ಗುಬ್ಬಿ : ಆರ್‌ಎಸ್ಎಸ್‌ ಪ್ರಾರಂಭಗೊಂಡು ನೂರು ವರ್ಷದ ವಿಜಯೋತ್ಸವವನ್ನು ಪಟ್ಟಣದ ಹಲವಾರು ಕಡೆ ಪಥ ಸಂಚಲನ ನಡೆಸಿ ಆಚರಣೆ ಮಾಡಲಾಯಿತು.

ಪಟ್ಟಣದ   ಜೂನಿಯರ್ ಕಾಲೇಜು ಮೈದಾನದಿಂದ ಗಣ ವೇಷದಾರಿಗಳು  ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪಥ ಸಂಚಲನ ನಡೆಸಿದರು.

ಪಥ ಸಂಚಲನ ಹೋಗುವ ಪ್ರತಿ ಬೀದಿಯಲ್ಲಿ ಜನರು ಸಾಂಕೇತಿಕವಾಗಿ ರಸ್ತೆಗೆ ನೀರು ಹಾಕಿ ಬರುವ ಗಣವೇಷಧಾರಿಗಳ ಮೇಲೆ ಹೂವು ಎರಚಿ ಸ್ವಾಗತಿಸಿದ್ದು ವಿಶೇಷವಾಗಿತ್ತು. 

ಪಟ್ಟಣದ ತುಂಬೆಲ್ಲ ಕೋಲು ಹಿಡಿದು,ಬೂಟು ಧರಿಸಿದ ಖಾಕಿ ಪ್ಯಾಂಟಿನ ಬಿಳಿ ಅಂಗಿಯ ಗಣವೇಷಧಾರಿಗಳ ಸದ್ದು ಜೋರಾಗಿತ್ತು.  ಪಥ ಸಂಚಲನವು ಪಟ್ಟಣದ ಪ್ರಮುಖ ಹಾಗೂ ಸಣ್ಣ ಗಲ್ಲಿಗಳಲ್ಲೂ ಪೆರೇಡ್ ನಡೆಸಿದರು.

ಪಥ ಸಂಚಲನದಲ್ಲಿ  ತೋರೆಮಠದ ಅಟವಿ ಚನ್ನಬಸವಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಶಂಕರಸ್ವಾಮೀಜಿ, ವಿಭಾಗ ಸಂಯೋಜಕ ದಯಾನಂದ ಮೂರ್ತಿ, ಬಿಜೆಪಿ ಮುಖಂಡರಾದ ಎಸ್.ಡಿ.ದಿಲೀಪ್,  ಹೆಚ್.ಟಿ.ಭೈರಪ್ಪ, ಎನ್.ಸಿ.ಪ್ರಕಾಶ್,  ಚಂದ್ರಶೇಖರ್ ಬಾಬು, ಪಪಂ ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ( ಕಿಟ್ಟಿ), ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ, ಮುಖಂಡರಾದ ಬೆಣಚಿಗೆರೆ ಪಂಚಾಕ್ಷರಿ , ಪಾರ್ಥಸಾರಥಿ, ಗಂಗಣ್ಣ, ಅರ್ಜುನ್, ವಿಜಯ್ ಕುಮಾರ್, ನಂಜೇಗೌಡ, ಬಲರಾಣ್ಣ, ಪ್ರಮೋದ್, ಅನಿಲ್, ಲೋಕೇಶ್ ಹಾಗೂ  ಗಣವೇಷಧಾರಿಗಳು ಇತರರು ಇದ್ದರು.

LEAVE A REPLY

Please enter your comment!
Please enter your name here