ತುಮಕೂರು: ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಅಭಿಮಾನಿಗಳು ಪಾವಗಡದ ಶ್ರೀ ಶನೈಶ್ಚರ ಸ್ವಾಮಿಗೆ 91 ಕೆಜಿ ಎಳ್ಳಿನ ತುಲಾಭಾರ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭಿಮಾನಿಗಳು ಶನೇಶ್ವರ ಸ್ವಾಮಿ‌‌ಮೊರೆ ಹೋಗಿದ್ದು ವಿಶೇಷ ಪೂಜೆ ಸಲ್ಲಿಸಿ ಸಿಎಂ ಪದವಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಪಾವಗಡದ ಪ್ರಸಿದ್ಧ ಶನೇಶ್ವರ ದೇವಾಲಯದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಂದ 91 ಕೆಜಿ ಎಳ್ಳಿನ ತುಲಾಭಾರ ಅರ್ಪಿಸಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಕುಜದೋಷ, ಶನಿ ದೋಷಗಳು ದೂರವಾಗಿ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಅಲಂಕರಿಸಲು ಮಾರ್ಗ ಸುಗಮವಾಗಲಿ ಎಂಬ ಉದ್ದೇಶದಿಂದ ತುಲಾಭಾರ ಮತ್ತು ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದರು.

ಪಾವಗಡ ಡಿಕೆ ಅಭಿಮಾನಿ ಬಳಗದ ವತಿಯಿಂದ ಶನೇಶ್ವರ ದೇವರಿಗೆ ವಿಶೇಷ ಪೂಜೆ,ನವಗ್ರಹಗಳಿಗೆ ತೈಲಾಭಿಷೇಕ, ತುಲಾಭಾರದ ಧಾರ್ಮಿಕ ವಿಧಿವಿಧಾನಗಳು ನಡೆಸಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಿ ‌ಆಗಲೆಂದು ಪ್ರಾರ್ಥಿಸಿದರು.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ರಾಜಕೀಯ ಭವಿಷ್ಯ ಉತ್ತಮವಾಗಲಿ, ರಾಜ್ಯದ ನಾಯಕತ್ವ ಕೊಡುಗೆ ನೀಡಲಿ ಎಂಬ ನಂಬಿಕೆಯಲ್ಲಿ ಅಭಿಮಾನಿಗಳು ಈ ವಿಶೇಷ ಪೂಜಾ ಕಾರ್ಯಕ್ರಮವನ್ನು ನಡೆಸಿದ್ದಾರೆ.

LEAVE A REPLY

Please enter your comment!
Please enter your name here