ತಾಲ್ಲೂಕಿನ ಕೋಡಿನಾಗೇನಹಳ್ಳಿ, ಚೇಳೂರು ಎಪಿಎಂಸಿ,  ಸಾತೇನಹಳ್ಳಿ ಗೇಟ್, ಮಗ್ಗದರ ಕಾಲೂನಿ, ನಂದೀಹಳ್ಳಿ ಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ವತಿಯಿಂದ ಸುಮಾರು 3.4 ಕೋಟಿ ವೆಚ್ಚದ  ಸಿಸಿ ರಸ್ತೆ, ಚರಂಡಿ, ಎಪಿಎಂಸಿ ಪ್ರಾಂಗಣದ ಕಾಂಕ್ರೀಟ್ ನಿರ್ಮಾಣ ಹಾಗೂ ಆಯುಷ್ಮಾನ್ ಕೇಂದ್ರ  ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, 40 ವರ್ಷಗಳಿಂದ ನಾನು ರಾಜಕಾರಣ ಮಾಡಿಕೊಂಡು ಬರುತ್ತಿದ್ದೇನೆ. ಒಂದು ಸಣ್ಣ ಮಗುವಿಗೂ ಸಹ ತೊಂದರೆ ಮಾಡಿಲ್ಲ. ಚುನಾವಣೆಯಲ್ಲಿ ಮತದಾರರ ಮನೆ ಬಾಗಿಲಿಗೆ ಹೋಗಿ ಮತ ಕೇಳುತ್ತೇನೆ ಹೊರತು, ನನ್ನ ಎದುರು ನಿಂತ ಅಭ್ಯರ್ಥಿಯ ಬಗ್ಗೆ ನಾನು ಯಾವ ವೇದಿಕೆಯಲ್ಲೂ ಸಹ ಮೈಕ್ ಹಿಡಿದು ಮಾತನಾಡಿಲ್ಲ. 

ನನಗೆ ಮತ ನೀಡಿದ ಜನರಿಂದ ನಾನು ಬದಲಾಗಬಹುದೇ ಹೊರತು ಇಂಥವರಿಂದ ನಾನು ಬದಲಾಗಲು ಸಾಧ್ಯವಿಲ್ಲ. ನೀಚ ರಾಜಕಾರಣ ನಾನು ಎಂದಿಗೂ ಮಾಡುವುದಿಲ್ಲ. ನೀಚ ಕೆಲಸಕ್ಕೆ ಕೈ ಹಾಕುವುದಿಲ್ಲ.

ಜೆಡಿಎಸ್ ಮುಖಂಡ ಚಿಲ್ಲರೆ ತರಹ ಮಾತನಾಡಿದ್ದಾರೆ ಇವರೇ ನನ್ನ ಮಗನನ್ನು ಹನಿಟ್ರಾಪ್ ಮಾಡಲು ಬೇರೆಯವರನ್ನು ಕಳಿಸಿದ್ದಾರೆ.  ನಾನು ಯಾರಿಗೂ ತೊಂದರೆ ಕೊಡುವುದಿಲ್ಲ.   ದಿಲೀಪ್, ಹೊನ್ನಗಿರಿಗೌಡ, ಲೋಕೇಶ್, ಬೆಟ್ಟಸ್ವಾಮಣ್ಣ  ಇವರುಗಳಿಗೆ ನಾನು ಯಾವುದೇ ತೊಂದರೆಯನ್ನು ಸಹ ಮಾಡಿಲ್ಲ. ನಾನು ಇನ್ನೊಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಎಂದು ಧಕ್ಕೆ ಬಾರದಂತೆ ಕೆಲಸ ಮಾಡುತ್ತಿದ್ದೇನೆ.

ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಬಿದರೆ ಹಳ್ಳ ಕಾವಲ್ ನಲ್ಲಿ  600 ಎಕರೆ ಪ್ರದೇಶದಲ್ಲಿ ಎಚ್ಎಎಲ್ ಈಗಾಗಲೇ ಹೆಲಿಕ್ಯಾಪ್ಟರ್ ನಿರ್ಮಾಣ ಘಟಕ ತಲೆಯೆತ್ತಿದ್ದು, ಲೈಟ್‌ ಕಾಂಬ್ಕಾಕ್ಟ್  ಏರ್ ಕ್ರಾಫ್ಟ್ ತಯಾರಿಸುವ ಘಟಕ ನಿರ್ಮಾಣಕ್ಕೆ ಹೆಚ್ಚುವರಿಯಾಗಿ  300 ಎಕರೆ ಪ್ರದೇಶಕ್ಕೆ ಕೋರಿಕೆ ಬಂದಿದೆ ಎಂಬ ಮಾಹಿತಿಗೆ ಸ್ಪಂದಿಸಿ ನನ್ನಗೆ ಇದು ಗೊತ್ತಿಲ್ಲ, ನಾವು 1000 ಎಕರೆ ಅರಣ್ಯ ಭೂಮಿಯನ್ನು ನೀಡಿ ಅರಣ್ಯಕ್ಕೆ ಬೇರೆ ಕಡೆ 2000 ಎಕರೆ ನೀಡುವ ಯೋಜನೆ ಇತ್ತು ಈಗ ಈ ರೀತಿ ಕೇಳಿರುವುದನ್ನು ಪರಿಶೀಲಿಸುತ್ತೇನೆ ಎಂದು ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಆಯುಷ್ಮನ್ ವೈದ್ಯರು ಬಾಡಿಗೆ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದು ಅವರು ಸ್ವಂತ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ತಾಲೂಕಿನಲ್ಲಿ 65 ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿ ಗುದ್ದಲಿ ಪೂಜೆ ಮಾಡಲಾಗುತ್ತದೆ. ಎಲ್ಲಿ ವೈದ್ಯರ ಸಮಸ್ಯೆ ಇದೆಯೋ ಅಲ್ಲಿ ಕುತ್ತಿಗೆ ಆಧಾರದ ಮೇಲೆ ಪಡೆದು ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.

ಪಟ್ಟಣದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು ಎರಡು ಕಡೆ ಚರಂಡಿ ನಿರ್ಮಾಣ ಮಾಡಲು ಆರು ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅನುದಾನ ಮಂಜೂರಾಗುತ್ತಿದ್ದಂತೆ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಓಂಕಾರ್, ಸದಾಶಿವಯ್ಯ ಈಶ್ವರಯ್ಯ, ಪಾಂಡುರಂಗಯ್ಯ, ಪ್ರಸಾದ್, ದಿವಾಕರ್, ಜಗದೀಶ್,  ಮಂಜುನಾಥ್,  ನರಸಿಂಹಮೂರ್ತಿ,  ಶಿವಣ್ಣ, ಶಿವಾನಂದ್, ಲಿಂಗರಾಜು, ನಾಗರಾಜು, ಮುಖಂಡರಾದ ನಿರಂಜನ್, ಶಿವನಂಜಯ್ಯ, ನಂಜೇಗೌಡ, ರಾಮಕೃಷ್ಣಪ್ಪ, ವತ್ಸಲ, ಹನುಂತರಾವ್, ಗುತ್ತಿಗೆದಾರರಾದ ಸುಪ್ರೀತ್, ಸಿದ್ದರಾಮಯ್ಯ, ಟಿ.ಹೆಚ್.ಉಮೇಶ್, ಟಿಹೆಚ್ಒ ಡಾ.ಬಿಂದು ಮಾಧವ್,  ಡಾ. ಸುಷ್ಮಾ , ಸಿಎಚ್ಒ ಪೋಲಿಸ್ ಪಾಟೀಲ್, ವಿ. ಜಯಲಕ್ಷ್ಮಿ, ಪಿಡಿಒ   ಪುಟ್ಟರಾಜ, ಶ್ಯಾಮಲ ಕೃಷಿ ಉತ್ಪನ್ನ ಮಾರುಕಟ್ಟೆಯ ಜಿಲ್ಲಾ ನಿರ್ದೇಶಕರಾದ ರಾಜಣ್ಣ, ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ, ಎಇ ಉಮೇಶ್, ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here