ಗುಬ್ಬಿ:  ತಾಲೂಕಿನ ಕಸಬಾ ಹೋಬಳಿ ಕಳ್ಳಿಪಾಳ್ಯ ಗ್ರಾಮದಲ್ಲಿ ಮಣ್ಣಮ್ಮನ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.

 ಜಾತ್ರೆಯನ್ನು ಐದು ವರ್ಷಕ್ಕೆ ಒಂದು ಭಾರಿ ಮಾಡುವುದರಿಂದ ಗ್ರಾಮದ ಹೆಣ್ಣು ಮಕ್ಕಳು ಗಂಡನ ಮನೆಯಿಂದ ಕುಟುಂಬ ಸಮೇತರಾಗಿ ತವರು ಮನೆಗೆ ಬಂದು ಅಮ್ಮನವರ ಕೃಪೆಗೆ ಪಾತ್ರರಾಗುತ್ತಾರೆ.

 ಮಣ್ಣೆಮಾರಿ ಕಾವಲ್ ನಲ್ಲಿ ನಲೆಸಿರುವ ಮಣ್ಣಮ್ಮ ದೇವರುಗಳ ಆಗಮನದೊಂದಿಗೆ ಕಳ್ಳಿಪಾಳ್ಯದಲ್ಲಿ ಜಾತ್ರೆ ಮಾಡಲಾಗುತ್ತದೆ.   ಗ್ರಾಮದ ಎಲ್ಲಾ ಮನೆಯಲ್ಲೂ ಬಣ್ಣ ಸುಣ್ಣ ಮಾಡಿ ಜಾತ್ರೆಯ ದಿನ  ಮಡಿಯಿಂದ ಹೊಸ ಬಟ್ಟೆ ತೊಟ್ಟು ತಂಬಿಟ್ಟು ಮಾಡಿ ನಾನಾ ಬಗೆಯ ಹೂ, ಹೊಂಬಾಳೆಯಿಂದ ಆರತಿ ಮಾಡಿ ವಾಧ್ಯಗಳೋಂದಿಗೆ ಮಣ್ಣಮ್ಮ ದೇವಸ್ಥಾನಕ್ಕೆ ತೆರೆಳಿ ಆರತಿಯನ್ನು ದೇವರಿಗೆ ಅರ್ಪಿಸಿ ತಮ್ಮ ಹರಕೆಯನ್ನು ತೀರಿಸಿಕೊಂಡರು.

LEAVE A REPLY

Please enter your comment!
Please enter your name here