ತಿಪಟೂರು: ಕಸಿ ಮಾಡಿದ ಬೆಳೆಗಳನ್ನು ರೈತರು ಬೆಳೆದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂದು ಕೃಷಿ ವಿಸ್ತರಣಾ ನಿರ್ದೇಶಕ ಡಾ.ವೈ.ಎನ್.ಶಿವಲಿಂಗಯ್ಯ ತಿಳಿಸಿದರು.
ತಿಪಟೂರು ತಾಲ್ಲೂಕು ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಗುರುವಾರ ಏರ್ಪಡಿಸಿದ್ದ ಬದನೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,
ಬದನೆ ಕಸಿ ಹೊಸ ತಂತ್ರಜ್ಞಾನ ಅದನ್ನು ಬಳಸಿ ಉತ್ತಮ ಇಳುವರಿಯನ್ನು ಪಡೆದುಕೊಳ್ಳಬೇಕು ಎಂಬ ಉದ್ದೇಶ ಇಟ್ಟುಕೊಂಡು ಕೆವಿಕೆ ಕಾರ್ಯನಿರ್ವಹಿಸುತ್ತದೆ. ನಗರ ಪ್ರದೇಶದಲ್ಲಿ ಮನೆಯ ಅಕ್ಕ ಪಕ್ಕ ಒಂದು ಎರಡು ಕಸಿ ಮಾಡಿದ ಬದನೆಯನ್ನು ಬೆಳೆದರೆ ನಿತ್ಯ ಸಾಂಬಾರ್ ಗೆ ಬಳಸಬಹುದು ಎಂದು ತಿಳಿಸಿದರು..
ವಿಜ್ಞಾನಿ ಡಾ.ಕೀರ್ತಿಶಂಕರ್ ಮಾತನಾಡಿ, ರೈತರು ತಾಂತ್ರಿಕತೆಯನ್ನು ಬಳಸಿಕೊಂಡು ಕೃಷಿ ಮಾಡಿದಾಗ ಮಾತ್ರ ಉತ್ತಮ ಆದಾಯ ಗಳಿಸಿಬಹುದು ಎಂದರು.
ಈ ಸಂದರ್ಭದಲ್ಲಿಹುರಿಯ ವಿಜ್ಞಾನಿ ಡಾ.ಶಂಕರ್, ಪ್ರಗತಿ ರೈತ ಮೋಹನ್,ದೇವಾನಂದ್, ವಿಜ್ಞಾನಿಗಳಾದ ಡಾ.ಕೀರ್ತಿ ಶಂಕರ್, ಡಾ.ದರ್ಶನ್ , ದೇಶಿ ತರಬೇತಿದಾರ ಶ್ರೀಧರ್ ಮೂರ್ತಿ ಹಾಗೂ ರೈತರು ಇದ್ದರು.





