ಗುಬ್ಬಿ : ಆರ್ಥಿಕ  ಮಟ್ಟವನ್ನು ಹೆಚ್ಚಳ ಮಾಡಿ ಕೊಳ್ಳುವುದಕ್ಕೆ ಹೈನುಗಾರಿಕೆಯ ಉತ್ತಮ ಉದ್ಯೋಗಾವಕಾಶವನ್ನು ಒದಗಿಸಿಕೊಡುತ್ತದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ತುಮಕೂರು ಹಾಲು ಒಕ್ಕೂಟದ ವತಿಯಿಂದ ನೂತನ 16 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 34 ಲಕ್ಷದ ರೂಗಳ ಹಾಲು ಶೇಖರಣ ಸಾಮಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿದರು.

ತುಮಕೂರು ಹಾಲು ಒಕ್ಕೂಟದ ಚುನಾವಣೆಯಲ್ಲಿ ಭಾರತ ಶ್ರೀನಿವಾಸ್ ಸ್ಪರ್ಧೆ ಮಾಡಿದ್ದಾಗ ತಾಲೂಕಿನ ಜನತೆ ಅವರು ಚುನಾಯಿತರಾದರೆ ವಸೂಲಿ ಮಾಡುತ್ತಾರೆ ಎಂದು ಅಪಪ್ರಚಾರ ಮಾಡಿದ್ದರು. ನಾವುಗಳು ಎಂದಿಗೂ ವಸೂಲಿ ಕೆಲಸವನ್ನು ಮಾಡುವುದಿಲ್ಲ.  ಒಕ್ಕೂಟದಿಂದ ಇಷ್ಟೆಲ್ಲ ಸೌಲಭ್ಯಗಳನ್ನು ಜನರಿಗೆ ನೀಡಬಹುದು ಎಂಬುದು ನನಗೂ ಸಹ ಗೊತ್ತಿರಲಿಲ್ಲ. ನಾವುಗಳು ಪ್ರಾಮಾಣಿಕವಾಗಿ ಸರ್ಕಾರದ ಸವಲತ್ತುಗಳನ್ನು ಸಹಕಾರ ಸಂಘಗಳಿಗೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆ ಆಗಬಾರದು ಎಂದು ಆ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಪ್ರಾರಂಭಿಸಿದ್ದೇವೆ.  ಮುಂದಿನ ದಿನದಲ್ಲಿ ಪ್ರತಿ ಗ್ರಾಮದಲ್ಲೂ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪನೆ ಮಾಡಲಾಗುತ್ತದೆ.  ಡೈರಿಗಳಿಗೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಲು ಹಾಲು ಶೇಖರಣ ಸಾಮಗ್ರಿಗಳು, ಹಾಲು ಪರೀಕ್ಷಾ ಸಾಮಗ್ರಿಗಳು, ಸಂಘಕ್ಕೆ ಬೇಕಾಗಿರುವ ಎಲ್ಲಾ ಮೂಲ ಸೌಕರ್ಯಗಳನ್ನು ನೀಡಲಾಗುತ್ತಿದೆ. ಇವುಗಳನ್ನು ಬಳಸಿಕೊಂಡು ಜನರಿಗೆ ಹತ್ತಿರವಾಗುವ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು.

 ಪ್ರತಿ ಒಂದು ಸಂಘಕ್ಕೆ ಎಚ್ಎಎಲ್ ಕಾರ್ಖಾನೆಯ ಸಿಎಸ್ಆರ್ ಹಣದಿಂದ ಕೌ ಲಿಫ್ಟ್ ಗಳನ್ನು ಕೊಡಲಾಗುತ್ತದೆ. ಇನ್ನೂ ಹೆಚ್ಚಿಗೆ ಬೇಕಾದಲ್ಲಿ ಕ್ರಿಯಾಯೋಜನೆ ತಯಾರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪದೇ ಪದೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಗುತ್ತಿದ್ದು ಸಹ ಜನತೆ ಮೋದಿ ಅವರನ್ನು ಹೊಗಳುವುದು ಬಿಡುವುದಿಲ್ಲ. ಇದೆಯೇ ಅಚ್ಚೇ ದಿನ್, ಸ್ವಾಭಾವಿಕವಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆದರೆ ಕೆ ಎಸ್ ಆರ್ ಟಿ ಸಿ ಬಸ್ ಚಾರ್ಚ್ ಏರಿಕೆ ಆಗಲಿದ್ದು ಈ ಕುರಿತು ಸಚಿವರು  ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

1050000 ರೂಗಳ ಚೆಕ್ ಅನ್ನು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಟ್ಟಡ ನಿರ್ಮಾಣಕ್ಕೆ ವಿತರಣೆ ಮಾಡಿದರು.  

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಆರ್.ವೆಂಕಟೇಶ್ ತುಳಸಿದಾಸ್,  ಬಾಲಕೃಷ್ಣ,  ಮಧು, ದರ್ಶನ್,  ಶ್ರೀನಿವಾಸ್, ಉಂಡೆ ರಾಮಣ್ಣ, ಚಿದಾನಂದ್, ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಸಿ.ರಾಜು, ಕೆ.ಎ.ಶಂಕರನಾಗ್, ಎಂ.ಎನ್.ಮಹೇಶ್ ಮತ್ತಿತರರು ಇದ್ದರು

LEAVE A REPLY

Please enter your comment!
Please enter your name here