ಗುಬ್ಬಿ : ತಾಲ್ಲೂಕಿನ ಹೆಚ್ ಎ ಎಲ್ ನಲ್ಲಿ ಸೈನಿಕರ ಸಂಘಕ್ಕೆ ಆರು ಎಕ್ಕರೆ ಜಮೀನು ನೀಡಲಾಗಿದೆ, ಅದಕ್ಕೆ ಸೈನಿಕ ನಗರ ಎಂದು ಹೆಸರು ಇಟ್ಟುಕೊಳ್ಳಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಎಸ್ ಸಿ ಎಸ್ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗುಬ್ಬಿ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ  23 ವರ್ಷಗಳ ಕಾಲ ಭಾರತೀಯ ಭೂಸೇನೆ 4 ಇಂಜಿನಿಯರ್ಸ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿ, ಭಾರತೀಯ ಸೇನೆಯಿಂದ ಸೇವಾ ನಿವೃತ್ತಿ ಹೊಂದಿ, ಸ್ವಗ್ರಾಮ ಗುಬ್ಬಿಗೆ ಆಗಮಿಸುತ್ತಿರುವ ಬಿ.ಟಿ.ದಿವಾಕರ್ ರವರಿಗೆ ಅಭಿನಂದನಾ ಸಮಾರಂಭ ಮತ್ತು 3ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೈನಿಕರ ತ್ಯಾಗ ಬಲಿದಾನದಿಂದ ಇಂದು ನಾವು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೆವೆ. ಅನ್ನ ನೀಡುವ ರೈತ, ದೇಶ ರಕ್ಷಣೆ ಮಾಡುವ ಸೈನಿಕರನ್ನು ದಿನನಿತ್ಯ ನೆನೆಯಬೇಕು.

ಹಿಂದಿನ ಕಾಲದಲ್ಲಿ ತಂದೆ ತಾಯಿಗಳು ಸೈನ್ಯಕ್ಕೆ ಸೇರಲು ಪ್ರೋತ್ಸಾಹಿಸುತ್ತಿರಲಿಲ್ಲ .ಇತ್ತೀಚಿನ ದಿನದಲ್ಲಿ ತಂದೆ ತಾಯಿಗಳೆ ಆಶೀರ್ವಾದ ಮಾಡಿ ದೇಶ ರಕ್ಷಣೆಗೆ ಮುಂದಾಗಿ ಎಂದು ಸೈನ್ಯಕ್ಕೆ ಸೇರಲು ಪ್ರೋತ್ಸಾಹ ನೀಡುತ್ತಾರೆ. ಪ್ರತಿಯೊಬ್ಬರಲ್ಲಿಯೂ ದೇಶಾಭಿಮಾನ ಇರಬೇಕು, ಸೈನಿಕರ ಬಗ್ಗೆ ಗೌರವ, ಭಕ್ತಿ  ಹೆಚ್ಚು ಹೆಚ್ಚು ಗೌರವ ಇರಭೇಕು ಎಂದರು.

ದಿವ್ಯ ಸಾನಿಧ್ಯವನ್ನು ತೋರೆಮಠದ ಪೀಠಾಧ್ಯಕ್ಷರಾದ ಶ್ರೀ ಅಟವಿ ಚನ್ನಬಸವಸ್ವಾಮಿಗಳು ಮಾತನಾಡಿ ಧರ್ಮ  ಉಳಿಯಬೇಕಾದರೆ ಮಠಮಾನ್ಯ ಸ್ವಾಮೀಜಿಗಳು ಹಾಗೂ ಸೈನಿಕರಿಂದ ಮಾತ್ರ ಸಾಧ್ಯ. ಭಾರತ ವೈವಿಧ್ಯತೆಯಿಂದ ಕೂಡಿದ ದೇಶವಾಗಿದೆ. ನಮ್ಮ ದೇಶ, ಧರ್ಮಕ್ಕೆ ರಕ್ಷಣೆ ಬೇಕಾಗಿದೆ. ಸೈನಿಕರು ತಂದೆ ತಾಯಿ ಬಿಟ್ಟು ಪ್ರಾಣವನ್ನ ದೇಶದ ರಕ್ಷಣೆಗೆ ಮುಡುಪಿಟ್ಟದ್ದಾರೆ. ಇವರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು

 ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನದ ಡಾ.ಬಸವಮಾಚಿದೇವ ಮಹಾಸ್ವಾಮಿಜಿ ಮಾತನಾಡಿ,  ಜಗತ್ತಿನಲ್ಲಿ ಉಳಿದಿರುವ ಮಹತ್ಮರು, ದಾರ್ಶನಿಕರು ಸಮಾಜ ಉಳಿಯುವ ಕೆಲಸ ಮಾಡುತ್ತಿದ್ದಾರೆ.

