ಗುಬ್ಬಿ:  ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ಬಸ್ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು  ಕೆ.ಎಸ್.ಆರ್.ಟಿ.ಸಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಎಸ್.ಆರ್ ಶ್ರೀನಿವಾಸ್‌ ತಿಳಿಸಿದರು.

ತಾಲ್ಲೂಕಿನ ದೊಡ್ಡೇರಿಕಟ್ಟೆ, ನಲ್ಲೂರು, ವಾಲ್ಮೀಕಿ ಬಡವಣೆ, ಮಳೇನಹಳ್ಳಿ ಗ್ರಾಮದ ಗ್ರಾಮಗಳಲ್ಲಿ ಕಾವೇರಿ ನೀರಾವರಿ ನಿಗಮ, ಎತ್ತಿನ ಹೊಳೆ ಯೋಜನೆಯಡಿಯಲ್ಲಿ  ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಲನೆ ನೀಡಿ ಮಾತನಾಡಿದ ಅವರು  ಡೀಸೆಲ್‌ ಬೆಲೆಯು ತಾತ್ಕಾಲಿಕವಾಗಿ 22 ರೂ ಹೆಚ್ಚಾಗಿದ್ದರೂ ಸಹ ಸದ್ಯಕ್ಕೆ ಬಸ್‌ ಪ್ರಯಾಣ ದರದಲ್ಲಿ ಯವುದೇ ಬದಲವಣೆ ಇರುವುದಿಲ್ಲ. ಮುಂದೆ ಇದು ಸರಿಹೋಗುತ್ತದೆ ಕಾದು ತೀರ್ಮಾನ ತೆಗೆದುಕೊಳ್ಳಬೇಕು.

 ಗುಬ್ಬಿ ಪಟ್ಟಣದಲ್ಲಿ ಇರುವ ಗುಬ್ಬಿ ವೀರಣ್ಣ ರಂಗಮಂದಿರವು  ಟ್ರಸ್ಟ್ ಅಡಿಯಲ್ಲಿ ನಡೆಸುತ್ತಿದ್ದಾರೆ. ಇವರು  ಬೇರೆಯವರಿಗೆ ರಂಗಚಟುವಟಿಕೆ ಮಾಡಲು ಕೊಡುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದೇನೆ. ಅಲ್ಲಿಂದ ಉತ್ತರ ಬಂದ ತಕ್ಷಣ ತಹಸೀಲ್ದಾರ್ ರವರ ಸುಪರ್ದಿಗೆ ಕೊಡಿಸುತ್ತೇನೆ ಎಂದು ತಿಳಿಸಿದರು.

ಪಟ್ಟಣದಲ್ಲಿ ಆಟದ ಮೈದಾನಕ್ಕೆ 4 ಕೋಟಿ ಹಣ ಮಂಜೂರು ಮಾಡಿ ನಕ್ಷೆ ತಯಾರಿಸಲು ಹೋದಾಗ ಆಟದ ಮೈದಾನವು ಕ್ರೀಡಾ ಇಲಾಖೆ ಅಥವಾ ಪಟ್ಟಣ ಪಂಚಾಯಿತಿ ಅಧೀನದಲ್ಲಿ ಇಲ್ಲದ ಕಾರಣ ಅಲ್ಲಿಗೆ ಕೈ ಬಿಟ್ಟು,  ಆಟದ ಮೈದಾನ ಬೇರೆ ಬೇರೆಯವರ ಹೆಸರಿನಲ್ಲಿ ಇರುವುದರಿಂದ ಅದನ್ನು ಕೋರ್ಟ್‌ಗೆ ಹಾಕಲಾಗಿದೆ. ಕೋರ್ಟ್‌ ತೀರ್ಮಾನ ಬಂದ ನಂತರ ಸುಮಾರು ಐದು ಕೋಟಿ ಬಿಡುಗಡೆ ಮಾಡಿ ವಿವಿಧ ಕ್ರೀಡಾ ಚಟುವಟಿಕೆಗಳು ಇಲ್ಲೇ ನಡೆಯುವಂತೆ ಮಾಡಿಸುತ್ತೇನೆ.

ಸಮಾಜ ಕಲ್ಯಾಣ ಇಲಾಖೆಯ ಪಾವಗಡದ  ಸಹಾಯಕ ನಿರ್ದೇಶಕ ಡೆತ್‌ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅದನ್ನು ಪರಿಶೀಲನೆ ನಡೆಸಿದಾಗ ಸರಿಯಾಗಿದ್ದರೆ  ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಪ್ರಸನ್ನ, ಲಿಂಗರಾಜು, ಸಿದ್ದಪ್ಪರಾಜು  ಗುರುಬಸವಣ್ಣ, ಜಗದೀಶ್, ಕಾಂತರಾಜು,  ಸುಜಾತ, ಶೃತಿ, ತಾರಾಸಿದ್ದರಾಜ, ಕೃಷ್ಣಪ್ಪ, ಮೈಲಾರಯ್ಯ, ಹೇಮಂತ್, ನಟರಾಜು,  ವತ್ಸಲರಾಜಣ್ಣ, ಪಿಡಿಓ ಯುವರಾಜು, ಎಇಇ ಸುರೇಶ್,ಇಂಜಿನಿಯರ್ ಪಲ್ಲವಿ, ಗುತ್ತಿಗೆದಾರ ಸಂದೀಪ್, ಸಿದ್ದರಾಜು, ಗುರುಲಿಂಗಯ್ಯ ಇತರರು ಇದ್ದರು.

LEAVE A REPLY

Please enter your comment!
Please enter your name here