ಗುಬ್ಬಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಆಗಿರುವುದರಿಂದ ಅವರ ತೀರ್ಮಾನದಂತೆ ನಾವು ರಾಜಕಾರಣಿಯಾಗಿ ಆಯ್ಕೆಯಾಗಿ ಬಂದಿದ್ದೇವೆ, ಅವರು ಮತ ನೀಡಿಲ್ಲ ಎಂದು ನಾವು ದ್ವೇಷ ಮಾಡುವುದು ಬೇಡ ಎಂದು ಕೆ ಎಸ್ ಆರ್ ಟಿ ಸಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್ ಆರ್ ಶ್ರೀನಿವಾಸ್ ಹೇಳಿದರು

ತಾಲೂಕಿನ ಗಳಗ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ 65 ಲಕ್ಷದ ವೆಚ್ಚದ ಆಯುಷ್ಮಾನ್ ಆರೊಗ್ಯ ಮಂದಿರ ಕಟ್ಟಡ ನಿರ್ಮಾಣ ಕಾಮಗಾರಿಗೆ, ಹಳೇಗುಬ್ಬಿ ಗ್ರಾಮದಲ್ಲಿ ಹೇಮಾವತಿ ಇಲಾಖೆಯ ವತಿಯಿಂದ 95 ಲಕ್ಷದ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಹೊನ್ನಶೆಟ್ಟಿಹಳ್ಳಿ ಕ್ರಸ್ ಬಳಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿದ ಅವರು, ಯಾವರಾಜಕಾರಣಿಯಾಗಲಿ, ಅಧಿಕಾರಿಗಳಾಗಲಿ ತಪ್ಪು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆ ಅನುಭವಿಸಲೇಬೇಕು. ಮೊದಲು ವಿನಯ್ ಕುಲಕರ್ಣಿ ಅವರ ಕೇಸು ಜಮೀನು ವಿಚಾರ ಎಂದು ಸಾಬೀತಾಗಿತ್ತು. ನಂತರ ಸಿಬಿಐ ತನಿಖೆಗೆ ಕೊಟ್ಟಾಗ ಇದು ರಾಜಕೀಯ ಪಿತೂರಿನ ಏನೂ ಗೊತ್ತಿಲ್ಲ, ಈಗ ಬೇರೆ ತಿರುವು ಪಡೆದುಕೊಂಡಿದೆ, 2004 ರಲ್ಲಿ ನಾನು ಹಾಗೂ ವಿನಯ್ ಕುಲಕರ್ಣಿ ಒಂದೇ ಬಾರಿಗೆ ಪಕ್ಷೇತರ ಅಭ್ಯರ್ಥಿ ಶಾಸಕರಾಗಿ ರಾಜಕೀಯಕ್ಕೆ ಬಂದಿದ್ದು, ಅವರು ನನಗೆ ತುಂಬಾ ಆತ್ಮೀಯಸ್ನೇಹಿತರಾಗಿದ್ದರು. ಸಮಾಜದ ಮುಖ್ಯ ವಾಹಿನಿಯಲ್ಲಿ ಕೆಲಸ ಮಾಡುವವರು ಸಮಾಜಮುಖಿ ಕೆಲಸ ಮಾಡಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ನಮ್ಮನ್ನು ಆರಿಸಿ ಕಳಿಸಿದ್ದಾರೆ. ಅವರಿಗೆ ಇಷ್ಟ ಬಂದವರಿಗೆ ಮತ ನೀಡುವ ಹಕ್ಕು ಸಂವಿಧಾನದಲ್ಲಿದೆ. ವಿರೋಧ ಮಾಡಿದವರನ್ನು ಕೊಲೆ ಮಾಡಿದರೆ ನಾವು ಎಷ್ಟು ಜನರನ್ನು ಕೊಲೆ ಮಾಡಬೇಕಾಗುತ್ತದೆ. ದ್ವೇಷ ಮಾಡಿಕೊಂಡು ಹೊದರೆ ನಾವು ಶಿಕ್ಷೆಯನ್ನು ಕಾನೂನು ಪ್ರಕಾರ ಅನುಭವಿಸಬೇಕಾಗುತ್ತದೆ.

