ಗುಬ್ಬಿ: ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಜನಪ್ರತಿನಿದಿಗಳು ಒಂದಾದರೆ ಹೆಚ್ಚು ಅಭಿವೃದ್ಧಿಯನ್ನು  ಕಾಣಬಹುದು  ಎಂಬುದನ್ನು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತೋರಿಸಿದ್ದಾರೆ ಎಂದು ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ತಿಳಿಸಿದರು.

 ಪಟ್ಟಣದ ಲಯನ್ಸ್ ಸಂಸ್ಥೆಯ ಕಚೇರಿ ಆವರಣದಲ್ಲಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ,ಲಯನ್ಸ್ ಕ್ಲಬ್, ಗುಬ್ಬಿ ಇವರ ಆಶಯದಲ್ಲಿ ಏರ್ಪಡಿಸಿದ್ದ ಗುಬ್ಬಿ ಲಯನ್ಸ್ ಕ್ಲಬ್ ಸರ್ವೀಸ್ ಟ್ರಸ್ಟ್(ರಿ.)  ನೂತನ ಕಛೇರಿ ಉದ್ಘಾಟನೆ, ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ನೂತನ ಉಚಿತ ಮುಕ್ತಿವಾಹನ ಲೋಕಾರ್ಪಣೆ ಮತ್ತು ಲಯನ್ಸ್ ಕ್ಲಬ್ ಪಕ್ಕದ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗೆ ಭೂಮಿಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಅತಿ ವೇಗವಾಗಿ ಬೆಳೆಯುತ್ತಿದ್ದು ಮುಂದಿನ ಹತ್ತು ವರ್ಷದಲ್ಲಿ ಗುಬ್ಬಿ ತುಮಕೂರು ಎರಡು ಒಂದಾಗಿ ಒಂದೇ ನಾಣ್ಯದ ಎರಡು ಮುಖಗಳಾಗುವುದರಲ್ಲಿ ಸಂಶಯವಿಲ್ಲ.

ಗುಬ್ಬಿ ಅತಿ ವೇಗವಾಗಿ ಬೆಳೆಯುತ್ತಿರುವುದರಿಂದ ಗುಬ್ಬಿಯ ಸುತ್ತಮುತ್ತ ರೈತರು ಯಾವುದೇ ಕಾರಣಕ್ಕೂ ತಮ್ಮ  ಜಮೀನುಗಳನ್ನು ಮಾರಾಟ ಮಾಡಬೇಡಿ. ಮುಂದೊಂದು ದಿನ ಉತ್ತಮ ಬೆಲೆ ಸಿಗುತ್ತದೆ.

ಈ ಭಾಗದ ಜನತೆ ನನಗೆ ಮತನೀಡಿ  ಗೆಲ್ಲಿಸಿರುವುದರಿಂದ ನಾನು ಅವರ ಋಣ ತೀರಿಸಲು ಪ್ರಮುಖವಾಗಿ ರಸ್ತೆಯ ಅಭಿವೃದ್ಧಿ ಹಾಗೂ ರೈಲ್ವೆ ಅಭಿವೃದ್ಧಿಯ ಕಾಮಗಾರಿಗಳಿಗೆ ಹೆಚ್ಚು ಅನುದಾನತಂದು ಕಾಮಗಾರಿಗಳನ್ನು ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ  ಸರ್ಕಾರದ ನರೇಂದ್ರ ಮೋದಿ ಅವರ ಅನುದಾನದಿಂದ ಗುಬ್ಬಿಗೆ 35 ಕೋಟಿ, ಕೆ.ಬಿ.ಕ್ರಾಸ್ ಗೆ 45 ಕೋಟಿ ಹಾಗೂ ತುಮಕೂರು ನಗರಕ್ಕೆ 85 ಕೋಟಿ ರೂಗಳು ಒಟ್ಟು 165 ಕೋಟಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.

ಲಯನ್ಸ್ ಸಂಸ್ಥೆಯ ಜಿಲ್ಲೆಯ2ನೇ ಉಪರಾಜ್ಯಪಾಲರಾದ ಡಾ.ಜಿ.ಶಶಿಧರ್ ಗಂಜಿಗಟ್ಟಿ ಮಾತನಾಡಿ, 43 ವರ್ಷದಿಂದ ಗುಬ್ಬಿ ಲಯನ್ಸ್ ಕ್ಲಬ್ ಉತ್ತಮ ಕೆಲಸ ಮಾಡಿಕೊಂಡು ಉತ್ತಮ ಸೇವೆ ಮಾಡಿ ಸಾಮಾಜಿಕ ಕಾರ್ಯಕ್ರಮ ಮಾಡಿಕೊಂಡು ಜನಮನ್ನಣೆ ಗಳಿಸಿದೆ.  ಮುಕ್ತಿ ವಾಹನವನ್ನು ಸಮಾಜಕ್ಕೆ ಲೋಕಾರ್ಪಣೆ ಮಾಡುವ ಮೂಲಕ ಪವಿತ್ರವಾದ ಕಾರ್ಯ ಮಾಡಿದೆ ಎಂದರು.

