
ಗುಬ್ಬಿ : ಪರಿಸರ ಸಂರಕ್ಷಣೆಯ ಮಾಡುವಲ್ಲಿ ವಿದ್ಯಾರ್ಥಿಗಳು ಕೈಜೋಡಿಸಬೇಕು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಶ್ರೀ ಚಿದಂಬರಾಶ್ರಮದ ಸೇವಾ ಸದನ ಶಿಕ್ಷಣ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಮಕ್ಕಳು ಮುಂದಿನ ದೇಶದ ಉತ್ತಮ ಗಳಾಗಬೇಕಾದರೆ ಹಿಂದೂ ಧರ್ಮದ ಸಂಪ್ರದಾಯಗಳನ್ನು ಹಾಗೂ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಉತ್ತಮ ಶಿಕ್ಷಣ ಕಲಿಯಬೇಕು. ಪ್ರತಿಯೊಬ್ಬರು ನಮ್ಮ ದೇಶದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಇರುವ ಹಕ್ಕುಗಳು ಹಾಗೂ ಕಾರ್ತವ್ಯಗಳ ತಿಳಿದುಕೊಳ್ಳಬೇಕು ಎಂದರು.
ಚಿದಂಬರ ಆಶ್ರಮದ ಅಧ್ಯಕ್ಷ ಸಚ್ಚಿದಾನಂದ ಶರ್ಮ ಮಾತನಾಡಿ, ಆಚಾರ ವಿಚಾರಗಳು ಹಾಗೂ ಸಂಸ್ಕೃತಿಕ ಧರ್ಮ ಇವುಗಳ ಬಗ್ಗೆ ಆಶ್ರಮ ಪ್ರಾರಂಭವಾದಾಗಿನಿಂದಲೂ ಇಂದಿನವರೆಗೂ ಹಿಂದೂ ಧರ್ಮದ ಮಹತ್ವವನ್ನು ಹಾಗೂ ಸನಾತನ ಧರ್ಮದ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾ ಬಂದಿದೆ. ಚಿದಂಬರಸ್ವಾಮೀಜಿಯವರು ಸ್ಥಾಪಿಸಿದ ಚಿದಂಬರ ಆಶ್ರಮವು ಇಂದು ಹೆಮ್ಮರವಾಗಿ ಬೆಳೆಯುತ್ತಿದೆ ಹಾಗೂ ಇದನ್ನು ಶಿವ ಚಿದಂಬರ ಗುರುಗಳು ಮುಂದುವರಿಸಿಕೊಂಡು ಬಂದಿದ್ದಾರೆ ಎಂದರು.

ಶಿಕ್ಷಕರಾದ ಉಮಾ ಮಹೇಶ್ ಗಣರಾಜ್ಯೋತ್ಸವದ ಬಗ್ಗೆ ಮಕ್ಕಳಿಗೆ ಹಿತನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಆರ್.ಅನಂತರಾಜು, ಸೇವಾ ಸದನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎ.ಬಿ ಜಗದೀಶ್, ವೇದ ವಿದ್ಯಾಮಂದಿರದ ಮುಖ್ಯ ಶಿಕ್ಷಕಿ ನಳಿನ ಕುಮಾರಿ, ಸಂಸ್ಕೃತ ಶಾಲೆಯ ಮುಖ್ಯ ಶಿಕ್ಷಕಿ ನೇತ್ರಾವತಿ, ಸಿಪಿಎಸ್ ಶಾಲೆಯ ಮುಖ್ಯ ಶಿಕ್ಷಕಿ ಆರ್. ಕವಿತಾ ಹಾಗೂ ಎಲ್ಲಾ ಶಿಕ್ಷಕ ವರ್ಗದವರು ಸಿಬ್ಬಂದಿಗಳು ಮಕ್ಕಳು ಉಪಸ್ಥಿತರಿದ್ದರು.





