ಗುಬ್ಬಿ:  ವೈಕುಂಠ ಏಕಾದಶಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು ತಾಲೂಕಿನ ಮೂಗನಾಯಕನ ಕೋಟೆ, ಅಳಿಲುಘಟ್ಟ, ಕಡಬ, ಕಲ್ಲೂರು, ಹೊಸಕೆರೆ, ಹೂವಿನ ಕಟ್ಟೆ, ಬಿದರೆ, ಧೂಳನಹಳ್ಳಿ, ಗುಬ್ಬಿ, ಲಕ್ಕೇನಹಳ್ಳಿ ಮೊದಲಾದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಹಾಗೂ ಕನ್ನಿಕಾ ಪರಮೇಶ್ವರಿ ದೇವಾಲಯ ಸ್ವಾಮಿಯವರಿಗೆ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

 ಬೆಳಗಿನ ಜಾವದಿಂದಲೇ ಸಾವಿರಾರು ಭಕ್ತಾದಿಗಳು ದೇವಾಲಯದಲ್ಲಿ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.ಮುಂಜಾನೆ ನಾಲ್ಕು ಗಂಟೆಯಿಂದಲೇ ದೇವಾಲಯಗಳಲ್ಲಿ  ಸ್ವಾಮಿಗೆ ಅಭಿಷೇಕ,  ಪಂಚಾಮೃತ ಅಭಿಷೇಕ , ಸುಪ್ರಭಾತ ಸೇವೆ ಪ್ರಕಾರೋತ್ಸವ ಉಯ್ಯಾಲೆ ಉತ್ಸವ ನಡೆಯಿತು.

ಗುಬ್ಬಿ ತಾಲ್ಲೂಕಿನ ಎಂಎನ್ ಕೋಟೆಯಲ್ಲಿ ಭಕ್ತಾದಿಗಳಿಗೆ ಬೆಳಿಗ್ಗೆ ಆರು ಗಂಟೆಯಿಂದಲೇ ಸಪ್ತದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಸಪ್ತ ದ್ವಾರದ ಮೂಲಕ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ದರ್ಶನ ಪಡೆದರು. ಭಕ್ತಾಧಿಗಳು  ಚಳಿಯನ್ನು ಲೆಕ್ಕಿಸದೇ ವಿಷ್ಠು ದೇವಾಲಯಗಳಿಗೆ ಭಕ್ತರ ದಂಡು ಮುಗಿ ಬಿದ್ದರು.ಭಕ್ತಾಧಿಗಳಿಗೆ ಬಾದಾಮಿ ಹಾಲು ಹಾಗೂ ಲಡ್ಡುಗಳನ್ನು ವಿತರಿಸಲಾಯಿತ್ತು. ಬೆಳಿಗ್ಗೆ 6ರಿಂದ ರಾತ್ರಿ 9ರ ವರೆಗೆ ಭಕ್ತಾಧಿಗಳಿಗೆ ಸಪ್ತ ದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶಾಸಕ ಎಸ್.ಆರ್.ಶ್ರೀನಿವಾಸ್ ದೇವರ ದರ್ಶನ ಪಡೆದರು.

ಗುಬ್ಬಿ ತಾಲೂಕಿನ ಅಳಿಲುಗಟ್ಟ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಸೇವದತ್ತಿ ಮತ್ತು ವೈಕುಂಠ ಏಕಾದಶಿ ಸೇವಾ ಸಮಿತಿ ವತಿಯಿಂದ ಅದ್ದೂರಿಯಾಗಿ ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಾಸಕ ಎಸ್ ಆರ್ ಶ್ರೀನಿವಾಸ್, ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ಬಿ.ಎಸ್. ನಾಗರಾಜು,ಸುರೇಶ್ ಗೌಡ,ಯೋಗಾನಂದ, ಆ.ನಾ.ಲಿಂಗಪ್ಪ ಹಾಗೂ ಪ್ರಮುಖ ರಾಜಕೀಯ ಮುಖಂಡರು ಗ್ರಾಮದ ಮುಖಂಡರು, ಭಕ್ತರು ದೇವರ ದರ್ಶನ ಪಡೆದರು.

ಗುಬ್ಬಿ ತಾಲ್ಲೂಕಿನ ಹೊಸಕೆರೆ ಹಾಗೂ ಹೂವಿನಕಟ್ಟೆ ಗ್ರಾಮದ ಶ್ರೀರಂಗನಾಥಸ್ವಾಮಿಯ ವೈಕುಂಠ ಏಕದಶಿ ಅದ್ದೂರಿಯಾಗಿ ನಡೆಯಿತ್ತು. ಬೆಳಿಗ್ಗೆ  ಆರು ಗಂಟೆಯಿಂದಲೇ ಸಪ್ತದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತಾಧಿಗಳಿಗೆ ದಾಸೋಹ ವ್ಯವಸ್ಥೆ ಮಾಡಲಾಯಿತ್ತು‌.

