
ಗುಬ್ಬಿ : ಇತಿಹಾಸ ಪ್ರಸಿದ್ದ ಶ್ರೀ ಗೋಸಲ ಚನ್ನಬಸವೇಶ್ವರ ಜಾತ್ರಾ ಮಹೋತ್ಸವವು ಫೆ.22 ರಿಂದ ಮಾರ್ಚ್.15 ರವರೆಗೆ ಅದ್ದೂರಿಯಾಗಿ ಜಾತ್ರಾ ಮಹೋತ್ಸವವು ಜರುಗಲಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ನಹೀದಾ ಜಮ್ ಜಮ್ ತಿಳಿಸಿದರು.
ದೇವಾಲಯದ ದಾಸೋಹ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿಬಾರಿಯು ಸಮಸ್ಯೆಗಳುವಕಂಡು ಬರುತ್ತವೆ ಅವುಗಳನ್ನು ಮರುಕಳಿಸದಂತೆ ಜಾತ್ರೆಯ ಸಂದರ್ಭದಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
18 ಕೋಮಿನ ಮುಖಂಡರು, ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ, ದಾಸೋಹ ಸಮಿತಿ ಸೇರಿದಂತೆ ಹಲವು ಮುಖಂಡರುಗಳ ಸಮ್ಮುಖದಲ್ಲಿ ಜಾತ್ರೆಯ ಆಗುಹೋಗುಗಳ ಬಗ್ಗೆ ಚರ್ಚಿಸಿದರು.
ಪೊಲೀಸ್ ಇಲಾಖೆ ಮತ್ತು ಬೆಸ್ಕಾಂ ಸಿಬ್ಬಂದಿಗಳು ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕು.
ಫೇ.22 ರಿಂದ ಆರಂಭವಾಗುವ ಜಾತ್ರಾ ಮಹೋತ್ಸವವೂ ಫೆ.26 ರಂದು ಗುಬ್ಬಿಯಪ್ಪ ರವರ ಮಹಾರಥೋತ್ಸವವು ನಡೆಯಲಿದ್ದು, ಮಾ.03ರಂದು ಸಂಜೆ ಬೆಳ್ಳಿ ಪಲ್ಲಕ್ಕಿ ಉತ್ಸವವು ಜರುಗಲಿದೆ ಎಂದರು.
ಬೆಳ್ಳಿ ಪಲ್ಲಕ್ಕಿ ದಿನದಂದು ಹೆಚ್ಚಿನ ಪೋಲಿಸ್ ಸಿಂಬ್ಬಂದಿಗಳನ್ನು ನೇಮಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ಬಿ.ಆರತಿ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ , ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಣ್ಣ, ಪಟೇಲ್ ಕೆಂಪೇಗೌಡರು, ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ, ಕೆನರಾ ಬ್ಯಾಂಕ್ ವ್ಯವಸ್ಥಾಪಕರು, ದಾಸೋಹ ಸಮಿತಿ, ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳು 18 ಕೋಮಿನ ಮುಖಂಡರು, ಭಕ್ತರು ಉಪಸ್ಥಿತರಿದ್ದರು





