ಗುಬ್ಬಿ : ರೈತರಿಗೆ ಯಾವುದೇ ರೀತಿಯ ವಿದ್ಯುತ್ ಸಮಸ್ಯೆ ಬಾರದಂತೆ ತಾಲ್ಲೂಕಿನಲ್ಲಿ  ಸುಮಾರು 6 -7 ವಿದ್ಯುತ್ ಉಪಸ್ಥಾವರ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ತಿಳಿದಿರರು.

  ತಾಲ್ಲೂಕಿನ ಮಂಚಲದೊರೆ ಗ್ರಾಮದಲ್ಲಿ  ಪಶು ಇಲಾಖೆಯಿಂದ ಹಮ್ಮಿಕೊಂಡಿದ್ದ  ಪಶು ಚಿಕಿತ್ಸಾಲಯಕ್ಕೆ ಕಾಮಗಾರಿಗಳಿಗೆ ಸುಮಾರು 50 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ ತಾಲ್ಲೂಕಿನ ಎಲ್ಲಾ ವಿದ್ಯುತ್ ಉಪಸ್ಥಾವರ ಘಟಕಗಳಲ್ಲಿ ಅಧಿಕ ವಿದ್ಯುತ್ ಒತ್ತಡ ಉಂಟಾಗಿದ್ದು ರೈತರಿಗೆ ಅನುಕೂಲಕರವಾಗುವ ದೃಷ್ಟಿಯಿಂದಾಗಿ ತಾಲೂಕಿನ ದೋಣೆಗಂಗಾ, ಹೊಸಹಳ್ಳಿ ಕ್ರಾಸ್, ಕೊಂಡ್ಲಿ ಕ್ರಾಸ್, ಭೋಗಸಂದ್ರ, ನಲ್ಲೂರು, ಯರಬಳ್ಳಿ,ತೊಳೆಕೊಪ್ಪ,ಗಳಲ್ಲಿ ಶೀಘ್ರವಾಗಿ ವಿದ್ಯುತ್ ಉಪಸ್ತಾವರ ಘಟಕಗಳನ್ನು ಸ್ಥಾಪಿಸಲಾಗುವುದು.

 ಹಾಗಲವಾಡಿ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಸರ್ಕಾರಿ ಜಾಗದ ಅಭಾವವಿದ್ದು ಸ್ಥಳೀಯರು ಸಹಕಾರ ನೀಡಿದರೆ ದೇವಾಲಯದ ಬಳಿ ಬಸ್ ನಿಲ್ದಾಣ ನಿರ್ಮಿಸಲಾಗುವುದು.

ಗ್ರಾಮೀಣ ಭಾಗದ ಜನತೆಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗುವುದು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸಮಸ್ಯೆ ಇದ್ದರೆ ಕೂಡಲೇ ವೈದ್ಯರನ್ನು ನಿಯೋಜಿಸಲಾಗುವುದು ಎಂದರು.

ಮಂಚಲದೊರೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ಈಗಾಗಲೇ ಸಂಬಂದ ಪಟ್ಟ ಅಧಿಕಾರಿಗಳ  ಜತೆ ಮಾತನಾಡಲಾಗಿದೆ.  ಶೀಘ್ರದಲ್ಲಿ ಪಬ್ಲಿಕ್ ಶಾಲೆಯನ್ನು ಪ್ರಾರಂಭ ಮಾಡಲಾಗುತ್ತದೆ ಎಂದರು.

 ಹಾಗಲವಾಡಿ ಹೋಬಳಿ ಹಿಂದೂಳಿದ ಪ್ರದೇಶವಾಗಿದ್ದು ಈ ಭಾಗಕ್ಕೆ ಹೆಚ್ಚು ಅನುದಾನ ಹಾಕಿ ಈ ಭಾಗದ ಜನರ ಅಭಿವೃದ್ದಿಗೆ ಶ್ರಮಿಸಲಾಗುತ್ತದೆ.ಈ ಭಾಗದಲ್ಲಿ ಸಾಕಷ್ವು ಅಭಿವೃದ್ದಿ ಕೆಲಸ ಮಾಡಿದ್ದು ಸಣ್ಣ ಪುಟ್ಟ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸುತ್ತೇವೆ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಗ್ರಾ,ಪಂ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ಮಂಜುಳಾ,ತಾಪಂ ಮಾಜಿ ಸದಸ್ಯ ಕರಿಯಮ್ಮ ರಮೇಶ್,  ಸದಸ್ಯರಾದ  ಮಹದೇವ್ , ನಲ್ಲೂರು ಸೋಮಣ್ಣ ,ಶಕುಂತಲಾ , ಬಸವರಾಜು ,ಲಕ್ಷ್ಮೀಕಾಂತ್ ,ಕೆ.ಟಿ.ರಾಜು ,ಪುಟ್ಟಸಿದ್ದಪ್ಪ  ,ಪಿಡಿಓಗಳಾದ ರಾಜೇಂದ್ರ ಪ್ರಸಾದ್ , ಅಶೋಕ್ ಬಸವನಾಳ್ , ಕಾರ್ಯದರ್ಶಿ ತಿಮ್ಮೇಗೌಡ್ರು , ಉಪ ನಿರ್ದೇಶಕ ಶಿವಪ್ರಸಾದ್ ,  ಸಹಾಯಕ ನಿರ್ದೇಶಕ ಸುರೇಶ್  , ಗುತ್ತಿಗೆದಾರ ಪ್ರಕಾಶ್ ,  ಮುಖಂಡರಾದ ಬಾಬು, ರಮೇಶ್ ,ಉಮೇಶ್ , ತಿಮ್ಮಣ್ಣ , ಸಣ್ಣರಂಗಯ್ಯ , ರಾಜಣ್ಣ  ಸೇರಿದಂತೆ ಗ್ರಾಮಸ್ಥರು  ಹಾಜರಿದ್ದರು.

LEAVE A REPLY

Please enter your comment!
Please enter your name here