನವರ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದನ್ನು,  ಹಿಂದೆ ನಡೆದ ಐಪಿಎಲ್ ಬೆಟ್ಟಿಂಗ್ ಆಡಿ ಸಾಲದ ಕೂಪಕ್ಕೆ ಸಿಲುಕಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಶವವನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಸ್ಥಳಕ್ಕೆ ನಿಕಟಪೂರ್ವ ಶಾಸಕ ಮಸಾಲೆ ಜಮರಾಮ್ ಭೇಟಿ ನೀಡಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಇಂದಿನ ಪೀಳಿಗೆ ಐಪಿಎಲ್ ಸೇರಿದಂತೆ ಆನ್ಲೈನ್ ಗೇಮ್ ಗಳಲ್ಲಿ ಬೆಟ್ಟಿಂಗ್ ಕಟ್ಟಿಕೊಂಡು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಂಡವಾಳಿಶಾಹಿಗಳು ಐಪಿಎಲ್ ಅಂತಹ ದೊಡ್ಡ ಕ್ರೀಡೆಯನ್ನು ನಡೆಸುತ್ತಿರುವುದರಿಂದ ಯುವ ಸಮುದಾಯ ದಾರಿತಪ್ಪುತ್ತಿದೆ. ಸರ್ಕಾರ ಎಚ್ಚೆತ್ತು ಕೂಡಲೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಪೋಷಕರು ತಮ್ಮ ಮಕ್ಕಳ ಚಲನ ವಲನದ ಬಗ್ಗೆ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here