
ಗುಬ್ಬಿ : ಗೋಸಲ ಶ್ರೀ ಚನ್ನಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘವು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಧಾರ್ಮಿಕವಾಗಿಯೂ ಕೂಡ ಸಾಕಷ್ಟು ಕೆಲಸ ಕಾರ್ಯವನ್ನು 11 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ ಎಂದು ನೂತನ ಅಧ್ಯಕ್ಷ ಹೊಸಹಳ್ಳಿ ಗಿರೀಶ್ ಹೇಳಿದರು.
ಪಟ್ಟಣದ ಗೋಸಲ ಚನ್ನಬಸವೇಶ್ವರ ಸ್ವಾಮಿ ತೇರುಬೀದಿಯಲ್ಲಿ ಇರುವ ಶ್ರೀ ಗೋಸಲ ಚನ್ನಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿದ ಅವರು, ಸುಮಾರು ಹನ್ನೊಂದು ವರ್ಷಗಳಿಂದ ಸುಮಾರು ರೂ.45 ಲಕ್ಷ ಲಾಭ ಬಂದಿದೆ. ಸಮಾಜಮುಖಿಯಾಗಿ ಕೆಲಸಗಳಾದ ಸರ್ಕಾರಿ ಶಾಲಾ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಲಾ ಬ್ಯಾಗ್ ಪುಸ್ತಕ ಸೇರಿದಂತೆ ಹಲವು ಅನುಕೂಲಗಳನ್ನು ಸಹ ಮಾಡಿಕೊಟ್ಟಿದೆ.

ಸಹಕಾರ ಸಂಘವನ್ನು ಕಟ್ಟುವ ಮುಂಚೆ ಸಾಕಷ್ಟು ಅಡೆತಡೆಗಳು ಸಮಸ್ಯೆಗಳು ಎದುರಾಗಿತ್ತು, ಅವೆಲ್ಲವನ್ನು ಮೀರಿ ಇಂದು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸಾಕಷ್ಟು ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಆರ್ಥಿಕವಾಗಿ ಕೂಡ ಅಭಿವೃದ್ಧಿಯತ್ತ ಸಾಗಿದೆ. ಇನ್ನೂ ಹೊರ ರಾಜ್ಯಗಳಿಂದ ಆಗಮಿಸುವಂತಹ ಫೈನಾನ್ಸ್ ಕಂಪನಿಗಳು ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಅತ್ಯಂತ ಹೆಚ್ಚು ಬಡ್ಡಿ ತೆಗೆದುಕೊಳ್ಳುತ್ತಿದ್ದರು ಅಂತಹವರನ್ನು ಸಾಕಷ್ಟು ಕಡಿಮೆ ಮಾಡಿ ನಮ್ಮ ಸಹಕಾರ ಸಂಘದ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ,ರೈತರಿಗೆ ಆರ್ಥಿಕವಾಗಿ ಹಿಂದುಳಿದವರ್ಗಗಳಿಗೂ ಹೆಚ್ಚಿನ ರೀತಿಯ ಸಹಕಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನೂತನ ಉಪಾಧ್ಯಕ್ಷರಾದ ಶೃತಿ ಮಾತನಾಡಿ ಸಹಕಾರ ಸಂಘದಲ್ಲಿ ಮಹಿಳೆಯರು ಕೂಡ ಬಹಳ ಮುಖ್ಯ ಎಂದು ಭಾವಿಸಿ ನಮ್ಮ ನಿರ್ದೇಶಕರುಗಳು ಮಹಿಳೆಯನ್ನು ಆಯ್ಕೆ ಮಾಡಿದ್ದಾರೆ ಮುಂದಿನ ದಿನದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಒಂದಿಷ್ಟು ಕೆಲಸ ಕಾರ್ಯಗಳನ್ನು ಈ ವರ್ಷದಿಂದ ಮಾಡಬೇಕು ಎಂಬ ಯೋಜನೆಯನ್ನು ಸಹ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ನಿರ್ದೇಶಕರಾದ ರಾಜ್ ಕುಮಾರ್, ಸತೀಶ್ ಆರ್ ಡಿ, ಸುರೇಶ್ ಎಂ ಡಿ, ರುದ್ರೇಶ್ ಎಂ ಜೆ, ಸಂಪತ್ ಆರ್, ಶ್ವೇತಾ.ಆರ್, ಧರಣೇಶ್, ಮಂಜುನಾಥ್ ಜೆ ಸಿ ಇದ್ದರು. ಚುನಾವಣಾ ಅಧಿಕಾರಿಯಾಗಿ ಶ್ರೀನಿವಾಸ್ ಡಿ ಎಚ್ ನಡೆಸಿ ಕೊಟ್ಟರು ಸಂಘದ ಸಿಇಓ ಪದಾಧಿಕಾರಿಗಳು ಹಾಜರಿದ್ದರು.





