
ಗುಬ್ಬಿ : ಕಾಡುಗೊಲ್ಲ ಜನಾಂಗದವರನ್ನು ಎಸ್ ಟಿ ಮೀಸಲಾತಿಗೆ ಸೇರಿಸಬೇಕೆಂದು ಮೂರು ದಶ ದಶಕಗಳ ಕಾಲ ಹೋರಾಟ ಮಾಡಿದ್ದೇವೆ ಆದರೆ ಇದುವರೆಗೂ ನಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸಲಿಲ್ಲ ಎಂದು ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮಿಗಳು ತಿಳಿಸಿದರು.
ಗುಬ್ಬಿ ಪಟ್ಟಣದ ಹಿಂದೂ ಸಮಿತಿ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕಾಡುಗೊಲ್ಲ ಸಮುದಾಯಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕಾಡುಗೋಲ್ಲ ಸಮುದಾಯವನ್ನು ಎಸ್ ಟಿ ಗೆ ಸೇರಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಅದು ಇದುವರೆಗೂ ಕೂಡ ಈಡೇರಿಲ್ಲ ನಮ್ಮ ಸಮುದಾಯವನ್ನು ಚುನಾವಣೆ ಸಂದರ್ಭದಲ್ಲಿ ಬಳಸಿಕೊಂಡು ಮತ ಹಾಕಿಸಿಕೊಂಡು ಚುನಾವಣೆಯಲ್ಲಿ ಗೆದ್ದ ಮೇಲೆ ನಮ್ಮ ಕಡೆ ತಿರುಗಿ ಕೂಡ ಸರ್ಕಾರಗಳು ನೋಡುತ್ತಿಲ್ಲ ಸುಮಾರು ವರ್ಷದಿಂದಲೂ ಕಾಡುಗೊಲ್ಲರನ್ನ ಎಸ್ ಟಿ ಮೀಸಲಾತಿಗೆ ಸೇರಿಸಬೇಕೆಂದು ಒತ್ತಾಯ ಮಾಡುತ್ತಿದ್ದೇವೆ ಹಾಗೂ ಪ್ರತಿಭಟನೆ ಕೂಡ ಮಾಡಿದ್ದೇವೆ ಆದರೆ ಸರ್ಕಾರ ಇದುವರೆಗೂ ಕೂಡ ನಮ್ಮ ಕಡೆ ಗಮನಹರಿಸಿಲ್ಲ ಆದ್ದರಿಂದ ಬಿಎಲ್ ಸಂತೋಷ್ ಅವರು ಕೂಡಲೇ ನಮ್ಮ ಸಮುದಾಯವನ್ನು ಎಸ್ ಟಿ ಮೀಸಲಾತಿಗೆ ಸೇರಿಸಬೇಕೆಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ಕಾಡುಗೊಲ್ಲ ಮುಖಂಡರಾದ ದೊಡ್ಡಯ್ಯ , ಶಿವಣ್ಣ ,ನಾಗರಾಜು , ಸತೀಶ್ , ತಿಮ್ಮಪ್ಪನಹಟ್ಟಿ ತಿಮ್ಮಯ್ಯ ಭಾಗವಹಿಸಿದ್ದರು.





