ಗುಬ್ಬಿ: ಪಟ್ಟಣದ ಆರನೇ ಕ್ರಾಸ್ ಕುವೆಂಪು ನಗರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಶ್ರೀಯಲ್ಲಮ್ಮ ದೇವಿಯ 14ನೇ ವರ್ಷದ ವರ್ಧಂತಿ ಮಹೋತ್ಸವ ಕಾರ್ಯಕ್ರಮವು ಡಿ11 ಮತ್ತು 12ನೇ ರಂದು ಅದ್ದೂರಿಯಾಗಿ ಕಾರ್ಯಕ್ರಮ ಜರಗಲಿದೆ ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ.
ಡಿಸೆಂಬರ್ 11ರಂದು ಗುರುವಾರ ಗೋಧೂಳಿ ಲಗ್ನದಲ್ಲಿ ಗಂಗಾ ಪೂಜೆ, ಪುಣ್ಯಹಃ, ನಂದಿ ಕಳಸ ಸ್ಥಾಪನೆ, ನವಗ್ರಹ ಹೋಮ ಇನ್ನೂ ಮುಂತಾದ ಹೋಮಗಳನ್ನು ಮಾಡಲಾಗುತ್ತದೆ.
ಡಿ.12 ರಂದು ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಅಂಕುರಾರ್ಪಣೆ ಎಲ್ಲಮ್ಮ ದೇವಿ ಹೋಮ ಪೂರ್ಣಾವತಿ ಮತ್ತು ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಅನ್ನ ಸಂತರ್ಪಣೆಯನ್ನು ಸಹ ವ್ಯಪರಿಸಲಾಗಿದೆ ಸಾರ್ವಜನಿಕರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದ್ದಾರೆ.






