
ಗುಬ್ಬಿ : ನಾಟಕರತ್ನ ಗುಬ್ಬಿ ವೀರಣ್ಣನವರ ಸ್ಥಳದಲ್ಲಿ ನಿರಂತರವಾಗಿ ಪೌರಾಣಿಕ ನಾಟಕಗಳು ನಡೆಯುತ್ತಿರುವುದರಿಂದ ಗುಬ್ಬಿಯು ನಾಟಕಗಳ ತವರು ಎಂದು ಶಿರಾ ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರಾದ ಕೆ.ಆರ್.ಶಿವಾನಂದ ತಿಳಿಸಿದರು.
ಪಟ್ಟಣದ ಶ್ರೀ ಗೋಸೂಲ ಚನ್ನಬಸವೇಶ್ವರ ದ್ವಾರಬಾಗಿಲು ಬಿ.ಹೆಚ್.ರಸ್ತೆ ಪಕ್ಕದಲ್ಲಿ ಪ್ರಥಮ ಬಾರಿಗೆ ನಾಟಕರತ್ನ ಡಾ.ಗುಬ್ಬಿ ವೀರಣ್ಣ ಕಲಾವೇದಿಕೆ, ಶ್ರೀ ಬಿದ್ದಾಆಂಜನೇಯ ಕಲಾಬಳಗ ಗುಬ್ಬಿ ಇವರ ಆಶ್ರಯದಲ್ಲಿ ಏಳು ದಿನಗಳ ಕಾಲ ಏರ್ಪಡಿಸಿದ್ದ ಪೌರಾಣಿಕ ಹಗಲು ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಶ್ರೀ ಬಿದ್ದಾಆಂಜನೇಯ ಕಲಾಬಳಗ ಮಾಡಿದೆ. ಕಲಾ ಪ್ರೋತ್ಸಾಹಕರು, ಕಲಾವಿದರು ಆಗಮಿಸಿ ನಾಟಕಗಳನ್ನು ನೋಡಬೇಕು.
ಪೌರಾಣಿಕ ನಾಟಕಗಳು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗಿಸುವುದು ನಾಟಕೋತ್ಸವದ ಪ್ರಮುಖ ಉದ್ದೇಶವಾಗಿದೆ ಎಂದರು. ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ನಮ್ಮನ್ನು ಕರೆದೊಯ್ಯುವ ಈ ರಂಗಭೂಮಿಯ ಮೇಲೆ ಇಂದು ಕುರುಕ್ಷೇತ್ರ ನಾಟಕ ಪ್ರದರ್ಶನಗೊಳ್ಳುತ್ತಿದೆ ಎಂದರು.

ನಾಟಕೋತ್ಸವದಲ್ಲಿ ನಾಟಕ ಆಯೋಜಕರಾದ ಶ್ರೀ ಬಿದ್ದಆಂಜನೇಯ ಕಲಾಬಳಗದ ಗೌರವಾಧ್ಯಕ್ಷ ಬಿ.ಕೆ.ಕುಮಾರಸ್ವಾಮಿ, ಸಿ.ಸುರೇಶ್,ಡಿ.ಕೆ.ರಾಮಕೃಷ್ಣಯ್ಯ, ರವಿಕುಮಾರ್, ಕಲಾವಿದರಾದ ಕೋರ ಕುಮಾರಣ್ಣ, ಕಾಂತರಾಜು ಅಬ್ಬಕನಹಳ್ಳಿ, ಮಂಜುನಾಥ್, ಶ್ರೀ ಚನ್ನಬಸವೇಶ್ವರಸ್ವಾಮಿ ಕಲಾ ಸಂಘದ ಅಧ್ಯಕ್ಷ ನಟರಾಜು, ಡಿ.ಸಿ.ರಮೇಶ್ ಕೋಡಿಪಾಳ್ಯ, ನರಸಿಂಹಮೂರ್ತಿ ಸಿಂಗೋನಹಳ್ಳಿ, ಹಾರ್ಮೋನಿಯಂ ಮಾಸ್ಟರ್ ಲಿಂಗರಾಜು, ಶ್ರೀನಿವಾಸ್,ಜಗದೀಶ್,ಇತರರು ಇದ್ದರು.






