ಗುಬ್ಬಿ :  ತಿಗಳ ಸಮಾಜದ ಯುವಕರು ಸಂಘಟಿತರಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಯಜಮಾನರಾದ  ರಂಗಸ್ವಾಮಯ್ಯ ತಿಳಿಸಿದರು.

ತಾಲ್ಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ  ಗ್ರಾಮದಲ್ಲಿ ಶ್ರೀ ಅಗ್ನಿಬನ್ನಿರಾಯಸ್ವಾಮಿ ಯುವಕರ ಸಂಘ ಹಾಗೂ ತಿಗಳ ಸಮಾಜದ ವತಿಯಿಂದ ಏರ್ಪಡಿಸಿದ್ದ ಅಗ್ನಿ ಬನ್ನಿರಾಯ ಸ್ವಾಮಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ತಿಗಳ ಸಮಾಜದ ಮೂಲಪುರುಷ ಶ್ರಮ ಸಂಸ್ಕೃತಿಯ ಸಂಕೇತವಾದ ಅಗ್ನಿ ಬನ್ನಿರಾಯ ಸ್ವಾಮೀ ಜಯಂತಿಯನ್ನು ಆಚರಿಸಲಾಗುತ್ತಿದೆ. ತಿಗಳರ ಸಮುದಾಯದ ಏಳಿಗೆಗೆ ಇತಿಹಾಸ ಮತ್ತು ಆಚಾರ ವಿಚಾರಗಳನ್ನು ಸ್ಮರಿಸುವ ಈ ದಿನವಾಗಿದ್ದು ಕೃಷಿ ಮಾಡಿ ಜೀವನ ನಡೆಸುವ ನಮ್ನ ಸಮಾಜವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ಮುಖಂಡ ಗಂಗಾಧರ್ ಮಾತನಾಡಿ, ಅಗ್ನಿವಂಶದ ಇತಿಹಾಸ ಪುರಾತನ ಸಂಪ್ರದಾಯಗಳನ್ನು ಇಂದಿಗೂ ನಮ್ಮ ಸಮುದಾಯ ಪಾಲಿಸಿಕೊಂಡು ಬರುತ್ತದೆ ಎಂದು ತಿಳಿಸಿದರು.

ಯಜಮಾನ್  ವೀರಪ್ಪ, ಅಣ್ ಕಾರ್ ನಾಗರಾಜಣ್ಣ, ಹನುಂತಣ್ಣ, ಸಣ್ಣಮರಿ, ಕೃಷ್ಣಮೂರ್ತಿ, ಮುದ್ರೆ ಹುಚಪ್ಪ, ದೊಡ್ಡೀರಪ್ಪ, ವೀರಭದ್ರಯ್ಯ, ರಂಗಸ್ವಾಮಣ್ಣ, ಪೂಜಾರ್ ವೀರಪ್ಪ, ಇತರರು ಇದ್ದರು.

LEAVE A REPLY

Please enter your comment!
Please enter your name here