ಗುಬ್ಬಿ :  ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಾಟೀಲ್ ಅವರ 150ನೇ ಜನ್ಮದಿನವನ್ನು ಇಂದು ಇಡೀ ರಾಷ್ಟ್ರವೇ ಅವರಿಗೆ ಗೌರವ ಸಲ್ಲಿಸುತ್ತಿದೆ ಎಂದು ಚೇಳೂರು ಪೊಲೀಸ್ ಠಾಣೆ ಪಿಎಸ್ಐ ಮಾಳಪ್ಪ ನಾಯ್ಕೋಡಿ ತಿಳಿಸಿದರು.

 ತಾಲೂಕಿನ ಚೋಳೂರು  ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸರ್ದಾರ್ ವಲ್ಲಾಭಬಾಯಿ ಪಾಟೇಲ್  ಅವರ150ನೇ ಜನ್ಮದಿನದ ಅಂಗವಾಗಿ ಏಕತಾ ಓಟಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವತಂತ್ರ ಭಾರತದ ಭೂಪಟದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಸರ್ದಾರ್ ವಲ್ಲಭಾಯಿ ಪಟೇಲ್  ನಮ್ಮ ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೇಲ್ಲರು ಸಾಗಬೇಕು. ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರಷ್ಠೇ ಅಲ್ಲ ಸ್ವಾತಂತ್ರ ಭಾರತದ ಅಡಿಪಾಯವನ್ನು ಬಲಪಡಿಸಿದ ಏಕಿಕೃತ ಶಕ್ತಿಯಾಗಿದ್ದರು. ಸರ್ದಾರ್ ವಲ್ಲಭಾಯಿ ಪಾಟೆಲ್  ಅವರನ್ನ ಉಕ್ಕಿನ ಮನುಷ್ಯ ಎಂದೆ ಪ್ರಖ್ಯಾತಿಯಾಗಿದ್ದರು. ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ  ಚೋಳರು ಪೊಲೀಸ್ ಠಾಣೆಯಿಂದ ವತಿಯಿಂದ ಆರಂಭವಾದ ಏಕತಾ ಓಟ ಚೋಳೂರು ಶಿವಕುಮಾರ್ ಸ್ವಾಮಿ ಸರ್ಕಲ್ ಇಂದ ಶಾಲಾ ಮಕ್ಕಳೊಂದಿಗೆ ಚೇಳೂರಿನ  ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿತ್ತು.

ಇದೇ ಸಂದರ್ಭದಲ್ಲಿ  ಎಎಸ್ಐ ನಾಗರಾಜು , ವೃಷಬೇಂಧ್ರಪ್ಪ , ಮುಖ್ಯ ಶಿಕ್ಷಕರಾದ ನಟರಾಜು ,ಚಿಕ್ಕರಂಗೇಗೌಡ  ಹಾಗೂ ಸಿಬ್ಬಂದಿಗಳಾದ ರವಿಕುಮಾರ್, ಯೋಗೀಶ್, ಅಶೋಕ್ ,  ನಾಗಭೂಷಣ್  ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here