
ಗುಬ್ಬಿ : ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಸುತ್ತೂರು ಮಠದ ರಥವು ರಾಜ್ಯಾದ್ಯಂತ ಸಂಚರಿಸುತ್ತಿದ್ದು ಇಂದು ಗುಬ್ಬಿ ಪಟ್ಟಣಕ್ಕೆ ಆಗಮಿಸಿರುವುದು ಗುಬ್ಬಿ ಜನತೆಯ ಭಾಗ್ಯ ಎಂದು ವೀರಶೈವ ಸಮಾಜದ ಅಧ್ಯಕ್ಷ, ಹೋಟೆಲ್ ಮಾಲೀಕರಾದ ಕಾಂತರಾಜು ತಿಳಿಸಿದರು.
ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆಯುವ ಸುತ್ತರು ಜಾತ್ರಾ ಮಹೋತ್ಸವ ಅಂಗವಾಗಿ ಪ್ರಾರಂಭಗೊಂಡು ರಥ ಯಾತ್ರೆಯು ಗುಬ್ಬಿ ಪಟ್ಟಣಕ್ಕೆ ಆಗಮನವನ್ನು ಗುಬ್ಬಿ ಪಟ್ಟಣದ ಭಕ್ತರು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡು ಮಾತನಾಡಿದರು.
ಸುತ್ತೂರು ಜಾತ್ರಾ ಮಹೋತ್ಸವ ಜನವರಿ 15 ರಿಂದ 20 ರವರೆಗೆ ನಡೆಯುವುದರಿಂದ ಜಾತ್ರೆಯ ಅಂಗವಾಗಿ ಸುತ್ತೂರು ಮಠದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಶ್ರೀ ಸೋಮೇಶ್ವರ ಸ್ವಾಮಿಯ ಕುಂಭಾಭಿಷೇಕ, ಶ್ರೀ ವೀರಭದ್ರೇಶ್ವರ ಕೊಂಡೋತ್ಸವ, ಸಾಮೂಹಿಕ ವಿವಾಹ ಹಾಗೂ ಜನವರಿ 17ರಂದು ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುವುದು. ಭಾನುವಾರ ಮಹದೇಶ್ವರ ಕೊಂಡೋತ್ಸವ ಲಕ್ಷದೀಪೋತ್ಸವ ಮಹದೇಶ್ವರ ಮೂರ್ತಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ ಇದಕ್ಕೆ ಗುಬ್ಬಿ ತಾಲೂಕಿನಿಂದ ಸಾವಿರಾರು ಭಕ್ತರು ಭಾಗವಹಿಸುತ್ತಾರೆ.
ರಥಕ್ಕೆ ಹಲವು ಮುಖಂಡರು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪೂಜೆಸಲ್ಲಿಸಿ ನಂತರ ಭಕ್ತಾದಿಗಳಿಗೆ ಫಲಹಾರ ಮತ್ತು ಮಜ್ಜಿಗೆ ವಿತರಿಸಿದರು.
ಸುತ್ತೂರು ಶ್ರೀ ಕ್ಷೇತ್ರದ ರಥವು ಗೋಸಲ ಶ್ರೀ ಚನ್ನಬಸವೇಶ್ವರ ಸ್ವಾಮಿಯ ದೇವಸ್ಥಾನದ ಹತ್ತಿರ ಬಂದು ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಸಿದ್ಧಗಂಗಾ ಮಠಕ್ಕೆ ಸಾಗಿತು
ಮುಖಂಡರುಗಳಾದ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಜಿ.ಆರ್. ಶಿವಕುಮಾರ್, ಲಯನ್ಸ್ ಸಂಸ್ಥೆಯ ಛೇರ್ಮನ್ ಕೆ.ಆರ್. ಅಶೋಕ್ ಕುಮಾರ್, ಬಸವೇಶ್ವರ ಮೆಡಿಕಲ್ ಸುಶೀಲ್, ಪತಾಂಜಲಿ ಯೋಗ ಶಿಕ್ಷಣ ಸಮಿತಿಯ ಬಸವರಾಜು, ನಿವೃತ್ತ ನೌಕರರ ಸಂಘದ ಖಜಾಂಚಿ ಅಪ್ಪಾಜಿ, ಹೆಚ್.ಎನ್.ರಂಗಸ್ವಾಮಿ, ಸವಿತಾ ಸಮಾಜದ ಅಧ್ಯಕ್ಷ ಲಕ್ಷ್ಮೀನಾರಾಯಣ, ಕರಿಗಿರಿಯಪ್ಪ, ರಥದ ಜೊತೆಯಲ್ಲಿ ಆಗಮಿಸಿದಂತಹ ಪಂಚಾಕ್ಷರಿ, ಶಿವಪ್ರಸಾದ್, ರಾಜಶೇಖರ್, ಚೇತನ್, ಮಹೇಶ್, ಸಂತೋಷ್ ಸೇರಿದಂತೆ ಪಟ್ಟಣದ ಪ್ರಮುಖರು, ಭಕ್ತಾಧಿಗಳು ಭಾಗವಹಿಸಿದ್ದರು.





