ಗುಬ್ಬಿ: ಪ್ರತಿಯೊಬ್ಬ ವಿದ್ಯಾರ್ಥಿಯು ಆರೋಗ್ಯಕರ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಂಡಾಗ ಪರಿಪೂರ್ಣ ಜ್ಞಾನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪಿಯು ಡಿಡಿಪಿಐ ಡಾ.ಬಾಲಗುರುಮೂರ್ತಿ ತಿಳಿಸಿದರು.

ಪಟ್ಟಣದ  ಎಸ್.ಆರ್.ಎ ಕಾಲೇಜಿನಲ್ಲಿ  ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬೇಕು. ನಿರಂತರ ಅಭ್ಯಾಸದಲ್ಲಿ ತೊಡಗಿದಾಗ ಉತ್ತಮ ಶ್ರೇಣಿಯಲ್ಲಿ ಸೇರ್ಪಡೆಯಾಗಲು ಸಾಧ್ಯವಾಗುತ್ತದೆ.

ಹಿಂದಿನ ದಿನದಲ್ಲಿ ಗುಬ್ಬಿ ಪಟ್ಟಣದಲ್ಲಿ ಎಸ್ಆರ್‌ಎ ಕಾಲೇಜು ಉತ್ತಮ ಶ್ರೇಣಿಯಲ್ಲಿ ಫಲಿತಾಂಶ ನೀಡುವ ಮೂಲಕ ಹೆಸರು ಗಳಿಸಿತ್ತು, ಇತ್ತೀಚಿನ ದಿನದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ.   ಮುಂದಿನ ದಿನದಲ್ಲಿ ಇನ್ನು ಹೆಚ್ಚು ದಾಖಲಾತಿ ಮಾಡಿಕೊಂಡು ಉತ್ತಮ ಸಾಧನೆ ಮಾಡಲಿ ಎಂದು ಹೇಳಿದರು. 

ನಾವು ಎಲ್ಲಾ ತಾಲೂಕಿನಲ್ಲೂ ಪರೀಕ್ಷಾ ಮಿತ್ರ ನಡೆಸಿದ್ದು ಇದರಿಂದ ತುಂಬಾ ವಿದ್ಯಾರ್ಥಿಗಳಿಗೆ  ಅನುಕೂಲವಾಗಿದೆ. ಪರಿಕ್ಷಾ ಮಿತ್ರಕ್ಕೆ ಬೇರೆ ಕಾಲೇಜಿನಿಂದ ಉಪನ್ಯಾಸಕರನ್ನು ಕರೆಸಿ ಪರೀಕ್ಷಗೆ ತಯಾರಾಗುವ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ.ವಿದ್ಯಾರ್ಥಿಗಳು ಹೆಚ್ಚು  ಅಂಕಗಳಿಸಲು ಪರೀಕ್ಷಾ ಮಿತ್ರ ಪೂರಕವಾಗಿದೆ  ಎಂದು ತಿಳಿಸಿದರು.

 

ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎಸ್.ಕುಮಾರಸ್ವಾಮಿ ಮಾತನಾಡಿ, ಪ್ರತಿದಿನ ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡು ಸಾಮಾನ್ಯ ಜ್ಞಾನವನ್ನು ಹೆಚ್ಚಿಕೊಳ್ಳಬೇಕು. ಮೊಬೈಲ್ ಬಳಕೆಯಿಂದ ಕುಟುಂಬದವರ ಜೊತೆ ಸಮಯ ಕಳೆಯುವ ಬದಲು ಮೊಬೈಲ್ನಲ್ಲೇ ಮುಳುಗಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಬಸ್ ಗಳಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರು ಬಂದರು ಸಹ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಮುಳುಗಿ ರಿಲ್ಸ್ ಅಥವಾ ಗೇಮ್ ಆಡುತ್ತಿರುವುದು ಅವರ ಅಭಿವೃದ್ಧಿಗೆ ಮಾರಕವಾಗುತ್ತದೆ. ಕಾಲೇಜಿನಲ್ಲಿ ಮಧ್ಯಾಹ್ನದ ಬಿಸಿಊಟ ಮಾಡುವುದರ ಮೂಲಕ ನಿಮ್ಮಗಳ ಫಲಿತಾಂಶ ಹೆಚ್ಚಳವಾಗಬೇಕು ಎಂಬ ನಿಟ್ಟಿನಲ್ಲಿ ಕಾಲೇಜು ಆಡಳಿತ ಮಂಡಳಿಯು ಶ್ರಮಿಸುತ್ತಿದೆ ಅದಕ್ಕೆ  ಎಲ್ಲಾ ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದರು.

