ತುಮಕೂರು:  ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ಆಗಾಗ ನಡೆಯುತ್ತಲೆ ಇದೆ. ಇದರ ನಡುವೆ ರಾಜಕಾರಣಿಗಳು ಔತಣ ಕೂಟ ಹೆಸರಲ್ಲಿ ಅಲ್ಲಲ್ಲಿ ಸೇರುತ್ತಿರುವುದು ಹೆಚ್ಚು ಸುದ್ದಿಯಾಗ್ತಿದೆ. ಇತ್ತೀಚೆಗೆ ಮಾಗಡಿ ಶಾಸಕ ಬಾಲಕೃಷ್ಣ ಅವರ ಔತಣ ಕೂಟದ್ದೆ ಚರ್ಚೆ ಜೋರಾಗಿದೆ. ಮಾದ್ಯಮಗಳು ಇದೇ ವಿಚಾರ ಇಟ್ಕೊಂಡು ಆಡಳಿತ ಪಕ್ಷದ ಶಾಸಕರುಗಳು, ಸಚಿವರುಗಳಿಗೆ ಸಿಕ್ಕಸಿಕ್ಕಲೆಲ್ಲ ನೀವು ಔತಣ ಕೂಟಕ್ಕೆ ಹೋಗಿಲ್ವಾ ಎಂದು ಪ್ರಶ್ನೆ ಕೇಳ್ತಿವೆ…ಇದೇ ರೀತಿ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರಿಗೂ ಮಾಧ್ಯಮಗಳು ಕೇಳಿದ್ದಕ್ಕೆ ರಾಜಣ್ಣ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.

ತುಮಕೂರಿನ ಕಾಂಗ್ರೇಸ್ ನ ಮಾಜಿ ಶಾಸಕ ರಫೀಕ್ ಅಹಮದ್ ನೇತೃತ್ವದಲ್ಲಿ ನಡೆದ ಇಫ್ತಿಯಾರ್ ಕೂಟದಲ್ಲಿ‌ ಮಾಜಿ ಸಚಿವ ಕೆ ಎನ್ ರಾಜಣ್ಣ  ಪಾಲ್ಗೊಂಡಿದ್ರು. ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು ಡಿನ್ನರ್ ಮೀಟಿಂಗ್ ಗೆ ನನ್ನ ಕರೆದಿಲ್ಲ,  ಕರೆದಿದ್ರೆ ಹೋಗ್ತಿದ್ದೆ, ಊಟಕ್ಕೆ ಕರೆದರೆ ಹೋಗಲು ಏನಂತೆ ಎಂದರು. ಡಿಕೆ ಬೆಂಬಲಿಗರಿಗೆ ಮಾತ್ರ ಕರೆದಿದ್ರಾ ಎಂದು ಕೇಳಿದ್ದಕ್ಕೆ, ಪಾವಗಡ ಎಂಎಲ್ಎ ವೆಂಕಟೇಶ್ ಕೂಡ ಹೋಗಿದಾರೆ, ಅವರೇನು ಡಿಕೆ ಶಿವಕುಮಾರ್ ಬೆಂಬಲಿಗನಾ..? ಪಾವಗಡ ವೆಂಕಟೇಶ್ ಇಲ್ವೇನ್ರಿ ನಾಲ್ಕನೇ ಸೀರಿಯಲ್ ನಂಬರ್ ಎಂದರು, ಅವರು ನಿಮ್ಮನ್ನು ಬಿಟ್ಟು ಹೋಗಿದ್ರೇನೋ ಸಾರ್ ಅಂದ್ರೆ ನಮ್ಮನ್ನ ಯಾರು ಬಿಟ್ಟುಹೋಗಲ್ಲ, ಎಲ್ಲರೂ ಒಟ್ಟಿಗೆ ಇದ್ದೇವೆ, 138 ಜನ ಕಾಂಗ್ರೆಸ್ ಎಂಎಲ್‌ಎ ಗಳು ಎಲ್ಲರೂ ಒಂದೇನೆ, ಸುಮ್ನೆ ಎಲ್ಲರಿಗೂ ಒಂದು ಊಟ ಹಾಕೋಣಾ, ಅರ್ಧ ಗಂಟೆ ಇಸ್ಪೀಟು ಆಡೋಣ ಅಂತ ಕರೆದ್ರೆ ಹೋಗ್ತಾರೆ ಅಷ್ಟೇ ಅಂದ್ರು…

ಮುಂದಿನ ಬಾರಿ ಕಾಂಗ್ರೆಸ್ ಬರಲ್ಲ ಎಂಬ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಮಾತನಾಡಿ
ಬಾಲಕೃಷ್ಣ ಹೇಳಿರುವುದು ಅವರ ಕ್ಷೇತ್ರದಲ್ಲಿ ಇರಬಹುದು. ನಾವೆಲ್ಲ ಗೆಲ್ಲಲ್ವಾ..? 224 ರಲ್ಲಿ 138 ಜನ ಕಾಂಗ್ರೆಸ್ ಶಾಸಕರಿದ್ದೇವೆ, ಬಾಕಿ ಇನ್ನು 90 ಜನ ಸೋತಿರುವವರು ಇದ್ದಾರೆ. ಅದರಲ್ಲಿ ಸೋತಿರುವವರು ಕೆಲವರು ಗೆಲ್ತಾರೆ, ಗೆದ್ದಿರುವವರು ಕೆಲವರು ಸೋಲ್ತಾರೆ..ಇದು ರಾಜಕೀಯದಲ್ಲಿ ನಡೆಯುವಂತ ಪ್ರಕ್ರಿಯೆ.ಕಾಂಗ್ರೆಸ್ ಪಕ್ಷ ಸದೃಡವಾಗಿದೆ ಮುಂದಿನ ಬಾರಿ ನಾವೇ ಗೆಲ್ತಿವಿ.

ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ ಈಗಾಗಲೆ ಎಲ್ಲಾ ಹೇಳಿದ್ದೇನೆ, ಡೆಲ್ಲಿಗೆ ಹೋದ ಸಂಧರ್ಭದಲ್ಲಿ ನಮ್ಮ ಹಿರಿಯರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದೇನೆ. ಕರ್ನಾಟಕದಲ್ಲಿರುವ ಗೊಂದಲ ಏನಿದೆ ಇದರಿಂದ ಸರ್ಕಾರಕ್ಕೆ ಧಕ್ಕೆಯಾಗ್ತದೆ. ಗೌರವಕ್ಕೆ ಚ್ಯುತಿಯಾಗ್ತದೆ.  ಪಕ್ಷಕ್ಕು ಚ್ಯುತಿಯಾಗುತ್ತದೆ, ಈ ಗೊಂದಲವನ್ನು ನೀವು ನಿವಾರಣೆ ಮಾಡಬೇಕು ಎಂದು ನಾನು ಒತ್ತಾಯ ಪೂರಕವಾಗಿ ಮನವಿ ಮಾಡಿದ್ದೇನೆ ಎಂದರು.

LEAVE A REPLY

Please enter your comment!
Please enter your name here