ಗುಬ್ಬಿ : ಲಿಂಗಾಯತ ಧರ್ಮದ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಪ್ರತಿವರ್ಷ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ತಿಳಿಸಿದರು.

 ಪಟ್ಟಣದ ಹೊರವಲಯದ ಹೇರೂರು ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ  ಬಸವ ಜಯಂತಿ ಹಾಗೂ ಬಸವತತ್ವ ಚಿಂತನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಾತ್ಮರ ಜಯಂತಿಗಳನ್ನು ನಾವೆಲ್ಲರೂ ಮಾಡಿಕೊಂಡು ಬರುತ್ತಿದ್ದೇವೆ, ಬಸವಣ್ಣನವರು ಇಡೀ ಜಗತ್ತಿಗೆ ಒಬ್ಬ ಮಹಾನ್ ವ್ಯಕ್ತಿಯಾಗಿದ್ದಾರೆ. ಮನುಷ್ಯರಿಗೆ ಸಮಾನತೆಯನ್ನು ಕೊಟ್ಟಂತಹ ಮಹಾನ್ ಪುರುಷ.  ಇವರ ಸಪ್ತ ಸೂತ್ರಗಳನ್ನು ನಾವೆಲ್ಲರೂ ಜೀವನದಲ್ಲಿ ರೂಡಿಸಿಕೊಳ್ಳಬೇಕು. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಪಾಲಿಸಬೇಕು ಎಂದರು.

ಬೆಟ್ಟದಹಳ್ಳಿ ಗವಿಮಠ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ ಇಂದು ನಡೆಯುವ ಕಾರ್ಯಕ್ರಮವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಿದೆ.  ಎಲ್ಲರೂ ಸಂಘಟಿತರಾಗಿ ಕಾರ್ಯಕ್ರಮವನ್ನು ರೂಪಿಸಿರುವುದು ಒಗ್ಗಟಿನ ಸಂಕೇತವಾಗಿದೆ.   ಬಸವಣ್ಣ ಶರಣರ ವಚನಗಳು ಕೇಳುವುದಕ್ಕೆ ಅಲ್ಲ, ಹೇಳುವುದಕ್ಕೆ ಮತ್ತು ಅದರ ಸಾರವನ್ನು ಪ್ರತಿಯೊಬ್ಬರು ಪಾಲಿಸಬೇಕು.   ಅಂಚಿ ತಿನ್ನುವ  ತತ್ವದ ತಳಹದಿಯ ಮೇಲೆ ಧೈರ್ಯದಿಂದ ಕಾರ್ಯಕ್ರಮಗಳನ್ನು ಮಾಡಬೇಕು.  ಬಸವಣ್ಣನ ತತ್ವಗಳನ್ನು ಅಳವಡಿಸಿಕೊಂಡು ತಮ್ಮ ತನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು  ಎಂದು ತಿಳಿಸಿದರು

 ಉಪನ್ಯಾಸ ಕಾರ್ಯಕ್ರಮವನ್ನು ಬಸವಧಾಮದ ಬಸವೇಶ್ವರ ಮಾತಾಜಿ ಮಾತನಾಡಿ ಉಪನ್ಯಾಸ ನೀಢಿ  ಸಣ್ಣ ವಯಸ್ಸಿನಿಂದಲೇ ಪ್ರಶ್ನೆ ಕೇಳುವ ಮನೋಭಾವನೆ ಹೊಂದಿದ ಮಹಾನ್ ಪುರುಷ ಬಸವಣ್ಣ. ಪುರುಷರಿಗಿಂತ ಮಹಿಳೆಯರು ಬಸವಣ್ಣನವರನ್ನು ಪೂಜಿಸಬೇಕು. 

