ಗುಬ್ಬಿ: ತಾಲೂಕಿನ ಕಡಬ ಹೋಬಳಿ ಕೆ.ಜಿ ಟೆಂಪಲ್ ಗ್ರಾಮದಲ್ಲಿ ಶ್ರೀ ಕಾಳಿಕಂಠೇಶ್ವರಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಜ. 13 ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಶ್ರೀ ಕಾಲಕಂಠೇಶ್ವರಿ ದೇವಸ್ಥಾನದ ಆವರಣದಲ್ಲಿ ತುಮಕೂರಿನ ಶ್ರೀ ಬಸವೇಶ್ವರ ಡ್ರಾಮಾ ಸೀನ್ಸ್ ಮತ್ತು ಡ್ರೆಸ್ ಸಪ್ಲೇಯರ್ಸ್ ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯ ರಂಗಸಜ್ಜಿಕೆಯಲ್ಲಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಹಗಲು ಏರ್ಪಡಿಸಲಾಗಿದೆ ಎಂದು ನಾಟಕ ಮಂಡಳಿ ತಿಳಿಸಿದ್ದಾರೆ.

 ನಾಟಕದ ಅಧ್ಯಕ್ಷತೆಯನ್ನು ಶಾಸಕ ಎಸ್.ಆರ್. ಶ್ರೀನಿವಾಸ್ ವಹಿಸಿಕೊಳ್ಳುವರು. ವಿಶೇಷ ಆಹ್ವಾನಿತರಾಗಿ ಮುಖಂಡರಾದ ಹೊನ್ನಗಿರಿಗೌಡ, ಬಿ.ಎಸ್ ನಾಗರಾಜು, ದಿಲೀಪ್ ಕುಮಾರ್, ಚಿಕ್ಕಣ್ಣಸ್ವಾಮಿ ಅರ್ಚಕ ಪಾಪಣ್ಣ, ಕಳ್ಳಿಪಾಳ್ಯ ಲೋಕೇಶ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಮತ್ತಿತರರು ಭಾಗವಹಿಸುವರು.

ನಾಟಕವನ್ನು ಸಂಗೀತ ನಿರ್ದೇಶಕ ಶ್ರೀ ತಾಂಡವಮೂರ್ತಿ ನಿರ್ದೇಶಿಸಿದ್ದಾರೆ. ಇದೇ ದಿನ ಹಾರ್ಮೋನಿಯಂ ಮಾಸ್ಟರ್ ರಾದ ಎಲ್‌.ಪಿ. ರಾಜಣ್ಣ ಅಂಗಮ್ಮನಹಳ್ಳಿ, ವೆಂಕಟೇಶಪ್ಪ  ಕೆ.ಜಿ. ಟೆಂಪಲ್,ನರಸಿಂಹಯ್ಯ ಹುಲ್ಲೇಕೆರೆ, ಶಿವಕುಮಾರ್ ಹುಲ್ಲೇಕೆರೆ. ಎ.ಎಸ್.ನಟರಾಜು ಅಂಬಾರಪುರ, ಮೂರ್ತಾಚಾರ್ ಡ್ರಾಮಾ ಸೀನ್ಸ್ ಕೆಜಿ ಟೆಂಪಲ್ ಇವರುಗಳನ್ನು ಸನ್ಮಾನಿಸಲಾಗುತ್ತದೆ.

LEAVE A REPLY

Please enter your comment!
Please enter your name here