ಗುಬ್ಬಿ : ಪ್ರತಿಯೊಂದು ಕೀರ್ತನೆಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಮಾರ್ಗದರ್ಶಿಯಾಗಿವೆ ಎಂದು  ಹೊಸದುರ್ಗ ಶಾಖಾಮಠದ ಈಶ್ವರಾನಂದ ಪುರಿ ಮಹಾಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಪ್ರಭುವನ ಹಳ್ಳಿ ಗ್ರಾಮದಲ್ಲಿ ಕನಕದಾಸರ ಪುತ್ತಳಿ ಅನಾವರಣ ದೇವಾಲಯ, ಮತ್ತು 538ನೇ ಕನಕ ಜಯಂತಿ ಉದ್ಘಾಟನೆ, ಮಾಡಿ ಮಾತನಾಡಿದ ಅವರು ಇಂದು ಕನ್ನಡಕ್ಕೆ ಶಾಸ್ತ್ರಿಯ  ಭಾಷೆಯ ಸ್ಥಾನಮಾನ ಅವರು ಬರೆದಂತಹ  ಮೋಹನ ತರಂಗಿಣಿ ಗ್ರಂಥಕ್ಕೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. 15 ನೇ ಶತಮಾನದಲ್ಲಿಯೇಜಾತಿ ಮತಗಳನ್ನು ಬಿಟ್ಟು ಒಟ್ಟಾಗಿ ಬದುಕುವುದನ್ನ ಕಲಿಸಿದ್ದು ಕನಕದಾಸರು  ಅವರು ಬರೆದಿರುವಂತಹ ಗ್ರಾಂಥವು ನಮ್ಮ ಮಕ್ಕಳಿಗೂ  ಉನ್ನತ ಶಿಕ್ಷಣವನ್ನ ನೀಡಬೇಕು.  ಪ್ರತಿಯೊಂದು ಮನೆಯಲ್ಲಿಯೂ ಕೂಡ ಉನ್ನತ ಸರ್ಕಾರಿ ಅಧಿಕಾರಿಗಳನ್ನು ಮಾಡಿದಾಗ ಖಂಡಿತವಾಗಿ ಸಮಾಜ ಬಲಗೊಳ್ಳುತ್ತದೆ ಎಂದು ತಿಳಿಸಿದರು.

 ಬಸವೇಶ್ವರರ  ಕಾಯಕ  ಕನಕದಾಸರ  ಭಕ್ತಿ, ಅಂಬೇಡ್ಕರ್  ಸಮಾನತೆ ಈ ಮೂರನ್ನು ತಾವೆಲ್ಲರೂ ಅರ್ಥ ಮಾಡಿಕೊಂಡರೆ ಖಂಡಿತವಾಗಿ ಸಮಾಜದಲ್ಲಿ  ಉತ್ತಮ ಬದುಕನ್ನ ಎಲ್ಲರೂ ಮಾಡಬಹುದು ಎಂದು ತಿಳಿಸಿದರು.

ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ ವರ್ಷದಲ್ಲಿ ಸುಮಾರು 15ರಿಂದ 25ಕ್ಕೂ ಹೆಚ್ಚು ಜಯಂತಿಗಳು ನಡೆಯುತ್ತವೆ  ಯಾವುದೇ ಒಬ್ಬ ಮಹಾನ್ ವ್ಯಕ್ತಿಯ ಜಯಂತಿಯನ್ನು ಮಾಡುವ ಉದ್ದೇಶವೇ  ಅವರು ಹಾಕಿಕೊಟ್ಟಂತಹ ಆದರ್ಶಗಳನ್ನ ನಾವು ಪಾಲಿಸಬೇಕು ಎಂದು  ಅದೇ ರೀತಿಯಲ್ಲಿ ಕನಕದಾಸರು ಕೂಡ ತಮ್ಮ ಕೀರ್ತನೆಗಳ ಮೂಲಕವೇ  ಜಾತಿ ಮತ ಧರ್ಮಗಳನ್ನು ಬಿಟ್ಟು ನಾವೆಲ್ಲರೂ ಒಂದಾಗಿ ಎಂದು ಹೇಳಿದಂತಹ ಮಾರ್ಗದರ್ಶಕರಾಗಿದ್ದಾರೆ ಪ್ರಭುವನ ಹಳ್ಳಿಯಲ್ಲಿ ಕೇವಲ 20 ಮನೆಗಳು ಮಾತ್ರ  ಕುರುಬ ಸಮುದಾಯವಿದ್ದರೂ  ಬಹಳ ವಿಶೇಷವಾಗಿ ಪ್ರತಿಮೆ ಅನಾವರಣ ಮಾಡಿ  ಅದಕ್ಕೊಂದು ದೇವಾಲಯ ನಿರ್ಮಿಸುವುದು  ಇಲ್ಲಿನ ಒಗ್ಗಟ್ಟನ್ನು ಸಾರುತ್ತಿದೆ  ಖಂಡಿತವಾಗಿ ಇಲ್ಲಿಗೆ ಕನಕ ಭವನ ನಿರ್ಮಾಣ ಮಾಡಲು ಹೇಳಿದ್ದೀರಿ  ಅಪ್ಪೇನಹಳ್ಳಿ ಹಾಗೂ  ಪ್ರಭುವಿನ ಹಳ್ಳಿಗೆ ಕನಕ ಭವನ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದರು.

 ಬಿಂದು ಶೇಖರ್ ಒಡೆಯರ್ ಮಾತನಾಡಿ  15ನೆಯ ಶತಮಾನದಲ್ಲಿ ಕನಕದಾಸರು  ಮಾಡಿದಂತಹ ಸಾಮಾಜಿಕ ಪರಿವರ್ತನೆಯ ಬಗ್ಗೆ ತಿಳಿಸಿದರು.

 ಕಾರ್ಯಕ್ರಮದಲ್ಲಿ ಗುಬ್ಬಿ ತಾಲೂಕು ಕುರುಬ ಸಂಘದ ಅಧ್ಯಕ್ಷ ರಂಗನಾಥ್, ಗ್ರಾಮ ಪಂಚಾಯಿತಿ ಸದಸ್ಯ ನಾಗಣ್ಣ, ತಾಲೂಕು ಕಾರ್ಯದರ್ಶಿ ಮನೋಹರ್, ಗೌರವಾಧ್ಯಕ್ಷ ಚಂದ್ರಪ್ಪ, ಸಂಘದ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ರಮೇಶ್, ಉಪಾಧ್ಯಕ್ಷ ರಮೇಶ್ ಡಿಸಿ, ಖಜಾಂಚಿ ಕೃಷ್ಣಮೂರ್ತಿ, ಬಿದರೆ ಯತೀಶ್,ಸೇರಿದಂತೆ ಕನಕ ಕುರುಬರ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಗ್ರಾಮಸ್ಥರು, ಇತರರು ಇದ್ದರು.

.

LEAVE A REPLY

Please enter your comment!
Please enter your name here