ಎಸ್.ಆರ್.ಎ ಕಾಲೇಜಿನ ಪ್ರಾಂಶುಪಾಲ ಸಿ.ಜಿ.ಸತೀಶ್ ಮಾತನಾಡಿ, ಶೈಕ್ಷಣಿಕ ಹಿತಶಕ್ತಿಯಿಂದ  ಮಧ್ಯಾನದ ಬಿಸಿ ಊಟವನ್ನು ಕಾಲೇಜು ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಸೇರಿ ಮಾಡಲಾಗಿದೆ. ವಿದ್ಯಾರ್ಥಿಗಳು ಮಧ್ಯಾಹ್ನದ ಸಮಯದಲ್ಲಿ ಹೋಟೆಲ್, ಅಂಗಡಿಗಳಿಗೆ ಹೋಗುವುದರಿಂದ ಆರೋಗ್ಯವೂ ಕೆಡುತ್ತದೆ ಎಂಬ ನಿಟ್ಟಿನಲ್ಲಿ ಈ ಬಿಸಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು. ಇದು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ನಿರಂತರ ಕಾಲೇಜಿನಲ್ಲಿ ನಡೆಯುತ್ತದೆ ಎಂದು ಭರವಸೆ ನೀಡಿದರು.

  ಚೇಳೂರು ಜ್ಞಾನಜ್ಯೋತಿ ರಾಷ್ಟ್ರೀಯ ವಿದ್ಯಾಲಯ ಶಿಕ್ಷಕ ಸಿ.ವಿ.ಎನ್.ಮೂರ್ತಿ ಮಾತನಾಡಿ, ಮಕ್ಕಳಿಗೆ ಆಗುವ ತೊಂದರೆಗಳನ್ನು ಅರಿತು ಪ್ರಾಂಶುಪಾಲರು ಹಾಗೂ ಅವರ ಸಿಬ್ಬಂದಿಗಳು ಮಧ್ಯಾಹ್ನದ ಬಿಸಿ ಊಟವನ್ನು ಒದಗಿಸಿರುವುದು ತುಂಬಾ ಸಂತೋಷದಾಯಕ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಗದ್ದುಕೊಂಡು ಕಾಲೇಜಿಗೆ ಕೀರ್ತಿ ತರಬೇಕು ಎಂದರು.

ಕಾರ್ಯಕ್ರಮದಲ್ಲಿ ಅಬಕಾರಿ ನಿರೀಕ್ಷಕ ಶೇಖ್ ಇಮ್ರಾನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಜಯಂತಿ , ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರ ಒಕ್ಕೂಟದ ಅಧ್ಯಕ್ಷ ಪರಮೇಶ್, ಪಪಂ ಮಾಜಿ ಸದಸ್ಯ ಜಿ.ಆರ್.ಶಿವಕುಮಾರ್, ನಿವೃತ್ತ ಶಿಕ್ಷಕ ಅಶ್ವಥ್, ಹೊದಲೂರು ಶ್ರೀ ಸಿದ್ದರಾಮೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ನಂದೀಶ್, ಮಣ್ಣಮ್ಮ ದೇವಸ್ಥಾನ ಪ್ರಧಾನ ಅರ್ಚಕೆ ರಾಜಣ್ಣ, ಕ್ರೀಡಾ ಪ್ರೋತ್ಸಾಹಕ ಸಿ.ಆರ್.ಶಂಕರ್ ಕುಮಾರ್, ಲಯನ್ಸ್ ಕ್ಲಬ್ ಸಂಸ್ಥೆಯ ಪದಾಧಿಕಾರಿಗಳಾದ ವಿವೇಕಾನಂದ ಚಾರ್, ಅಶೋಕ್ ಕುಮಾರ್ ,ಕೀರ್ತಿರಾಜ್, ಸಿದ್ದಪ್ಪ ಗುಜ್ಜರ್, ನಉಪನ್ಯಾಸಕರಾದ ಮಂಜುನಾಥ್, ಮಂಜಣ್ಣ,  ದೇವರಾಜು, ಮಮತಾ, ಮೋಹನ್ ಕುಮಾರಿ, ಶಿವನಂಜಯ್ಯ, ಜಯಮ್ಮ, ನಾಗರಾಜು, ಸಿಬ್ಬಂದಿವರ್ಗ ವಿದ್ಯಾರ್ಥಿಗಳು ಇತರರು ಇದ್ದರು.

LEAVE A REPLY

Please enter your comment!
Please enter your name here