ತುಮಕೂರು : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಂಶ್ರೀ ಶಾಲೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ಅಧಿಕಾರಿಗಳಾದ ಕಮ್ ಕೌಶಂಗ್ ರವರ ತಂಡ ತುಮಕೂರು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ತಂಡದಲ್ಲಿ ಆಗಮಿಸಿದ್ದ ಕಮ್ ಕೌಶಂಗ್ ರವರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕರಾದ ಶ್ರೀ ಭರತ್ ರವರು ಪರಿಶೀಲನೆಯ ಮೊದಲ ದಿನವಾದ ಮಂಗಳವಾರ, ತುಮಕೂರು ತಾಲ್ಲೂಕಿನ ಪಿಎಂ ಶ್ರೀ ನವೋದಯ ವಿದ್ಯಾಲಯ ಹಾಗೂ ಪಿಎಂಶ್ರೀ ಕಾಡು ಶೆಟ್ಟಿಹಳ್ಳಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬುಧವಾರ ಕಳ್ಳಂಬೆಳ್ಳ ಮತ್ತು ಬಡವನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಂ ಶ್ರೀ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.
ನಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಸದರಿ ಸಭೆಯಲ್ಲಿ ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿಗಳ ಜೊತೆ ಸಂವಾದ ನಡೆಸಿ, ಪಿಎಂಶ್ರೀ ಶಾಲೆಗಳ ಬಗ್ಗೆ ವರದಿಯನ್ನು ನೀಡಲಾಯಿತು.
ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಪ್ರಾಂಶುಪಾಲರುಗಳು, ಶಿಕ್ಷಕರು ಭಾಗಿಯಾಗಿದ್ದರು.





