ಗುಬ್ಬಿ: ಐದಾರು ವರ್ಷಗಳಿಂದ ಸಾವಿರಾರು ಲೀಟರ್ ಹಾಲು ಹಾಕುತ್ತಿರುವ ರೈತರಿಗೆ ಷೇರು ನೀಡದೆ ವಂಚಿಸುತ್ತಿದ್ದಾರೆ ಎಂದು ಕಾರ್ಯದರ್ಶಿ ಮನೆ ಮುಂದೆ ನಾರನಹಳ್ಳಿ ರೈತರು ಮೈಮೇಲೆ ಹಾಲು ಸುರಿದುಕೊಂಡು ಪ್ರತಿಭಟನೆ ಮಾಡಿದ್ದಾರೆ.
ತಾಲ್ಲೂಕಿನ ಸಿಎಸ್ ಪುರ ಹೋಬಳಿಯ ನಾರನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಹಾಕುತ್ತಿರುವವರಿಗೆ ಷೇರು ನೀಡುತ್ತಿಲ್ಲ ಎಂಬ ಕಾರಣಕ್ಕೆ ನಾರನಹಳ್ಳಿ ಹಾಲು ಉತ್ಪಾದಕರು
ಕಾರ್ಯದರ್ಶಿ ಧನಂಜಯನಯವರನ್ನು ಷೇರು ಕೊಡಿ ಎಂದು ಕೇಳಿದಾಗ ಡೈರಿ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಇದರಿಂದ ಬೇಸತ್ತ ಹಾಲು ಉತ್ಪಾದಕರು ಕಾರ್ಯದರ್ಶಿ ಧನಂಜಯ ಮತ್ತು ಅಧ್ಯಕ್ಷ ಪುಟ್ಟವೆಂಕಟಯ್ಯ ಮತ್ತು ಆಡಳಿತ ಮಂಡಳಿ ಸದಸ್ಯರ ವಿರುದ್ಧ ರಸ್ತೆಯುದ್ಧಕ್ಕೂ ಧಿಕ್ಕಾರ ಕೂಗಿಕೊಂಡು ಕಾರ್ಯದರ್ಶಿ ಧನಂಜಯ ಎಂಬ ವ್ಯಕ್ತಿಯ ಮನೆ ಮುಂದೆ ಹಾಲು ಉತ್ಪಾದಕರು ಧಿಕ್ಕಾರ ಕೂಗಿ ರೈತರಿಗೆ ಷೇರು ನೀಡದೆ ವಂಚಿಸುತ್ತಿರುವ ಬಗ್ಗೆ ಆರೋಪಿಸಿ ಅವರ ಮನೆಯ ಬಾಗಿಲಿಗೆ ಹಾಲು ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಲವು ವರ್ಷಗಳಿಂದ ಸಾವಿರಾರು ಲೀಟರ್ ಹಾಲು ಹಾಕುತ್ತಾ ಬರುತ್ತಿರುವ ರೈತರಿಗೆ ಷೇರು ನೀಡದೆ ವಂಚುತ್ತಿರುವ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೂ ಮನವಿ ಮಾಡಿ ನಂತರ ಕಾರ್ಯದರ್ಶಿಗೆ ಒತ್ತಡ ಏರಿದ್ದರು ಯಾರ ಮಾತಿಗೂ ಬಗ್ಗದ ಕಾರ್ಯದರ್ಶಿ , ಧನಂಜಯ ವಿರುದ್ಧ ಸ್ಥಳೀಯ ರೈತರು ಹಾಲು ಸುರಿದುಕೊಂಡು ವಿನೂತನ ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.
ಪ್ರತಿಭಟನಾ ಸಂದರ್ಭದಲ್ಲಿ ಗ್ರಾಮದ ಹಾಲು ಉತ್ಪಾದಕರು ಹಾಗೂ ರೈತರು ಸಾರ್ವಜನಿಕರು ಮತ್ತು ಇತರರು ಇದ್ದರು.