ನಾವು ನೆಮ್ಮದಿ ನಿದ್ದೆ ಮಾಡಬೇಕಾರೆ ಸೈನಿಕರು ಕಾರಣ, ನಿತ್ಯ ಕಣ್ಣು ಬಿಟ್ಟು ಕಾಯುತ್ತಿರುವವರು ಯೋಧರು. ತಂದೆ ತಾಯಿಗಳು ತಮ್ಮ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕು ಎಂಬ ಗುರಿಯನ್ನು ಇಟ್ಟುಕೊಂಡಿರುತ್ತಾರೆ. ಯೋಧರ ತಂದೆ ತಾಯಿಗಳು ಅಂಬಲ ನನ್ನ ಮಗ ಗಡಿ ಕಾಯುತ್ತಿದ್ದಾನೆ ಎಂದು ತಾಯಿಂದಿರರು ಸ್ಪೂರ್ತಿ ತುಂಬಬೇಕು ಎಂದು ತಿಳಿಸಿದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಎನ್.ಕೆ ಶಿವಣ್ಣ  ಮಾತನಾಡಿ,ಸೈನಿಕರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೈನಿಕಕರು ನಿವೃತ್ತಿ ಹೊಂದಿ ಬಂದ ಸಂದರ್ಭದಲ್ಲಿ ಬೃಹತ್ ಮೇರವಣಿಗೆಯನ್ನು ಮಾಡಲಾಗುತ್ತದೆ.ಯುವಕರು ಕೆವಲ ಹಣದ ಆಸೆ, ಮೊಬೈಲ್ ಮೂಲಕ ದಾರಿತಪಪ್ಪುದ್ದಾರೆ. ಸರ್ವಜನಿಕರಲ್ಲಿ ದೇಶ ಪ್ರೇಮ ಇಲ್ಲ.  ದೇಶಕಟ್ಟವ ಕಾಳಜಿ ಎಲ್ಲರಲ್ಲಿಯೂ ಇರಬೇಕು ಎಂದು ತಿಳಿಸಿದರು.

23 ವರ್ಷಗಳ ಕಾಲ ಭಾರತೀಯ ಭೂಸೇನೆ 4 ಇಂಜಿನಿಯರ್ಸ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿ, ಭಾರತೀಯ ಸೇನೆಯಿಂದ ಸೇವಾ ನಿವೃತ್ತಿ ಹೊಂದಿ, ಸ್ವಗ್ರಾಮ ಗುಬ್ಬಿಗೆ ಆಗಮಿಸಿದ ಬಿ.ಟಿ.ದಿವಾಕರ್ ರವರನ್ನು  ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯ ದೇವಸ್ಥಾನದಿಂದ ಎಸ್‌ಸಿಎಸ್ ಕಲ್ಯಾಣ ಮಂಟಪದವರಿಗೆ ಬ್ಯಾಂಡ್ ಸೆಟ್ ಕಲಾತಂಡದೊಂದಿಗೆ  ಮೆರವಣಿಗೆ ಮಾಡಲಾಯಿತು.

 ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಲೋಕೇಶ್ ಬಿದರೆ, ಸರ್ಕಾರಿ ಪ್ರಥಮ ದರ್ಜೆಕಾಲೇಜು ಪ್ರಾಂಶುಪಾಲ ಡಾ.ಪ್ರಸನ್ನ, ದಿವಾಕರ್ ತಾಯಿ ಶಾರದಮ್ಮ , ಮುಂಖಡ ಕೆಂಪೇಗೌಡ, ತಾಲ್ಲೂಕು ಮಡಿವಾಳ ಸಂಘ ಅಧ್ಯಕ್ಷ  ಪರಮೇಶ್ವರಪ್ಪ  ತಾಲ್ಲೂಕು ರೈತ ಸಂಘ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯತೀಶ್, ವೀರನಾರಿ ಛಾಯಾ , ಕುಣಿಗಲ್ ಚಿಕ್ಕಣ್ಣ, ವಿನಯ್ ಬಿದರೆ, ಪಪಂ ಮುಖ್ಯಾಧಿಕಾರಿ ಮಂಜುಳಾ ದೇವಿ, ಪಟ್ಟಣ ಪಂಚಾಯತಿ ಮಾಜಿ ಸದಸ್ಯರು ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here