ಗುಬ್ಬಿ : ಪಟ್ಟಣದ ಮಡಿವಾಳರ ಬೀದಿಯಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಮಹೇಶ್ವರಮ್ಮ ದೇವಿಯ ದೇವಾಲಯದ ನೂತನ ಶಿಲಾ ದೇವಾಲಯ ಲೋಕಾರ್ಪಣೆಯು ಏ. 22 ಮತ್ತು 23 ರಂದು ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಪಟ್ಟಣದ ಮಡಿವಾಳರ ಬೀದಿಯಲ್ಲಿ ಪ್ರತಿಷ್ಠಾಪಿಸಿರುವ ಮಹೇಶ್ವರಮ್ಮ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಿಯ ಸಂಪ್ರೋಕ್ಷಣೆ ಮತ್ತು ನೂತನ ಸ್ಥಿರಬಿಂಬ ಪ್ರತಿಷ್ಠಾಪನೆ, ಮಹಾ ಕುಂಭಾಭಿಷೇಕ ಮಹೋತ್ಸವ ನಡೆಯುತ್ತದೆ.
ಏ.22ರ ಸಂಜೆ 4.30ಕ್ಕೆ ಸೀನಪನಹಳ್ಳಿ ಶ್ರೀದೊಡ್ಡಮ್ಮ ಚಿಕ್ಕಮ್ಮದೇವಿ, ಶ್ರೀದಾಳಿಯಮ್ಮದೇವಿ, ತಿಪ್ಪೂರು ಕೊಡಿಕೆಂಪಮ್ಮ, ಪೆಮ್ಮನಹಳ್ಳಿ ಆಂಜನೇಯಸ್ವಾಮಿ ದೇವರುಗಳ ಆಗಮನ ದೊಂದಿಗೆ ಗಣಪತಿಪೂಜೆ, ಗಂಗಾಪೂಜೆ ಹಾಗೂ ಸಕಲ ಪರಿವಾರ ದೇವತೆಗಳೊಂದಿಗೆ ಆಲಯ ಪ್ರವೇಶ, ಪುಣ್ಯ ಹೋಮ, ಗಣಪತಿ ಪೂಜೆ, ವಾಸ್ತು ಹೋಮ, ನವಗ್ರಹ ಪೂಜೆ, ಬಲಿ ಪೂಜೆ, ಲಘು ಪೂರ್ಣಾವತಿ, ತೀರ್ಥ ಪ್ರಸಾದ ಏರ್ಪಡಿಸಲಾಗಿದೆ.
ಏಪ್ರಿಲ್ 23ರ ಮುಂಜಾನೆ ಕಳಸ ಪ್ರತಿಷ್ಠಾಪನೆ, ಪುಣ್ಯಾಹುತಿ, ದೇವಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮಹೇಶ್ವರಮ್ಮದೇವಿ ಟ್ರಸ್ಟ್ ಅಧ್ಯಕ್ಷ ಬಸವರಾಜು ಮಾತನಾಡಿ, ಏಪ್ರಿಲ್ 23 ರಂದು ಧಾರ್ಮಿಕ ಕಾರ್ಯ ಕ್ರಮ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ತೇವಡಿಹಳ್ಳಿ ಮಠಾಧ್ಯಕ್ಷ ಗೋಸಲಚನ್ನಬಸವೇಶ್ವರ ಶಿವಾಚಾರ್ಯ, ತೊರೆಮಠದ ಅಟವಿಚನ್ನಬಸವಸ್ವಾಮೀಜಿ ವಹಿಸಿಕೊಳ್ಳುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ, ಶಾಸಕ ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿ ಅಧ್ಯಕ್ಷರಾದ ಎಸ್.ಆರ್.ಶ್ರೀನಿವಾಸ್, ಕಲ್ಪನಾ ಸತ್ಯನಾರಾಯಣ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ, ಕೆನರಾ ಬ್ಯಾಂಕ್ ರೀಜನಲ್ ಆಫೀಸರ್ ಗಂಗೇಶ್ ಗುಂಜನ್, ಎಸ್.ಕೆ.ಆರ್.ಡಿ.ಪಿ.ಅಧಿಕಾರಿ ಕೆ.ಜ್ಯೋತಿ, ಬಿ.ಕೆ.ರಾಜೇಶ್,ಗಂಗಮ್ಮ ದೊಡ್ಡಕೆಂಚಪ್ಪ ಆಗಮೀಸಲಿದ್ದು ಸಮಸ್ತ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ, ಛಲವಾದಿ ಮಹಾಸಭಾ ಅಧ್ಯಕ್ಷ ಟಿ.ಇ.ಈರಣ್ಣ, ಪ್ರಧಾನ ಕಾರ್ಯದರ್ಶಿ ಯತೀಶ್ ಇತರರು ಭಾಗವಹಿಸಿದ್ದರು.





