ಗುಬ್ಬಿ ತಾಲೂಕಿನ ಅಳಿಲು ಘಟ್ಟ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಗ್ರಾಮದ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮುಂಜಾನೆಯಿಂದಲೇ ಶ್ರೀ ಸ್ವಾಮಿಗೆ ವಿಶೇಷ ಪೂಜೆ ಪಂಚಾಮೃತ ಅಭಿಷೇಕ ನಂತರ ಶ್ರೀ ವೆಂಕಟರಮಣ ಸ್ವಾಮಿಯ ದೇವರ ಉತ್ಸವವನ್ನು ಪ್ರಮುಖ ಬೀದಿಯಲ್ಲಿ ನೆರವೇರಿಸಿ ನಂತರ ಸಪ್ತದ್ವಾರದಲ್ಲಿ ಪ್ರತಿಷ್ಠಾಪಿಸಿದ ನಂತರ ಭಕ್ತರಿಗೆ ದರ್ಶನಕ್ಕೆ ಬಿಡಲಾಯಿತು.
ಈ ದೇವಾಲಯಕ್ಕೆ ತಾಲೂಕು ಹಾಗೂ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದರ್ಶನ ದರ್ಶನ ಪಡೆದು ತಮ್ಮ ಹರಿಕೆಯನ್ನು ಅರ್ಪಿಸಿದರು. ಬಂದ ಭಕ್ತಾದಿಗಳಿಗೆ ಲಾಡು ಪ್ರಸಾದ ಹಾಗೂ ಇನ್ನಿತರೆ ಪಕ್ಷಗಳನ್ನು ನೀಡಿದರು.
ಗುಬ್ಬಿ ತಾಲೂಕು ಅಳಿಲು ಘಟ್ಟ ಗ್ರಾಮದ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಶ್ರೀ ವೆಂಕಟರಮಣ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಯಿತು.

ಗುಬ್ಬಿ ತಾಲೂಕಿನ ಶಾಸಕ ಎಸ್ಸೆ ಶ್ರೀನಿವಾಸ್ ಮುಖಂಡರುಗಳಾದ ಬಿ ಎಸ್ ನಾಗರಾಜು ಕಳ್ಳಿಪಾಳ್ಯ ಲೋಕೇಶ್, ಸುರೇಶ್ ಗೌಡ, ಯೋಗಾನಂದ, ದೇವಸ್ಥಾನ ಸಮಿತಿಯ ಸದಸ್ಯ ಅ.ನಾ.ಲಿಂಗಪ್ಪ. ಪುಟ್ಟರಾಜು, ಪ್ರಧಾನ ಅರ್ಚಕರು,ಭಕ್ತರು , ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here