ಲಯನ್ಸ್ ಮಹಿಳಾ ಎಂಪವರ್ ಮೆಂಟ್ ಜಿಲ್ಲಾ ಛೇರ್ಮನ್ ಗಾಯತ್ರಿಗಿರೀಶ್ ಮಾತನಾಡಿ, ಮನುಷ್ಯ ಸಂಘ ಜೀವಿ ಆದ್ದರಿಂದ ಪ್ರತಿಯೊಬ್ಬರೂ ಬದುಕಿನಲ್ಲಿ  ಇರುವೆಯನ್ನು  ನೋಡಿ ಬದುಕುವುದನ್ನು  ಕಲಿತುಕೊಳ್ಳಬೇಕು. ಇರುವೆಯಿಂದ ನಮಗೆ ಒಗ್ಗಟ್ಟಿನ ಪಾಠ ಬರುತ್ತದೆ. ತಾವುಗಳು ಇರುವೆಯ ಆದರ್ಶಗಳನ್ನ ನೋಡಿ ಪಾಲಿಸಬೇಕು.  ಸಾವು ಯಾರನ್ನು ಕೇಳಿ ಬರುವುದಿಲ್ಲ ಅದ್ದರಿಂದ ಗುಬ್ಬಿ ಲಯನ್ಸ್ ಸಂಸ್ಥೆಗೆ ಮುಕ್ತಿ ವಾಹನವನ್ನು ನೀಡಿರುವಂತಹ ದಾನಿಗಳಿಗೆ ಋಣಿಯಾಗಿರಬೇಕು ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎಸ್. ಕುಮಾರಸ್ವಾಮಿ ಮಾತನಾಡಿ,  ಲಯನ್ಸ್ ಸಂಸ್ಥೆಯು ಸುಮಾರು 43 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಸೇವೆಗಳನ್ನ ಮಾಡಿಕೊಂಡು ಬಂದಿದ್ದು, ಇಂದು ಲಯನ್ಸ್ ಕ್ಲಬ್ ವತಿಯಿಂದ ಮುಕ್ತಿ ವಾಹನ ಲೋಕಾರ್ಪಣೆ ಹಾಗೂ ಸಾರ್ವಜನಿಕರ ಉದ್ಯಾನವನ ಅಭಿವೃದ್ಧಿಗೆ ಭೂಮಿ ಪೂಜೆಯನ್ನು ಮಾಡಿಲಾಗಿದೆ. ಮುಂದಿನ ದಿನದಲ್ಲಿ ಇನ್ನೂ ಹೆಚ್ಚು ಸಾಮಾಜಿಕ ಚಟುವಟಿಕೆಗಳನ್ನು  ಎಲ್ಲಾ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳ ಸಹಕಾರದಿಂದ ಮಾಡುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಕಾಶಿಪತಿ ರಾಮಚಂದ್ರ ಕುಟುಂಬದವರ ವತಿಯಿಂದ ಲಯನ್ಸ್ ಸಂಸ್ಥೆಗೆ ಉಚಿತ ಮುಕ್ತಿ ವಾಹನ  ದಾನ ನೀಡಿದರು.

ವೇದಿಕೆ ಕಾರ್ಯಕ್ರಮವನ್ನು ಶಾಸಕ ಎಸ್. ಆರ್. ಶ್ರೀನಿವಾಸ್  ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಛೇರ್ಮನ್ ಕೆ.ಆರ್. ಅಶೋಕ್ ಕುಮಾರ್, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಎಲ್.ವಿ.ಸಾವಂತ್, ಜಿ.ಆರ್. ಶಿವಕುಮಾರ್, ರಮೇಶ್‌ ಬಾಬು, ವಿವೇಕಾನಂದಸ್ವಾಮಿ.ಎಲ್., ಬಸವರಾಜು.ವಿ., ನಿವೃತ್ತ ಪ್ರಾಂಶುಪಾಲ ಜಿ.ಬಿ.ಮಲ್ಲಪ್ಪ, ಪಿ.ಎಸ್. ಸುರೇಶ್‌ಬಾಬು, ಹೊಸಹಳ್ಳಿ ಗಿರೀಶ್, ಉಂಡೆ ರಾಮಣ್ಣ, ಸಿದ್ದರಾಜು ಬಿ ಗಜ್ಜರಿ, ಡಿ.ಆರ್.ಕೀರ್ತಿರಾಜ್, ಎಸ್.ಎಸ್.ರೇಣುಕಪ್ಪ, ಪ್ರೇಮಲೀಲಾ, ರಜನಿಸುರೇಶ್, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಚನ್ನಬಸವಯ್ಯ, ಪ್ರಸಾದ್ ನರಸಿಂಹರಾಜು, ರಮೇಶ್, ಪದ್ಮಕುಮಾರದಸ್ವಾಮಿ, ಎಲ್.ಕರೇಗೌಡ, ಲಕ್ಷ್ಮೀನಾರಾಯಣ್, ಜಯದೇವ್ ಕುಮಾರ್, ರಂಗಪ್ರಸಾದ್ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here