
ಗುಬ್ಬಿ: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗುಬ್ಬಿ ಶಾಖೆ ವತಿಯಿಂದ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ.20 ರಂದು 10 ಗಂಟೆಗೆ ನಡೆಯುವ ಸಮ್ಮೇನದಲ್ಲಿ ಸಮ್ಮೇಳನಾಧ್ಯಕ್ಷತೆಯನ್ನು ಡಾ.ಬಿ.ನಂಜುಂಡಸ್ವಾಮಿ ವಹಿಸಿಕೊಳ್ಳುವರು ಎಂದು ಸ್ವಾಗತ ಸಮಿತಿ ತಿಳಿಸಿದೆ.
ಡಿಸೆಂಬರ್ 20ರ ಬೆಳಗ್ಗೆ 7:30ಕ್ಕೆ ತಹಸೀಲ್ದಾರ್ ಬಿ.ಆರತಿ ಧ್ವಜಾರೋಹಣ ನೆರವೇರಿಸುವರು. ನಾಡ ಧ್ವಜಾರೋಹಣವನ್ನು ಆಡಳಿತ ಅಧಿಕಾರಿ ಬಿ.ಎಲ್.ಕೃಷ್ಣಪ್ಪ, ಪರಿಷತ್ತಿನ ಧ್ವಜಾರೋಹಣವನ್ನ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹೆಚ್.ಸಿ.ಯತೀಶ್ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಸಿಪಿಐ ರಾಘವೇಂದ್ರ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಲೋಕೇಶ್ ಬಿದರೆ, ಎನ್ಸಿಸಿ ಅಧಿಕಾರಿ ಡಾ.ಸುಮುಖ್, ಸಹಾಯಕ ನಿರ್ದೇಶಕ ಜಗದೀಶ್ ಮತ್ತಿತರರು ಉಪಸ್ಥಿತರಿರುವರು.
ಬೆಳಿಗ್ಗೆ 8.30ಗಂಟೆಗೆ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನದಿಂದ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಪ್ರಾರಂಭವಾಗಿ ರಾಷ್ಟ್ರೀಯ ಹೆದ್ದಾರಿ ವಿವೇಕಾನಂದ ರಸ್ತೆಯ ಮೂಲಕ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನ ತಲುಪುತ್ತದೆ ಇದ
ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಸ್ಥಾನದ ಹತ್ತಿರ ಸಮ್ಮೇಳನದ ಮೆರವಣಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ನಟರಾಜು ಚಾಲನೆ ನೀಡುವರು. ಮುಖ್ಯ ಅತಿಥಿಯಾಗಿ ಪಟ್ಟಣ ಪಂಚಾಯಿತಿಯ ಎಲ್ಲಾ ಮಾಜಿ ಸದಸ್ಯರುಗಳು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಬೆಳ್ಳಿರಥದಲ್ಲಿ ಸಮ್ಮೇಳನ ಅಧ್ಯಕ್ಷರನ್ನು ಕೂರಿಸಿಕೊಂಡು, ವಿವಿಧ ಜಾನಪದ ಕಲಾ ತಂಡಗಳಾದ ಡೊಳ್ಳುಕುಣಿತ, ನಂದಿ ಧ್ವಜ, ವೀರಗಾಸೆ ಲಿಂಗದವಿರರ ಕುಣಿತ, ಕುಂಭ ಕಹಳೆ, ಕೋಲಾಟ ಗೊರವನು ಕುಣಿತ, ಅರೆ ವಾದ್ಯ, ಚಿಟ್ಟಿಮೇಳ ಸೋಮನ ಕುಣಿತ ಹಾಗೂ ವಿವಿಧ ಶಾಖೆಗಳ ಮಕ್ಕಳ ಶಬ್ದ ಚಿತ್ರಗಳು ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ನಗರದ ಮಹಿಳಾ ಸದಸ್ಯರಿಂದ ಪೂರ್ಣಕುಂಭಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ನಂತರ ವೇದಿಕೆ ತಲುಪುಲಾಗುತ್ತದೆ.
ಬೆಳಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾಟನಾ ದಿವ್ಯ ಸಾನಿಧ್ಯವನ್ನು ಕೋಡಿಹಳ್ಳಿ ಮಠದ ಅಧ್ಯಕ್ಷರಾದ ಶ್ರೀ ಬಸವಬೃಂಗೇಶ್ವರ ಮಹಾಸ್ವಾಮಿಗಳು ವಹಿಸಿಕೊಳ್ಳುವವರು. ಮಾನ್ಯ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣ, ಗೃಹಸಚಿವರಾದ ಡಾ. ಜಿ.ಪರಮೇಶ್ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಶಾಸಕ ಎಸ್. ಆರ್. ಶ್ರೀನಿವಾಸ್ ವಹಿಸಿಕೊಳ್ಳುವರು. ಶಾಸಕರಾದ ಎಂಟಿ ಕೃಷ್ಣಪ್ಪ, ಟಿ.ಬಿ ಜಯಚಂದ್ರ, ಚಿದಾನಂದ ಎಂ ಗೌಡ, ರಾಜೇಂದ್ರ ಆರ್, ಟಿ.ಡಿ ಶ್ರೀನಿವಾಸ್, ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರದಿಕಾರದ ಅಧ್ಯಕ್ಷ ಕೆ.ಆರ್.ವೆಂಕಟೇಶ್ ಭಾಗವಹಿಸುವರು. ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ ಡಿ.ವಿ ಪರಮಶಿವಯ್ಯ ಸಮಾರಂಭಕ್ಕೆ ಚಾಲನೆ ನೀಡುವರು. ಜಿಲ್ಲಾಧ್ಯಕ್ಷ ಕೆ .ಎಸ್. ಸಿದ್ದಲಿಂಗಪ್ಪ ಆಶಯನುಡಿಯನ್ನು ನುಡಿಯುವರು. ಪತ್ರಕರ್ತರಾದ ಎಂ. ಎಸ್ .ರಾಘವೇಂದ್ರ ಸಂಚಿಕೆ ಬಿಡುಗಡೆ ಮಾಡುವರು. ಅರುಣ್ ಕುಮಾರ್ ಅವರ ಸ್ಪೂರ್ತಿ ಕವನ ಸಂಕಲನ, ಗೀತಾಕಲ್ಲೂರು ಅವರ ಭಾವ ಸಿಂಚನ, ಅಂಜನ್ ಕುಮಾರ್ ಪಿ.ಆರ್ ಕಾಲ್ಗೆಜ್ಜೆ ಹೊಸ ಕೃತಿಗಳನ್ನು ಕನ್ನಡ ಪ್ರಾಧ್ಯಾಪಕರಾದ ಡಾ. ಗೋವಿಂದರಾಜು ಎಂ ಕಲ್ಲೂರು ಬಿಡುಗಡೆ ಮಾಡುವರು.
ಮಧ್ಯಾನ 12.30ಕ್ಕೆ ನಡೆಯುವ ಗೋಷ್ಠಿಯ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯರಾದ ಟಿ.ಆರ್ ಲೀಲಾವತಿ ವಹಿಸಿಕೊಳ್ಳುವರು. ಗುಬ್ಬಿ ಕಂಪನಿ ರಂಗಭೂಮಿ ಎಂಬ ವಿಷಯದ ಬಗ್ಗೆ ಕಲಾಶ್ರೀ ಡಾ. ಲಕ್ಷ್ಮಣ್ ದಾಸ್, ಪ್ರಚಲಿತ ವಿದ್ಯಮಾನದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ಸಹಪ್ರಾಧ್ಯಪಕಿ ಡಾ.ಅರುಣ್ ಕುಮಾರಿ ಬಿ.ಎಸ್., ಗುಬ್ಬಿ ತಾಲೂಕಿನ ನೀರಾವರಿ ಒಂದು ಮುನ್ನೋಟದ ಬಗ್ಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಅಧ್ಯಕ್ಷ ಕಾಡಶೇಟ್ಟಿಹಳ್ಖಿ ಸತೀಶ್ ಮಾತನಾಡುವರು.
ಮಧ್ಯಾಹ್ನ 3 ಗಂಟೆಗೆ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಡಾ. ಓ ನಾಗರಾಜು ವಹಿಸಿಕೊಳ್ಳುವವರು. ದೋ.ಚಿ ಗೌಡ ರೈತ ಕವಿ ಮಂಡ್ಯ ಆಶಯ ನುಡಿಯನ್ನು ಹಾಡುವರು.
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಬಸವ ಬೃಂಗೇಶ್ವರ ಮಹಾಸ್ವಾಮಿಗಳು ವಹಿಸಿಕೊಳ್ಳುವರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ. ಸೋಮಶೇಖರ್ ಸಾಧಕರಿಗೆ ಸನ್ಮಾನವನ್ನು ಮಾಡುವರು. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ವಹಿಸಿಕೊಳ್ಳುವರು. ಸಮಾರೋಪ ಭಾಷಣವನ್ನು ಸಂಶೋಧಕ ಡಾ. ಡಿ.ಎನ್.ಯೋಗೇಶ್ವರಪ್ಪ ಮಾಡುವರು. ಸಮ್ಮೇಳನ ಅಧ್ಯಕ್ಷರಿಗೆ ಗೌರವಾರ್ಪಣೆಯನ್ನು ತಾಲ್ಲೂಕು ಅಧ್ಯಕ್ಷ ಹೆಚ್.ಸಿ.ಯತೀಶ್ ಮಾಡುವರು. ಡಾ.ರಾಜೇಶ್ ಗುಬ್ಬಿ ಅಭಿನಂದನ ನುಡಿ ನುಡಿಯುವರು, ಹಾಗೂ
ಸಮ್ಮೇಳನಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು, ಜಿಲ್ಲಾ,ತಾಲ್ಲೂಕು, ಹೋಬಳಿ ಘಟಕದ ಪದಾಧಿಕಾರಿಗಳು, ಸಾಹಿತ್ಯ ಅಭಿಮಾನಿಗಳು, ಅಧಿಕಾರಿಗಳು, ಮತ್ತಿತರರು ಆಗಮಿಸುವರು.