ಗುಬ್ಬಿ  ತಾಲೂಕಿನ ಕಸಬಾ ಹೋಬಳಿ ಲಕ್ಕೇನಹಳಿ ಗ್ರಾಮದಲ್ಲಿ ಡಿ.30ರ  ಶ್ರೀ ತುಳಸಿ ಲಕ್ಷ್ಮಿ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಮೂಲ ಸ್ಥಾನಕ್ಕೆ ಕರೆದುಕೊಂಡು ಗಂಗೆಪೂಜೆ, ವಿಘ್ನೇಶ್ವರನ ಪುಣ್ಯ ಆರಾಧನೆ, ರಕ್ಷಾ ಕಂಕಣಧಾರಣೆ, ಪಂಚಕಳಸ ಆರಾಧನೆ, ಗಣಪತಿ ಹೋಮ, ವಾಸ್ತು ಹೋಮ, ರಕ್ಷೋಗ್ನ ಹೋಮ, ಸುದರ್ಶನ ನಾರಸಿಂಹ ಹೋಮ ಹಾಗೂ  ಮಹಾಮಂಗಳಾರತಿ ಇನ್ನು ಮುಂತಾದ ಹೊಮಗಳನ್ನು ಮಾಡಿ ನಂತರ ಸ್ವಾಮಿಯವರನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಉತ್ಸವ ಮಾಡಲಾಯಿತು.

ಗುಬ್ಬಿ ತಾಲ್ಲೂಕಿನ ಲಕ್ಕೇನಹಳ್ಳಿ ಶ್ರೀ ತುಳಸಿ ರಂಗನಾಥ್ ಸ್ವಾಮಿ

ಗುಬ್ಬಿ ಪಟ್ಟಣದ ಬೆಲ್ಲದ ಪೇಟೆಯ ಶ್ರೀ ಕನ್ನಿಕಾಪರಮೇಶ್ವರಿ  ದೇವಾಲಯದಲ್ಲಿ  ಶ್ರೀ ಜನಾರ್ದನ ಸ್ವಾಮಿಗೆ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆಯೊಂದಿಗೆ ಹಾಗೂ ಅಲಂಕಾರ  ಏರ್ಪಡಿಸಲಾಗಿತ್ತು. ವಿಶೇಷವಾಗಿ ಸ್ವಾಮಿಯ ದರ್ಶನಕ್ಕೆ ಸಪ್ತದ್ವಾರದ ಮೂಲಕ ಭಕ್ತಾದಿಗಳಿಗೆ ದೇವರ ದರ್ಶನ ನೀಡಲಾಯಿತು. ಮಹಾಮಂಗಳಾರತಿ ನಂತರ ಬರುವ ಭಕ್ತಾದಿಗಳಿಗೆ ಪ್ರಸಾದ ನೀಡಲಾಯಿತು.   ಮಹಿಳಾ ಮಂಡಳಿ ಅವರಿಂದ ಭಗವದ್ಗೀತೆ ಪಠಣ, ದೇವತಾ ಭಜನಾ, ವಿಷ್ಣು ಸಹಸ್ರನಾಮ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಗುಬ್ಬಿ ಶ್ರೀ ಬೇಟೆರಾಯಸ್ವಾಮಿ

ಗುಬ್ಬಿ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಬೇಟೆರಾಯಸ್ವಾಮಿ ದೇವಾಲಯದಲ್ಲಿ ಡಿ.30 ರಂದು ವೈಕುಂಠ ಏಕಾದಶಿ ಪ್ರಯುಕ್ತ ವೈಕುಂಠ ದ್ವಾರ ದರ್ಶನ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಸುಪ್ರಭಾತ ಸೇವೆಯಿಂದ ಆರಂಭವಾದ ಧಾರ್ಮಿಕ ಕೈಂಕರ್ಯ ನಿರಂತರ ರಾತ್ರಿ ಹತ್ತು ಗಂಟೆವರೆಗೆ ನಡೆದವು.   ಹದಿನೆಂಟು ಕೋಮಿನ ಪ್ರಮುಖರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಸುವ ಮೂಲಕ ಇಡೀ ದಿನದ ಕಾರ್ಯಕ್ರಮ ಸಂಪನ್ನ ಗೊಳಿಸಲಾಯಿತು.

ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ  ಚನ್ನಶೆಟ್ಟಿಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಸ್ವಾಮಿಯವರಿಗೆ ವಿಶೇಷ ಪೂಜೆ, ಅಲಂಕಾರ ಏರ್ಪಡಿಸಲಾಗಿತ್ತು.

ಚನ್ನಶೆಟ್ಟಿಹಳ್ಳಿ ಗ್ರಾಮದ ಶ್ರೀ ರಂಗನಾಥ್ ಸ್ವಾಮಿ
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಅಡಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿರಂಗನಾಥ್ ಸ್ವಾಮಿ ಸನ್ನಿಧಿ

ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಆಡಗೊಂಡನಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿಯ ವೈಕುಂಠ ಏಕಾದಶಿ ಅಂಗವಾಗಿ ಶ್ರೀ ಲಕ್ಷ್ಮಿರಂಗನಾಥಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕವನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ  ಹಿರಿಯ ಕಲಾವಿದ ಎ .ಎಸ್ ಪುಟ್ಟಸ್ವಾಮಿಯವರಿಗೆ  ಬೆಳ್ಳಿ ಕೀರಿಟವನ್ನು ಧಾರಣೆ ಮಾಡಿ ಅಭಿನವ ಭಾರ್ಗವ ಎಂಬ ಬಿರುದು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ, ಶ್ರೀ ವಿಭವವಿದ್ಯಾಶಂಕರ ಸ್ವಾಮೀಜಿ. ಜೆಡಿಎಸ್ ಮುಖಂಡ ಬಿ.ಎಸ್ ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಸುರೇಶ್ ಗೌಡ, ಬಿ. ಸಿ ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here