ಗುಬ್ಬಿ : ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವವರನ್ನು ಬಂದಿಸದಿದ್ದರೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತುಮಕೂರು ಜಿಲ್ಲೆಗೆ ಬಂದಾಗ ನಾವು ಅವರ ಮುಂದೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ದಲಿತ ಸೇನೆಯ ಜಿಲ್ಲಾಧ್ಯಕ್ಷ ಗೂಳೂರು ಸಿದ್ದರಾಜು ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯ ಅಂಬೇಡ್ಕರ್ ಪುತ್ತಳಿ ಮುಂದೆ ದಲಿತ ಸೇನೆ ರಾಮ್ ವಿಲಾಸ್ ಸಂಘಟನೆಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರತಿ ಬಿ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ಹಲ್ಲೇ ನಡೆಯುತ್ತಿದೆ. ದಲಿತ ಯುವಕ ಮೋಹಿತ್ ಕುಮಾರ್ ಅವರಿಗೆ ನ್ಯಾಯ ಸಿಗಲಿಲ್ಲ ಅಂದರೆ ದಲಿತ ಸಂಘಟನೆಯಿಂದ  ನ್ಯಾಯ ಸಿಗುವವರೆಗೂ  ಹೈಕೋರ್ಟ್ ಮೆಟ್ಟಿಲೇರಿ ಅಂಬೇಡ್ಕರ್ ಮಾರ್ಗದರ್ಶನದಲ್ಲಿ ಹೋರಾಟ ಮಾಡುತ್ತೇವೆ.

ಸಮಾಜದಲ್ಲಿ ಯಾವುದೇ ಜನಾಂಗದವರು ತಪ್ಪು ಮಾಡಿದರು ಅವರ ವಿರುದ್ಧ ನಾವು ಹೋರಾಟ ಮಾಡಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

ಮಾದಿಗ ಮಹಾಸಭಾದ ತಾಲೂಕು ಅಧ್ಯಕ್ಷ ಕೊಡಿಯಾಲ ಮಹಾದೇವ್ ಮಾತನಾಡಿ, ದಲಿತ ಯುವಕ ಮೋಹಿತ್ ಕುಮಾರ್ ಅವರನ್ನ ಗುಬ್ಬಿ ಯಿಂದ ಕುಣಿಗಲ್ ತಾಲ್ಲೂಕಿಗೆ ಅವಜ್ಞಾನಿಕ ಸ್ಥಳಕ್ಕೆ  ಪೋನ್ ಮಾಡಿ ಕರೆದುಕೊಂಡು, ಜಾತಿ ನಿಂದನೆ ಮಾಡಿ, ಮಾರಣಾಂತಿಕ ಹಲ್ಲೆ ಮಾಡಿ, ದೇಹದ ನಾನಾ ಭಾಗಗಳಿಗೆ ದೊಣ್ಣೆಯಿಂದ ಮತ್ತು ಕಬ್ಬಿಣದ ರಾಡಿನಿಂದ ಹೊಡೆದಿದ್ದಾರೆ. ಈ ಹಲ್ಲೆಯನ್ನು  ದಲಿತ ಸಂಘಟನೆಯಿಂದ ಖಂಡಿಸುತ್ತೇವೆ. ಯುವಕನಿಗೆ  ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದರು.

 ಪ್ರತಿಭಟನೆಯಲ್ಲಿ ದಲಿತ ಸೇನೆ ರಾಮ್ ವಿಲಾಸ್ ತಾಲೂಕು ಅಧ್ಯಕ್ಷ ಬಿ.ಶಿವರಾಜು, ಮುಖಂಡರಾದ ಪಾಂಡುರಂಗಯ್ಯ, ನಿಟ್ಟೂರು ರಂಗಸ್ವಾಮಿ, ಗಂಗಾರಾಮು, ಮುರಳಿ , ಮನೋಜ್, ರಾಘವೇಂದ್ರ, ನಿಟ್ಟೂರು ಶಿವರಾಂ, ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here