ತುಮಕೂರು: ತಾಲ್ಲೂಕಿನ  ನಾಗವಲ್ಲಿಯ ಶಿಥಿಗೊಂಡಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡವನ್ನು 40 ಲಕ್ಷ ರೂ. ವೆಚ್ಚದಲ್ಲಿ ದುರಸ್ಥಿಗೊಳಿಸಲಾಗುತ್ತಿದೆ ಎಂದು  ಶಾಸಕ ಬಿ.ಸುರೇಶ್‌ಗೌಡರು ತಿಳಿಸಿದರು.

 ಈ ಶಾಲೆಯ ಹಳ್ಳೆ ಕಟ್ಟಡದ ಹೆಚ್ಚಿನ ಕಿಟಕಿ, ಬಾಗಿಲು ಮುರಿದಿದ್ದವು. ಕೆಲವು ಕಡೆ ಸ್ವಿಚ್, ಲೈಟ್, ಫ್ಯಾನ್ ಒಡೆದುಹೋಗಿದ್ದವು. ಗೋಡೆ, ಸೀಲಿಂಗ್ ಬಿರುಕುಬಿಟ್ಟು ಹಾಳಾಗಿದ್ದವು. ಕೆಲ ಭಾಗಗಳಲ್ಲಿ ಮೇಲ್ಛಾವಣಿಯೂ ದುರಾವಸ್ಥೆ ಸ್ಥಿತಿಯಲ್ಲಿತ್ತು. ಶಾಲೆ ಕಟ್ಟವನ್ನು ದುರಸ್ಥಿಗೊಳಿಸಿ ಸುಣ್ಣ ಬಣ್ಣ ಹಚ್ಚಿ ಸುಸಜ್ಜಿತವಾಗಿ, ಆಕರ್ಷಣೀಯವಾಗಿ ನಿರ್ಮಾಣ ಮಾಡುವಂತೆ ಶಾಸಕರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ದಸರಾ ರಜೆ ಮುಗಿಯುವುದರೊಳಗೆ ಕಾಮಗಾರಿ ಪೂರ್ಣಗೊಳಿಸಿ ಶಾಲಾ ಚಟುವಟಿಕೆಗಳಿಗೆ ಅನುವು ಮಾಡಿಕೊಡುವಂತೆ ತಿಳಿಸಿದರು. ಕೆಪಿಎಸ್ ಶಾಲೆಗೆ ಅಗತ್ಯವಿರುವ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಮತ್ತಿತರ ಸೌಲಭ್ಯ ಒದಗಿಸುವುದಾಗಿ ಸುರೇಶ್‌ಗೌಡರು ಹೇಳಿದರು.

LEAVE A REPLY

Please enter your comment!
Please enter your name here