ಅಸಮಾನತೆಯನ್ನು ತೊಡೆದು ಹಾಕಲು 12ನೇ ಶಾತಮಾನದಲ್ಲಿ ಹೊರಾಟ ಮಾಡಿದದವರು. ಲಿಂಗಾಯತರು ಲಿಂಗ ಒತ್ತುತ್ತದೆ ಎಂದು ಕಟ್ಟಿಕೊಳ್ಳುವುದನ್ನು ಬಿಡುತ್ತಿದ್ದಾರೆ. ಚಿನ್ನಾಭರಣವನ್ನು ಮಾತ್ರ ತೊಡುತ್ತಾರೆ. ನಾವೆಲ್ಲರೂ ಲಿಂಗಪ್ರಮಿಗಳು ಆಗಬೇಕು. ಮನುಷ್ಯತ್ವದಿಂದ ಸನ್ಮಾರ್ಗದಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಸಾಗಬೇಕು ಎಂದು ತಿಳಿಸಿದರು. 

ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ,  ಒಗ್ಗಟಿನ ಮಂತ್ರವನ್ನು ಇಂದು ಗುಬ್ಬಿ ವಿರಶೈವ ಸಮಾಜದಲ್ಲಿ ಕಾಣಬಹುದು. ಸಮಾಜದಲ್ಲಿ ಉತ್ತಮವಾದ ಸಂದೇಶವನ್ನು ತಂದೆ, ತಾಯಿ ಗುರುಗಳು ತಿಳಿಸಬೇಕು. ಬಸವಣ್ಣ 12ನೇ ಶತಮಾನದಲ್ಲಿ ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣ ಮಾಡಲು ನಾವು ಸಾಗಬೇಕು. ದೆಹಲಿಯಲ್ಲಿ ಬಸವಣ್ಣ ಹುಟ್ಟಿದ್ದರೆ ಜಾತಿ ರಹಿತ ಸಮಾಜವನ್ನು ಕಾಣಬಹುದಿತ್ತು. ನಾವುಗಳು ಸಾಮಾಜಿಕ ಪಿಡುಗನ್ನು ದೂರಮಾಡುವ ನಿಟ್ಟಿನಲ್ಲಿ  ಒಗ್ಗಟಾಗಿ ಕೆಲಸ ಮಾಡಬೇಕು. ಯುವಪೀಳಿಗೆಗೆ ಬುದ್ದಿ ಹೇಳಿ ಉತ್ತಮ ವಿದ್ಯಾವಂತರಾಗಿ ಮಾಡಬೇಕು ಎಂದು ತಿಳಿಸಿದರು.

ಬಿಜೆಪಿ ಮುಖಂಡ ಎಸ್.ಡಿ ದಿಲೀಪ್ ಕುಮಾರ್ ಮಾತನಾಡಿ, ತಂದೆತಾಯಿಗಳು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಮಕ್ಕಳು ತಂದೆ ತಾಯಿಯನ್ನು ದೇವರಂತೆ ಕಾಣಬೇಕು. ತಾಲ್ಲೂಕಿನಲ್ಲಿ 20 ಸಾವಿರ ಮನೆಗಳಿವೆ ಮುಂದಿನ ದಿನದಲ್ಲಿ ಜಾತ್ರೆ ರೀತಿಯಲ್ಲಿ ಬಸವಜಂಯತಿಯನ್ನು ಮಾಡಬೇಕು ಎಂದರು.

ಸಾಗರನಹಳ್ಳಿ ನಟರಾಜು ಮಾತನಾಡಿ, ಅರಿವಿನ ಮೂಲಕ  ಜನರನ್ನು ಎಚ್ಚರಿಸುವ ಕೆಲಸವಾಗಬೇಕಾಗಿದೆ. ವಚನಗಳನ್ನು ಪ್ರಚಾರ ಮಾಡುವುದಕ್ಕೆ ಅನುವು ಮಾಡಿಕೊಟ್ಟಂತಹ ಮಹಾನ್ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ್ ಬಾಬು ಮಾತನಾಡಿ, ಮಕ್ಕಳ ಮನಸ್ಸು ಸಂಚಲವಾಗಿದೆ. ಮಕ್ಕಳು  ಮೊಬೈಲ್ಗಳಿಗೆ ದಾಸರಾಗಿ ಸಂಬಂಧಗಳನ್ನು ದೂರ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ತಂದೆ ತಾಯಿಗಳು ಸಂಸ್ಕಾರಯುತ ಮೌಲ್ಯಗಳನ್ನು ಮಕ್ಕಳಿಗೆ ಹೇಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ಎಸ್ಎಲ್ ಸಿ  ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿತ್ತು.