ಹಿಂದೆ ಕಾಂಗ್ರೆಸ್ ಸರ್ಕಾರ ಮಹಿಳಾ ಮೀಸಲಾತಿಗೆ ಕರಡು ರಚಿಸಿದ್ದು ಅದರಂತೆ ಈಗಲೂ ಜಾರಿ ಮಾಡಿದರೆ ಅದಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎಂದರು.
ಬಿಜೆಪಿ ಸರ್ಕಾರ ರಾಜಕೀಯ ಉದ್ದೇಶ ಇಟ್ಟುಕೊಂಡು ಪ್ರಾಂತ್ಯ ವಿಂಗಡನೆ ಮಾಡುವಲ್ಲಿ ಹೊರಟಿದೆ. ರಾಜಸ್ಥಾನ, ಗುಜರಾತ್ ಕಡೆ ಹೆಚ್ಚಿನ ಜನಸಂಖ್ಯೆ ಇದೆ. ಆಭಾಗಕ್ಕೆ ಹೆಚ್ಚು ಸೀಟುಗಳನ್ನು ಕೊಡಬೇಕಾಗುತ್ತದೆ. ದಕ್ಷಿಣ ರಾಜ್ಯದಲ್ಲಿ ನಾವು ಕುಟುಂಬ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದರಿಂದ ಇಲ್ಲಿ ಜನಸಂಖ್ಯೆ ಕಡಿಮೆ ಇದೆ. ಆದ್ದರಿಂದ ಈ ಭಾಗದಲ್ಲಿ ಇರುವವರಿಗಿಂತ ಇನ್ನೂ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ.
ತಾಲೂಕಿನಲ್ಲಿ ಎರಡು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಕಂಡು ಬಂದಿದ್ದು ಆ ಗ್ರಾಮಕ್ಕೆ ಈಗಾಗಲೇ ಕೊಳವೆ ಬೋರ್ ಕೊರೆಸುವುದಾಗಿ ತಿಳಿಸಿದ್ದೇನೆ. ತಾಲೂಕಿನಲ್ಲಿ ಎಲ್ಲಾ ಕಡೆಯೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದರು.

ಗಣಿಬಾದಿತ ಪ್ರದೇಶಗಳಾದ ದೊಡ್ಡಗುಣಿ, ಕೊಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿದೆ ಎಂದರು.
ಎಲ್ಲಾ ಕಡೆಯೂ ರಸ್ತೆ ಅಭಿವೃದ್ಧಿಗೆ ನಾನು ಹಣ ಹಾಕಿದ್ದೇನೆ. ಆದರೆ ಇಂಜಿನಿಯರ್ ಗಳು ಯಾವ ರೀತಿ ಕ್ರಿಯೋಜನೆ ತಯಾರಿಸುತ್ತಾರೋ ಗೊತ್ತಿಲ್ಲ. ಎಲ್ಲಾ ಕಡೆಯೂ 200 ಮೀಟರ್ 100 ಮೀಟರ್ 50 ಮೀಟರ್ ಕೆಲಸವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಒಂದೇ ಬಾರಿ ಕ್ರಿಯೋಜನೆ ತಯಾರಿಸಿದರೆ ಆ ಗ್ರಾಮದ ರಸ್ತೆ ಅಭಿವೃದ್ಧಿ ಪೂರ್ಣಗೊಳ್ಳುತ್ತದೆ
ಎಂದರು
ಗುಬ್ಬಿ ಯಿಂದ ತೋರೆಹಳ್ಳಿಗೆ ಹೋಗುವ ಮಧ್ಯೆ ಬ್ರಿಡ್ಜ್ ಕಾಮಗಾರಿಗೆ 15 ಕೋಟಿ ಹಾಕಿದ್ದೇನೆ. ಸಂಬಂಧಪಟ್ಟ ಇಲಾಖೆ ಮಣ್ಣನ್ನು ಪರೀಕ್ಷೆಗೆ ಮಣ್ಣು ಮಾದರಿಯನ್ನು ತೆಗೆದುಕೊಂಡು ಹೋಗಲಾಗಿದೆ. ಅದರ ಪ್ರಕಾರ 30 ಅಡಿಯಿಂದ ಕಾಲಂ ಹಾಕಬೇಕು ಎಂದು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲ್ಲೂರು ಸುರೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಧರ್ಮಪ್ಪ, ದಾಸಪ್ಪ, ಸುರೇಶ್, ಗುತ್ತಿಗೆದಾರ ರಮೇಶ್, ಪಾಂಡಣ್ಣ ಭೋಜಣ್ಣ ವೆಂಕಟೇಶ್ ಗೌಡ್ರು , ವೆಂಕಟೇಶ್, ಭಾನು, ಪಾತಯ್ಯ, ರಾಮಣ್ಣ, ಜುಂಜೇಗೌಡ , ಹಳೇಗುಬ್ಬಿ ರಂಗಸ್ವಾಮಿ, ನಾಗಣ್ಣ, ಸತ್ತಿಗಪ್ಪ,, ಬಸವರಾಜು, ಬೀರೇಶ್, ದಿವಾಕರ್, ಟಿಹೆಚ್ಒ ಡಾ.ಬಿಂದು ಮಾಧವ್, ಪಿಡಿಒ ಮಂಜುಳಪಾಟಿಲ್, ಗುತ್ತಿಗೆದಾರ ಮಹದೇವಣ್ಣ, ಇಂಜಿನಿಯರ್, ಗ್ರಾಮ ಪಂಚಾಯತಿ ಮಾಜಿ ಸದಸ್ಯರು, ಶಾಸಕರ ಅಭಿಮಾನಿಗಳು ಇತರರು ಇದ್ದರು.





