ಗುಬ್ಬಿ: ಪಟ್ಟಣದಲ್ಲಿ ಸಾಂಸ್ಕೃತಿಕ ಮನಸ್ಥಿತಿ ಕಡಿಮೆಯಾಗಿದ್ದು ಜನ ಹೆಚ್ಚು ಹೆಚ್ಚು ಟಿವಿ ಹಾಗೂ ಮೊಬೈಲ್ ಗಳಿಗೆ ಮಾರುಹೋಗುತ್ತಿದ್ದು ಇದು ಆತಂಕದ ವಿಷಯವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ  ಬಿ ಜಯಶ್ರೀ ತಿಳಿಸಿದರು.

ಪಟ್ಟಣದ  ಡಾ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಗುರುವಾರ ಆರಂಭವಾದ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,   ಸಂಸ್ಕೃತಿ ಪರಂಪರೆಯನ್ನು ಉಳಿಸುವ ಏಕೈಕ ಮಾಧ್ಯಮವೆಂದರೆ ಅದು ರಂಗಭೂಮಿ ಇದು ಸದಾ ಇರುವ ಜೀವಂತ ಕಲೆ ಇದನ್ನು ಪ್ರೋತ್ಸಾಹಿಸುವ ಕಾರ್ಯ ನಿಮ್ಮಿಂದಾಗಬೇಕು.

ಗುಬ್ಬಿ ವೀರಣ್ಣ ನವರ ರಂಗ ಪರಂಪರೆಯನ್ನು ಉಳಿಸಿ ಬೆಳೆಸಲು ಪ್ರಾರಂಭವಾಗಿರುವ ಡಾ ಗುಬ್ಬಿ ವೀರಣ್ಣ ಟ್ರಸ್ಟ್ ಕಳೆದ 12 ವರ್ಷಗಳಿಂದ ನಿರಂತರವಾಗಿ ನಾಟಕೋತ್ಸವ ಮಕ್ಕಳ ಬೇಸಿಗೆ ಶಿಬಿರ ಹಾಗೂ ರಂಗಗೀತೆಗಳಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದರು.

ಗುಬ್ಬಿ ವೀರಣ್ಣ ನವರು ಹುಟ್ಟಿದ ಈ ಮಾಸದಲ್ಲಿ ನಾಟಕೋತ್ಸವವ ನೆಡೆಯುತ್ತಿರುವುದು ಅದು ಅವರ ಹುಟ್ಟೂರು ಗುಬ್ಬಿಯಲ್ಲೇ ನೆಡೆಯುತ್ತಿರುವುದು ರಂಗ ಕಲಾವಿದರಿಗೆ ಹೆಮ್ಮೆಯ ವಿಷಯ ಆದರೆ ಪ್ರೇಕ್ಷಕರ ಕೊರತೆ ಸ್ವಲ್ಪ ಸುದಾರಿಸಬೇಕಾಗಿದೆ ಎಂದು ಟ್ರಸ್ಟ್ ನ ಹಿರಿಯ ಸದಸ್ಯ ಹೆಚ್ ಎಂ ರಂಗಯ್ಯ ತಿಳಿಸಿದರು.

 ಕಾರ್ಯಕ್ರಮದಲ್ಲಿ ಗುಬ್ಬಿ ಎಚ್ ಎ ಎಲ್  ಪದಾಧಿಕಾರಿಗಳು, ಟ್ರಸ್ಟಿಗಳು, ಸಂಚಾಲಕರು  ಭಾಗವಹಿಸಿದ್ದರು,

LEAVE A REPLY

Please enter your comment!
Please enter your name here