ಗುಬ್ಬಿ:  ಸಂವಿದಾನದ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬ ನಾಗರಿಕರ  ಪಾಲಿಸಬೇಕು ಎಂದು ಹಿರಿಯ ವಕೀಲರಾದ  ಪಿ.ಎಂ. ಪುಷ್ಪಲತಾ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಸಿ.ಸಿ, ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಲವು ಜಾತಿ, ಭಾಷೆ, ಧರ್ಮಗಳ ಜನರಿಗೆ ಸಮಾನ ಹಕ್ಕುಗಳನ್ನು ನೀಡಿ, ಸಂವಿಧಾನದ ಮುಂದೆ ಬಡವ,  ಶ್ರೀಮಂತ ಎಂದೆಣಿಸದೆ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದೆ. ಎಲ್ಲ ವರ್ಗದ ಸಾಮಾಜಿಕ ನ್ಯಾಯದ ಅಡಿಪಾಯವೇ ಭಾರತದ ಸಂವಿಧಾನ. ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕು.  ನ್ಯಾಯ, ಸಮಾನತೆ ಮತ್ತು ಹೊಣೆಗಾರಿಕೆಯಿಂದ ಪೌರತ್ನದ ಸ್ಫೂರ್ತಿಯನ್ನು ಬಲಪಡಿಸಬೇಕು ಎಂದು ಹೇಳಿ,

ಸಂವಿಧಾನದ ಮಹತ್ವವನ್ನು  ನಾವುಗಳು ಅರಿತು ಸಮಾಜದಲ್ಲಿ ಬದುಕು ಸಾಗಿಸಬೇಕು ಎಂದು ತಿಳಿಸಿದರು.

ಪ್ರಾಂಶುಪಾಲರಾದ ಡಾ. ಪ್ರಸನ್ನ ಮಾತನಾಡಿ, ಸಂವಿಧಾನ ರಚನೆಯ ಸಲುವಾಗಿ ವಿಶ್ವದ ಹಲವು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ, ಭಾರತಕ್ಕೆ ಹೊಂದುವಂತಹ ನಮ್ಮ ಸಂವಿಧಾನ ರಚಿಸಿದ್ದಾರೆ. ಸಂವಿಧಾನಕ್ಕೆ ಕಾಲಕಾಲಕ್ಕೆ ತಿದ್ದುಪಡಿ ತರಲು ಅವಕಾಶ ನೀಡಿದ್ದಾರೆ. ಸಂವಿಧಾನದಡಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲವಾಗಿರುವುದರಿಂದ ಭಾರತ ಅಭಿವೃದ್ಧಿಯ ನಾಗಾಲೋಟದತ್ತ ಸಾಗುತ್ತಿದೆ. ಭಾರತೀಯರೆಲ್ಲರೂ ಸಂವಿಧಾನವನ್ನು ಗೌರವಿಸಬೇಕು ಎಂದರು.

ಇದೇ ಸಂದರ್ಭದಲ್ಲಿ, 6/4 ಸಿಒವೈ  ಅಧಿಕಾರಿ ಡಾ.ಸುಮುಖ ಮಾತನಾಡಿ, ‘ಸಂವಿಧಾನ ಎಂದರೇನು ಮತ್ತು ಅದು ಸಾಮಾನ್ಯ ನಾಗರಿಕನ ದೈನಂದಿನ ಜೀವನದಲ್ಲಿ ಹೇಗೆ ರಕ್ಷಣೆ ನೀಡುತ್ತದೆ’ ಎಂಬ ವಿಷಯದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿ.ಎಸ್.ಯು.ಒ. ಪವಿತ್ರಾ, ಸಿ.ಜೆ.ಯು.ಒ. ನವ್ಯ, ಗಿರೀಶ್, ಎನ್‌ಸಿಸಿ ಕೆಡೆಟ್‌ಗಳು ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here