ಗುಬ್ಬಿ:  ಹಲವು ಮಹನೀಯರ ಶ್ರಮದಿಂದ ಕರ್ನಾಟಕ ರಾಜ್ಯ ರೂಪಗೊಂಡಿದ್ದು, ಅವರನ್ನು ಸ್ಮರಿಸುವುದು ನಮ್ಮಗಳ ಆದ್ಯ ಕರ್ತವ್ಯ ಎಂದು ತಹಸೀಲ್ದಾರ್ ಬಿ.ಆರತಿ ತಿಳಿಸಿದರು.

ಗುಬ್ಬಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಷ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ 70 ನೇ ಕನ್ನಡ ರಜೋತ್ಸವ ದಿನಾಚರಣೆ ಮಹೋತ್ಸವದಲ್ಲಿ ಮಾತನಾಡಿದವಾವರು, ಕೇವಲ ರಾಜ್ಯೋತ್ಸವದ ದಿನದಂದು  ಕನ್ನಡವನ್ನು ನೆನಪು ಮಾಡಿಕೊಳ್ಳುವುದಲ್ಲದೆ ಪ್ರತಿದಿನ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ನಾವು ಎಲ್ಲೇ ಇರಲಿ ಕನ್ನಡವನ್ನು ಬಿಟ್ಟುಕೊಡದೆ ಇತರ ಭಾಷೆಗಳ ಜೊತೆ ಕನ್ನಡವನ್ನು ಬೆಳೆಸಬೇಕು ಎಂದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ.ಎಸ್ ಆರ್. ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಭಾಷಣಗಾರ ಕನ್ನಡ ಉಪನ್ಯಾಸಕ ಹೆಚ್.ಆರ್.ಮುರಳೀಧರ ಮಾತನಾಡಿ, ಕನ್ನಡದ ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರಲ್ಲೂ ಗೌರವ ಇರಬೇಕು ಎಂದು ತಿಳಿಸಿದರು .

ಇದೇ ಸಂದರ್ಭದಲ್ಲಿ   ಶಿಕ್ಷಣ ಕ್ಷೇತ್ರದಲ್ಲಿ ಕೆ.ಜಿ.ವಿಜಯಲಕ್ಷ್ಮಮ್ಮ, ಕೃಷಿ ಕ್ಷೇತ್ರದಲ್ಲಿ ಶಿವಲಿಂಗಯ್ಯ, ಪರಿಸರ ಕ್ಷೇತ್ರದಲ್ಲಿ ಜೆ ಗೀತಾ, 

ಕ್ರೀಡಾ ಕ್ಷೇತ್ರದಲ್ಲಿ  ಜಿ.ಆರ್.ಸುರೇಶ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಪಿ.ನಾರಾಯಣಗೌಡ, ರಂಗಭೂಮಿ ಕ್ಷೇತ್ರದಲ್ಲಿ ರಂಗಸ್ವಾಮಿ, ಸಾಹಿತ್ಯ ಕ್ಷೇತ್ರದಲ್ಲಿ ಅಂಜನ್ ಕುಮಾರ್ ಪಿ.ಆರ್, ಜನಪದ ಕ್ಷೇತ್ರದಲ್ಲಿ ಗಂಗಣ್ಣ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೊಸಕೆರೆ ಹೆಚ್.ಎಸ್.ನರಸಿಂಹಮೂರ್ತಿ, ಪೌರ ಕಾರ್ಮಿಕರಾದ ಶಿವಮ್ಮ,  ನಾಗರಾಜು ಇವರುಗಳಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ  ಪಟ್ಟಣ ಪಂಚಾಯತಿ ಅಧ್ಯಕ್ಷೆ ಆಯಿಷಾ ತಾಸೀನ್, ಉಪಾಧ್ಯಕ್ಷೆ ಶ್ವೇತ, ಪ್ರಾಂಶುಪಾಲರಾದ ಡಾ.ಪ್ರಸನ್ನ, ಚಂದ್ರಶೇಖರ್, ತಾಪಂ ಇಒ ರಂಗನಾಥ್, ಪಪಂ ಮುಖ್ಯಾಧಿಕಾರಿ ಮಂಜುಳದೇವಿ, ಬಿಇಒ ಎಂಎಸ್ ನಟರಾಜ್, ಕಸಾಪ ಅಧ್ಯಕ್ಷ ಹೆಚ್.ಸಿ.ಯತೀಶ್, ಸಿಪಿಐ ರಾಘವೇಂದ್ರ, ಎಇಇ ಯೋಗೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್ ಸಿ ಗುರುಪ್ರಸಾದ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ. ಆರ್. ವೆಂಕಟೇಶ್, ತಾಲೂಕು ಮಟ್ಟದ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರುಗಳು, ಕನ್ನಡ ಅಸಕ್ತರು, ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here