
ಗುಬ್ಬಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಬಾಕಿ ವೇತನವನ್ನು ಒನ್ ಮ್ಯಾನ್ ಕಮಿಟಿ ಮಾಡಿದ ಶಿಫಾರಸ್ಸಿನ ಮೇಲೆ ಸರ್ಕಾರ ಕೊಡಲು ಸಿದ್ಧವಿದೆ ಎಂದು ಕೆ.ಎಸ್.ಆರ್.ಟಿ.ಸಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಅಡಗೂರು, ಧೂಳನಹಳ್ಳಿ, ಕಕ್ಕೇನಹಳ್ಳಿ, ತೊಂಗನಹಳ್ಳಿ, ಸುರಿಗೇನಹಳ್ಳಿ, ಕೊಪ್ಪ ಹಾಗೂ ಸಿಂಗೋನಹಳ್ಳಿ ಗ್ರಾಮಗಳ ಅಭಿವೃದ್ದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂದಾಜು 6.11ಕೋಟಿ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಚಾಲನೆ ನೀಡಿ ಮಾತನಾಡಿದ ಅವರು, ಸಾರಿಗೆ ನೌಕರರ ಬೇಡಿಕೆಯು ಪೂರ್ಣ ಅರಿಯಸ್ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಸಾರಿಗೆ ನೌಕರರ ಬೇಡಿಕೆಯಲ್ಲಿ ಸಂಬಳ ಮತ್ತು ದರ ಪರಿಷ್ಕರಣೆಯನ್ನು ಬಿಜೆಪಿ ಸರ್ಕಾರ 2023-24ರಲ್ಲಿ ಮಾಡಬೇಕಿತ್ತು. ನಾವು 2027 ಕ್ಕೆ ಅಗ್ರಿಮೆಂಟ್ ಮಾಡುತ್ತೇವೆ. ಅರಿಯರ್ಸ್ ವಿಚಾರವಾಗಿ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಹಂತಹಂತವಾಗಿ ಕ್ರಮ ಕೈಗೊಳ್ಳುತ್ತೇವೆ.
ರಾಜಕಾರಣಿಗಳು ಅವರ ಪಕ್ಷವನ್ನು ಅವರು ಹೊಗಳಿಕೊಳ್ಳುತ್ತಾರೆ. ಗೆದ್ದಮೇಲೆ ಪ್ರಮಾಣಿಕವಾಗಿ ರಾಜ್ಯದ ಜನತೆಗೆ ಸೇವೆ ಸಲಿಸಬೇಕು. ಸೋಲು ಗೆಲುವು ಎರಡನ್ನು ಸಮನವಾಗಿ ಸ್ವಿಕರಿಸುತ್ತೇನೆ. ರಾಜಕಾರಣದಲ್ಲಿ ಬದ್ದತೆ ಇಟ್ಟುಕೊಂಡು ಪಕ್ಷದ ಕೆಲಸ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಇಂದು ಗ್ಯಾಂಟಿ ಯೋಜನೆಯ ಸ್ಥಾನ ಸಮಿತಿಯ ತಾಲೂಕ ಅಧ್ಯಕ್ಷ ಕೆ ಆರ್ ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಚನ್ನಬಸವೇಗೌಡ, ಮಾಜಿ ಸದಸ್ಯರಾದ ಕರೆತಿಮ್ಮಯ್ಯ, ಜಯಮ್ಮ, ಭಾಗ್ಯಮ್ಮ, ಮಹದೇವಯ್ಯ, ಮುಖಂಡರಾದ ಕೊಪ್ಪ ದೇವರಾಜ್, ವೆಂಕಟೇಶ್ ಗೌಡ, ಸಿದ್ದಲಿಂಗಪ್ಪ, ರಮೇಶ್, ಕೆ.ಎಸ್.ಸುರೇಶ್, ಕುಮಾರ್, ಚನ್ನಬಸವಯ್ಯ, ಮುನಿಸ್ವಾಮಿ, ದೊಡ್ಡಯ್ಯ, ತೊಂಗನಹಳ್ಳಿ ಯತೀಶ್, ಸು.ಮು.ಮುನಿಯಪ್ಪ, ಸುರಗೇನಹಳ್ಳಿ ರಘು, ನರಸಿಂಹಯ್ಯ, ಕೆಂಪೇಗೌಡ, ಪಿಡಿಒ ಮಂಜುಳ, ಮಂಜುಳ ಪಾಟೀಲ್, ಕವಿತ ಗುತ್ತಿಗೆದಾರ ಚೌಟ್ರಿ ಕುಮಾರ್, ದೇವರಾಜ್ ವೆಂಕಟೇಶ್, ಎಇಇ ಚಂದ್ರಶೇಖರ್, ಮತ್ತಿತರರು ಇದ್ದರು.






