ಗುಬ್ಜಿ: ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಾದ ಪ್ರಬಂಧ ಸ್ಪರ್ಧೆ, ನಾಟಕ ಸ್ಪರ್ಧೆ, ಕ್ರೀಡೆ,  ಇನ್ನೂ ಮುಂತದ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವವನ್ನು ವಿಕಸನ ಗೊಳಿಸಿಕೊಳ್ಳಬೇಕು ಎಂದು ಹಳೆ ವಿದ್ಯಾರ್ಥಿ ಸಂಘದ  ಅಧ್ಯಕ್ಷ ಗಿರೀಶ್ ತಿಳಿಸಿದರು.

ತಾಲ್ಲೂಕಿನ ಸಿಎಸ್ ಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಹೆಚ್ ಪಿ ಎಸ್ ವಿಭಾಗದವತಯಿಂದ   ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಹಾಗೂ ಪೋಷಕರ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳು ಓದಿನ ಕಡೆ ಹೆಚ್ಚು ಗಮನಿಟ್ಟು ಅಭ್ಯಾಸ ಮಾಡಬೇಕು.  ಬಿಡುವಿನ ವೇಳೆಯಲ್ಲಿ ಇತರೆ ಚಟುವಟಿಕೆಗಳಾದ ಸಂಗೀತ, ಕ್ರೀಡೆ ಹಾಗೂ ಸ್ಪರ್ಧಾತ್ಮಕ ತರಬೇತಿಯನ್ನು ಪಡೆದುಕೊಂಡು ತನ್ನ ವ್ಯಕ್ತಿತ್ವವನ್ನು ಉತ್ತಮಪಡಿಸಿಕೊಳ್ಳಬೇಕು.

ಮಕ್ಕಳಿಂದ ಪ್ರಶ್ನೆ:  ಪೋಷಕರು ಶಿಕ್ಷಕರ ನಡುವೆ ಮಕ್ಕಳ ಕಲಿಕಾ ಪ್ರಗತಿಯ ಕುರಿತು ಸಂವಾದ ನಡೆದ  ಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಶಾಲೆಯ ಅಕ್ಕ ಪಕ್ಕ ಇರುವ ಕೋಳಿ ಮಾಂಸದ ಅಂಗಡಿಯನ್ನು, ಮಧ್ಯದ ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ವೇದಿಕೆ ಮೇಲೆ ಉಪಸ್ಥಿತರಿದ್ದಂತ ಅಧಿಕಾರಿಗಳು ಸ್ಪಂದಿಸಿ ತೋರಿತವಾಗಿ ಈ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಅಮೀನಗಡದ ವಿಶ್ವ ಬಂಜಾರ ಕಲಾ ಸಾಹಿತ್ಯಿಕ ಸಂಘ  ಏರ್ಪಡಿಸಿದ್ದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ 5 ರಿಂದ 7 ನೇ ತರಗತಿ ಮಕ್ಕಳು ಶಿಕ್ಷಕಿ ಗೀತಾ ಇವರ ಮಾರ್ಗದರ್ಶನದಲ್ಲಿ  20 ಮಕ್ಕಳು  ಭಾಗವಹಿಸಿ, 12 ಮಕ್ಕಳು ಅತ್ಯುತ್ತಮ ಸ್ಥಾನವನ್ನು ಪಡೆದು ಪ್ರಶಸ್ತಿ ಪತ್ರ ಪಡೆದುಕೊಂಡರು.

ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ನಾನಾ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ  ಗೋಪಾಲಕೃಷ್ಣ  ,  ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನಯಾಜ್,  ಪುಟ್ಟರಾಜು, ಸಿ ಆರ್ ಪಿ ಲೋಕೇಶ್ , ಕ್ಲಸ್ಟರ್  ಸಂಪನ್ಮೂಲ ವ್ಯಕ್ತಿಯಾದ ಶೀಲಾ, ಮುಖ್ಯ ಶಿಕ್ಷಕಿ ಗಂಗಮ್ಮ.ಬಿ.ಹೆಚ್., ಶಾಲೆಯ ಎಲ್ಲಾ ಶಿಕ್ಷಕ ವೃಂದದವರು, ಪೋಷಕರು, ಗ್ರಾಮಸ್ಥರು, ಮಕ್ಕಳು ಹಾಜರಿದ್ದರು.

LEAVE A REPLY

Please enter your comment!
Please enter your name here