ಗುಬ್ಬಿ : ರಕ್ತದ ಕೊರತೆ ಹೋಗಲಾಡಿಸಲು ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು..

ಪಟ್ಟಣದ ವಿನಾಯಕನಗರದಲ್ಲಿ ಚಾಲುಕ್ಯ ಆಸ್ಪತ್ರೆ ವತಿಯಿಂದ ಬೃಹತ್ ಆರೋಗ್ಯ ಶಿಬಿರ  ಉದ್ಘಾಟಿಸಿ ಮಾತನಾಡಿ,  ಪ್ರತಿನಿತ್ಯ ಸಾಕಷ್ಟು ಜನರಿಗೆ ರಕ್ತದ ಕೊರತೆ ಎದುರಾಗುತ್ತಿದ್ದು  ಅಂತಹ ಸಮಯದಲ್ಲಿ ತಾವುಗಳು ಕೊಡುವಂತಹ ರಕ್ತವನ್ನೇ ಇನ್ನೊಬ್ಬರಿಗೆ ಬಳಕೆ ಮಾಡುವುದರಿಂದ   ಆ ಜೀವಗಳನ್ನ ಉಳಿಸುವಂತಹ ಮಹತ್ಕಾರ್ಯವಾಗಿದೆ. ರಕ್ತವನ್ನು ಕೊಡುವುದರಿಂದ ಯಾವುದೇ ರೀತಿಯ ಸಮಸ್ಯೆಯೂ ಇಲ್ಲ ವೈದ್ಯರ ಸಲಹೆಯಂತೆ  ಹೆಚ್ಚಿನ ರೀತಿಯಲ್ಲಿ ತಾವೆಲ್ಲರೂ ರಕ್ತದಾನವನ್ನು ಮಾಡಿ ಮತ್ತೊಂದು ಜೀವವನ್ನ ಉಳಿಸುವಂತಹ ಕೆಲಸವನ್ನ ಮಾಡಿ  ಇಂತಹ ಶಿಬಿರಗಳಲ್ಲಿ  ರಕ್ತವನ್ನು ಸಂಗ್ರಹಣೆಯನ್ನು ಮಾಡುವುದರಿಂದ  ಮುಂದಿನ ದಿನದಲ್ಲಿ ಉಂಟಾಗುವ ತುರ್ತುಪರಿಸ್ಥಿತಿಗಳನ್ನ ಎದುರಿಸುವುದಕ್ಕೆ  ಅತ್ಯಂತ ಹೆಚ್ಚು ಅನುಕೂಲವಾಗುತ್ತದೆ ಕೆಲವು ಎಂದರು.

ಚಾಲುಕ್ಯ ಆಸ್ಪತ್ರೆ ಸಿಇಒ ಡಾ. ನಾಗಭೂಷಣ್ ಮಾತನಾಡಿ ಆಸ್ಪತ್ರೆ ಆರಂಭದಿಂದ  ನಮ್ಮ ಆಸ್ಪತ್ರೆಯಲ್ಲಿ  ಪ್ರತಿ ವರ್ಷವೂ ಸಹ  ರಕ್ತದಾನ ಶಿಬಿರವನ್ನು ಮಾಡುವ ಮೂಲಕ  ಅಗತ್ಯವಿರುವಂಥವರಿಗೆ ತುರ್ತು ಪರಿಸ್ಥಿತಿಯಲ್ಲಿ  ಸಹಾಯ ಮಾಡುವ ನಿಟ್ಟಿನಲ್ಲಿ ರಕ್ತದಾನ  ಶಿಬಿರವನ್ನು ಆಯೋಜನೆ ಮಾಡಲಾಗಿದ್ದು, ಯುವಕರು ಅತ್ಯಂತ ಸ್ಪೂರ್ತಿಯಿಂದ ಬಂದು  ರಕ್ತದಾನವನ್ನು ಮಾಡುತ್ತಿದ್ದಾರೆ.ರಕ್ತದಾನ ಮಾಡುವುದರಿಂದ ನಮ್ಮ ದೇಹಕ್ಕೆ ಮತ್ತಷ್ಟು ಹೊಸ ರಕ್ತ ಸೇರುಪಡೆಯಾಗುತ್ತದೆ  ಇದರಿಂದ ಉತ್ತಮ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ರಕ್ತದಾನವನ್ನು ಮಾಡಿ ಮಾತನಾಡಿದ  ಯುವಕ ವಾಸು  ಇಷ್ಟು ದಿನಗಳ ಕಾಲ  ಯುವಕರು ಹೆಚ್ಚಿನ ರೀತಿಯಲ್ಲಿ ರಕ್ತವನ್ನು ದಾನ ಮಾಡುತ್ತಿದ್ದಿದ್ದನ್ನ ನೋಡಿದ್ದೆವು ಇಲ್ಲಿ ಸಾಕಷ್ಟು ಮಹಿಳೆಯರು ಹಾಗೂ  ಯುವತಿಯರು  ರಕ್ತದಾನ ಮಾಡಲು ಬಂದಿರುವುದು ಖಂಡಿತವಾಗಿಯೂ ಇನ್ನೂ ಹೆಚ್ಚಿನ ಸ್ಪೂರ್ತಿಯನ್ನು  ಇನ್ನಿತರವರಿಗೆ ನೀಡುತ್ತಿದೆ ಎಂದು ತಿಳಿಸಿದರು.

 ಶಿಬಿರದಲ್ಲಿ  ಆಸ್ಪತ್ರೆಯ ಅಧ್ಯಕ್ಷೆ ಜಯಮ್ಮ, ನಿರ್ದೇಶಕಿ ಡಾ.ರಶ್ಮಿ, ಅಮ್ಸ್ ವೈಡ್ ಓಪನ್ ಫೌಂಡೇಶನ್, ರೆಡ್ ಸರ್ಕಲ್ ಬ್ಲಡ್ ಸೆಂಟರ್ ಅಧ್ಯಕ್ಷ ಕ್ಯಾಲಿವಿನ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು  ಸಾರ್ವಜನಿಕರು ಇನ್ನಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here