ಗುಬ್ಬಿ : ಶಿಕ್ಷಕರಿಗೆ ತಾನು ಕಲಿಸಿದ ವಿದ್ಯಾರ್ಥಿ ಉನ್ನತ ಸ್ಥಾನ ತಲುಪಬೇಕು ಎಂಬ ಆಸೆ ಇರುತ್ತದೆ ಎಂದು ಮುಖ್ಯೋಪಾಧ್ಯಾಯ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಸುರಿಗೇನಹಳ್ಳಿ ಶ್ರೀ ಸಿದ್ಧಾರ್ಥ ಗ್ರಾಮಾಂತರ ಪ್ರೌಡಶಾಲೆಯಲ್ಲಿ 2003-04ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ,
ವಿದ್ಯಾರ್ಥಿಗಳಿಗೆ ಮಹತ್ತರ ಆಸೆಗಳು, ಕನಸುಗಳ ಇರಬೇಕು. ಜೊತೆಗೆ ಗುರುವಿನ ಮಾರ್ಗದರ್ಶನ ದೊರೆತರೆ ದೊಡ್ಠ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಶಿಕ್ಷಕ ಓಂಕಾರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೃಢ ನಿಶ್ಚಯ ಇರಬೇಕು. ಉನ್ನತ ವ್ಯಾಸಂಗ ಮಾಡಿ ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕು. ಅಂಧಕಾರದಿಂದ ಜ್ಞಾನದ ಕಡೆಗೆ ಕರೆದುಯ್ಯುವವನೇ ನಿಜವಾದ ಶಿಕ್ಷಕ ಎಂದರು.
ಶಿಕ್ಷಕ ಹನುಮಂತರಾಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಾಲೆಯ ಶಾಲೆಯಿಂದ ತೇರ್ಗಡೆಯಾಗಿ ಹೋದ ನಂತರವು ಶಾಲೆಯೊಂದಿಗೆ ನಿರಂತರ ಒಡನಾಟ ಇಟ್ಟುಕೊಳ್ಳಬೇಕು ಎಂದರು.

ಶಿಕ್ಷಕರಾದ ಎಸ್ .ಎಚ್ ಹನುಮಂತರಾಯಪ್ಪ, ಜಿ.ಪಿ.ಮಾಲತೇಶ್, ಬಸವಯ್ಯ, ಪ್ರಕಾಶ್, ಸ್ವಾಮಿ, ವಿಜಯಮ್ಮ, ಶೈಲಜಾ, ಗೀತಾ, ಜಗದೀಶ್, ಸಿರಾಜುದ್ದೀನ್ ಸೇರಿದಂತೆ ಹಳೆ ವಿದ್ಯಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





