ಗುಬ್ಬಿ : ಶಾಂತಿ ನೆಮ್ಮದಿಗಾಗಿ ಗ್ರಾಮಗಳಲ್ಲಿ ದೇವಾಲಯಗಳು ನಿರ್ಮಾಣವಾಗಬೇಕು ಎಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು.
ತಾಲೂಕಿನ ಹೊಸಕೆರೆ ಗ್ರಾಮದ ಶ್ರೀ ಮಾರಮ್ಮ ದೇವಿಯ ನೂತನ ವಿಮಾನ ಗೋಪುರ ಕಳಸ ಸ್ಥಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವಕ್ಕೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಸನಾತನ ಸಂಸ್ಕೃತಿ ಪರಂಪರೆಯ ಮೇಲೆ ಬೆಳಕು ಚೆಲ್ಲುವಲ್ಲಿ ದೇವಾಲಯಗಳು ಸ್ಮಾರಕಗಳಾಗಿವೆ.
ದೇವಾಲಯ ನಿರ್ಮಾಣ ಮಾಡುವುದರಿಂದ ಗ್ರಾಮಗಳಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುತ್ತದೆ. ಇದರಿಂದ ದೇವಾಲಯಗಳು ಅವಶ್ಯಕತೆ ಗ್ರಾಮೀಣ ಭಾಗಕ್ಕೆ ಹೆಚ್ಚು ಇದೆ. ಶ್ರೀ ಮಾರಮ್ಮ ದೇವಾಲಯಕ್ಕೆ ನನ್ನ ಸಹಕಾರ ಇದ್ದೇ ಇರುತ್ತದೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶಕ್ಕೆ ಭವಿಷ್ಯವಿದೆ. ಇಡೀ ರಾಷ್ಟ್ರವೇ ಮೋದಿ ಅವರ ಕಡೆ ತಿರುಗಿ ನೋಡ್ತಾ ಇದೆ. ಭಾರತ ದೇಶ ಹತ್ತನೇ ಸ್ಥಾನದಲ್ಲಿ ಇದ್ದಿದ್ದು ಈಗ ಐದನೇ ಸ್ಥಾನಕ್ಕೆ ಬಂದಿದೆ. ಇನ್ನು ಎರಡು ವರ್ಷದಲ್ಲಿ ಭಾರತ ನಂಬರ್ ಒನ್ ದೇಶ ಆಗುತ್ತದೆ. ಅವಾಗ ದೇವಾಲಯಗಳು ದೇವಸ್ಥಾನಗಳು ಎಲ್ಲವೂ ಕೂಡ ತಾನಾಗಿ ಆಗುತ್ತದೆ. ಮುಂದಿನ ಯುವ ಪೀಳಿಗೆಗೆ ದೊಡ್ಡ ಮಟ್ಟದ ಬದಲಾವಣೆಯಾಗಿ ಇಡೀ ದೇಶದಲ್ಲೇ ದೇವಸ್ಥಾನಗಳು ನಿರ್ಮಾಣವಾಗುತ್ತದೆ. ದೇವಾಲಯಗಳಿಗೆ ತನ್ನದೆ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು ಗ್ರಾಮೀಣ ಭಾಗದಲ್ಲಿ ಹೆಚ್ಚು ದೇವಾಲಯಗಳು ನಿರ್ಮಾಣವಾಗಿದೆ ಎಂದರು.
ಈ ಭಾಗದಲ್ಲಿ ಸಾಕಷ್ವು ರಸ್ತೆಗಳು ನೀರಾವರಿಗೆ ಹೆಚ್ಚು ಆಧ್ಯತೆ ನೀಡಲಾಗಿದೆ.ಗುಬ್ಬಿ ತಾಲ್ಲೂಕಿನಲ್ಲಿ ಸಾಕಷ್ವು ರಸ್ತೆಗಳು ಇಲ್ಲ ರಸ್ತೆ ಮಾಡಿಕೊಡಿ ಎಂದು ಅರ್ಜಿಗಳು ಬಂದಿದೆ.ಸರ್ಕಾರಕ್ಕೆ ಕಳುಹಿಸಿದ್ದೇನೆ.ಸರ್ಕಾರದಿಂದ ಅನುದಾನ ಬಂದ ತಕ್ಷಣ ರಸ್ತೆಗಳನ್ನು ನಿರ್ಮಾಣ ಮಾಡಿಕೊಡುತ್ತೇನೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ , ಮುಖಂಡರಾದ ಚಂದ್ರಶೇಖರ್ ಬಾಬು , ಎಸ್.ಡಿ.ದಿಲೀಪ್ ಕುಮಾರ್ , ವಿಜಯ್ ಕುಮಾರ್ , ಟಿ.ಆರ್.ಎ.ದಕ್ಷೀಣಾಮೂರ್ತಿ, ಹೆಬ್ಬಾಕ ರವಿಶಂಕರ್ , ಎಕೆಪಿ ರಾಜು , ನಟೇಶ್ ,ಮಹಾರುದ್ರಸ್ವಾಮಿ , ಗುರುರೇಣುಕರಾಧ್ಯ , ರಂಗನಾಥ್, ಬಾಬು, ಸೋಮಣ್ಣ , ನಾರಾಯಣಮೂರ್ತಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
.





