ಗುಬ್ಬಿ : ಸರ್ವರಿಗೂ ಸಮಾನ ನ್ಯಾಯ ಎಂಬುವುದು ಸಂವಿಧಾನದ ಮೂಲ ಮಂತ್ರವಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎಸ್. ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ಲಯನ್ಸ್ ಕ್ಲಬ್ ಸಂಸ್ಥೆಯ ಕಚೇರಿ ಆವರಣದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಯುತ್ತಿದೆ. ಅಂತಹ ಶಕ್ತಿ ನಮ್ಮ ಸಂವಿಧಾನಕ್ಕಿದೆ. ವಿವಿಧತೆಯಲ್ಲಿ ಏಕತೆ ಸಾರುವ ನಮ್ಮದಾದರೂ ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜ್ಯಗಳ ನಡುವೆ ಗಡಿ, ಜಲ ವಿವಾದ ನಡೆಯುತ್ತಿರುವುದು ವಿಷಾದಕರ. ಆದ್ದರಿಂದ ರಾಜಕೀಯ ಪ್ರಬುದ್ಧರು, ಜನಪ್ರತಿನಿಗಳು ತಮ್ಮ ಸ್ವಾರ್ಥವನ್ನು ಬಿಟ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಪಪಂ ಮಾಜಿ ಸದಸ್ಯ ಜಿ.ಆರ್. ಶಿವಕುಮಾರ್ ಮಾತನಾಡಿ, ನಮ್ಮ ರಾಷ್ಟ್ರವು ತನ್ನದೇ ಆದಂತಹ ಸಂವಿಧಾನವನ್ನು ಅಳವಡಿಸಿಕೊಂಡು  ಸಮಸ್ತ ಭಾರತೀಯರ ಪಾಲಿಗೆ ಸಡಗರದ ಸುದಿನ. ಸಂವಿಧಾನದ ಕರ್ತವ್ಯಗಳನ್ನು ಎಲ್ಲರೂ ಪಾಲಿಸಬೇಕೆಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ  ಲಯನ್ಸ್ ಕ್ಲಬ್ ಛೇರ್ಮನ್ ಕೆ.ಆರ್. ಅಶೋಕ್ ಕುಮಾರ್, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ವಿವೇಕಾನಂದಸ್ವಾಮಿ.ಎಲ್, ಬಸವರಾಜು.ವಿ.,  ಉಂಡೆ ರಾಮಣ್ಣ, ಸಿದ್ದರಾಜು ಬಿ ಗಜ್ಜರಿ, ಡಿ.ಆರ್.ಕೀರ್ತಿರಾಜ್,  ಲಕ್ಷ್ಮೀನಾರಾಯಣ್, ಜಯದೇವ್ ಕುಮಾರ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here