ಗುಬ್ಬಿ : ಶಿಕ್ಷಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ 2024 25 ನೇ ಸಾಲಿನ ತುಮಕೂರು ಜಿಲ್ಲಾ ಮಟ್ಟದ ಶೆಟ್ಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು  ಮೈದಾನ ಹಾಗೂ ಗುಬ್ಬಿ ಟೌನ್ ಕ್ಲಬ್ ನಲ್ಲಿ  ಆಯೋಜನೆ ಮಾಡಲಾಗಿತ್ತು.  ಆರು ತಾಲೂಕಿನಿಂದ 14ರ ವಯೋಮಿತಿಯ ಬಾಲಕ ಬಾಲಕಿಯರ ಒಟ್ಟು 24 ತಂಡಗಳಿಂದ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

 17 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ತುಮಕೂರು ತಾಲೂಕು ಪ್ರಥಮ ಸ್ಥಾನವನ್ನು, ಗುಬ್ಬಿ ತಾಲೂಕು ದ್ವಿತೀಯ ಸ್ಥಾನವನ್ನು, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗುಬ್ಬಿ, ದ್ವಿತೀಯ ಸ್ಥಾನ ಕುಣಿಗಲ್ ತಂಡಗಳು ಪಡೆದುಕೊಂಡಿವೆ.

14 ವರ್ಷ ವಯೋಮಿತಿಯ ಬಾಲಕರಲ್ಲಿ ತುಮಕೂರು ಪ್ರಥಮ, ತಿಪಟೂರು ದ್ವಿತೀಯ, ಬಾಲಕಿಯರಲ್ಲಿ ತಿಪಟೂರು ಪ್ರಥಮ, ತುರುವೇಕೆರೆ ದ್ವಿತೀಯ ಸ್ಥಾನವನ್ನು ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 ಇದೇ ಸಂದರ್ಭದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಟೌನ್ ಕ್ಲಬ್ ಕಾರ್ಯದರ್ಶಿ ಕೃಷ್ಣಮೂರ್ತಿ, ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ದೈಹಿಕ ಶಿಕ್ಷಕರಾದ,ದಕ್ಷಿಣ ಮೂರ್ತಿ, ಜಯಕುಮಾರ, ಜಗದೀಶ್ ಲಕ್ಷ್ಮಿಪತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here