ಗುಬ್ಬಿ : ಗ್ರಾಹಕರ ಜೊತೆ ಸ್ನೇಹ ಭಾಂದವ್ಯ ಬೆಳೆಸಿಕೊಂಡು ವ್ಯವಹರಿಸಿದರೆ ಉತ್ತಮ ಸಾಧನೆ ಮಾಡಬಹುದು ಎಂದು ಬ್ಯಾಂಕ್ ವ್ಯವಸ್ಥಾಪಕ ಮಿಶ್ರಾ ತಿಳಿಸಿದರು.
ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕೃಷಿ ವಿಸ್ತರಣಾಧಿಕಾರಿ ವರ್ಗಾವಣೆಗೊಂಡ ಟಿ.ಎನ್ ಭರತ್ ರವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವರ್ಗಾವಣೆ ಎಂಬುದು ಉದ್ಯೋಗದ ಒಂದು ಭಾಗವಾದರೂ, ನಿಮ್ಮಂತಹ ಉತ್ತಮ ವ್ಯಕ್ತಿಯನ್ನು ಬೀಳ್ಕೊಡುವುದು ನಮಗೆ ಹೆಮ್ಮೆಯ ಜೊತೆಗೆ ಸಣ್ಣದೊಂದು ಬೇಸರವನ್ನು ತಂದಿದೆ. ಆದರೆ, ನಿಮ್ಮ ಶ್ರದ್ಧೆ, ಸಮಯ ಪ್ರಜ್ಞೆ, ಜ್ಞಾನ ಮತ್ತು ದಕ್ಷತೆ ಹೊಸ ಜಾಗದಲ್ಲಿಯೂ ಅಲ್ಲಿನ ಜನರಿಗೆ ದೊರಕಬೇಕು.
ಸೇವೆ ಎಲ್ಲಿಯೇ ಇರಲಿ, ಕರ್ತವ್ಯ ನಿಷ್ಠೆ ನಿಮ್ಮದಾಗಿರಲಿ. ನಿಮ್ಮ ಮುಂದಿನ ಪಯಣ ಯಶಸ್ಸಿನ ಶಿಖರ ಮುಟ್ಟಲಿ ಎಂದು ತಿಳಿಸಿದರು.
ವರ್ಗಾವಣೆಗೊಂಡ ಟಿ.ಎನ್ ಭರತ್ ಮಾತನಾಡಿ, ಇಷ್ಟು ದಿನಗಳ ಕಾಲ ಈ ಭಾಗದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನಾನು ಕೈಗೆತ್ತಿಕೊಂಡ ಪ್ರತಿಯೊಂದು ಕೆಲಸದಲ್ಲೂ ನಿಮ್ಮೆಲ್ಲರ ಬೆಂಬಲ ಸದಾ ಇತ್ತು. ಅದಕ್ಕಾಗಿ ನಾನು ನಿಮ್ಮೆಲ್ಲರಿಗೂ ಮನಃಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸ ಮತ್ತು ಮಮತೆ ನನ್ನ ಹೃದಯದಲ್ಲಿ ಸದಾ ಹಸಿರಾಗಿರುತ್ತದೆ. ಕೇವಲ ಅಧಿಕಾರಿಯಾಗಿ ಮಾತ್ರವಲ್ಲದೆ, ನಿಮ್ಮಲ್ಲಿ ಒಬ್ಬನಾಗಿ ನಾನು ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ. ಇಲ್ಲಿ ಕಳೆದ ಪ್ರತಿಯೊಂದು ಕ್ಷಣವೂ ನನ್ನ ವೃತ್ತಿಜೀವನದ ಅತ್ಯುತ್ತಮ ನೆನಪುಗಳಾಗಿ ಉಳಿಯಲಿವೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾ ಸಾಗರ್, ಸತ್ಯಜೀತ್, ಸೌರಭ, ಪ್ರತಿಭಾ, ನಿಖಿಲ ಸ್ವಯಂ ಸೇವಾ ಸಂಸ್ಥೆಯ ಸದಸ್ಯರು ಮತ್ತಿತರರು ಇದ್ದರು.