 ಚಾಲುಕ್ಯ ಆಸ್ಪತ್ರೆಯ ಡಾ. ನಾಗಭೂಷಣ್ ತಂಡ ವತಿಯಿಂದ  ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು.

ಜೈ ಗುರು ಬಸವ ಎಂದು ಬರೆದ ಟೋಪಿಯು ಎಲ್ಲರ ತಲೆ ಮೇಲು ರಾರಾಜಿಸುತ್ತಿತ್ತು ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ಬಂದಂತ ನಂದಿಧ್ವಜ ಎಲ್ಲರ ಕಣ್ಣುಗಳಿಗೆ ಇಂಪನ್ನು ನೀಡಿತು.

ಶ್ರೀ ಚನ್ನಬಸವೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀ ನಾಗಲಿಂಗೇಶ್ವರ ದೇವಸ್ಥಾನದವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಬಸವೇಶ್ವರರ ಭಾವಚಿತ್ರದೊಂದಿಗೆ  ನಂದಿಧ್ವ, ವೀರಗಾಸೆ ಕುಣಿತ, ಲಿಂಗದ ವೀರರ ಕುಣಿತ ಹಾಗೂ ಇನ್ನೂ ಮುಂತಾದ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಗುತ್ತದೆ. 

ಕಾರ್ಯಕ್ರಮದಲ್ಲಿ ತೆವಡೇಹಳ್ಳಿ ಮಠದ ಶ್ರೀ ಗೋಸಲ ಚೆನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ, ತೊರೆಮಠದ ಅಟವೀ ಚನ್ನಬಸವ ಸ್ವಾಮೀಜಿಗಳು ಆಶೀರ್ವಚನ ನೀಡುವರು. ಹೊಳಲ್ಕೆರೆ ಉಪನ್ಯಾಸಕ ಡಾ.ಮಂಜುನಾಥ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬಸವ ಜಯಂತಿ ಆಚರಣಾ  ಸಮಿತಿ ಅಧ್ಯಕ್ಷ ಎಸ್. ಮಂಜುನಾಥ್,  ಎನ್.ಸಿ ಪ್ರಕಾಶ್, ಎಂ. ಸಿ ಹಿತೇಶ್, ರುದ್ರೇಶ್, ಮಲ್ಲಿಕಾರ್ಜುನ್,  ಸಂಗಪ್ಪ,  ಆರ್.ಬಿ.ಜಯಣ್ಣ, ಜಿ.ಆರ್.ಶಿವಕುಮಾರ್, ಚನ್ನಶೇಟ್ಟಿಹಳ್ಳಿ ಯತೀಶ್, ಉಮೇಶ್,  ಯತೀಶ್, ಪಾಲನೆತ್ರ, ದಿವ್ಯಪ್ರಕಾಶ್, ವಿಶ್ವನಾಥ್, ಗಂಗಾಧರಯ್ಯ, ಗುರು, ರವೀಶ್, ಹೊಸಹಳ್ಳಿ ಗಿರೀಶ್, ಭಾರತಿಹಿತೇಶ್, ಯಶೋಧಜಯಣ್ಣ, ಸೌಮ್ಯ ನಂದೀಶ್, ಶಿಕ್ಷಕರ ಸಂಘದ ನಿರ್ದೇಶಕಿ ಸಿಂಧು ಹಾಗೂ ಅಖಿಲಭಾರತ  ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಬಸವ ಜಯಂತಿ ಆಚರಣೆ ಸಮಿತಿ, ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಶಿವಬಸವ ನೌಕರರ ಸೌಹಾರ್ದ ಸಹಕಾರಿ ಬ್ಯಾಂಕ್ ಪದಾಧಿಕಾರಿಗಳು ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here