ಗುಬ್ಬಿ : ಪಟ್ಟಣದ ಬೆಲ್ಲದಪೇಟೆಯ ಶ್ರೀವಾಸವಿ ದೇವಾಲಯದಲ್ಲಿ ವಾಸವಿ ಅಗ್ನಿ ಪ್ರವೇಶದ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀ ವಾಸವಿ ಅಮ್ಮನವರಿಗೆ ಅಗ್ನಿ ಪ್ರವೇಶದ ಅಂಗವಾಗಿ ಭಕ್ತರ ಸಮ್ಮುಖದಲ್ಲಿ ಶ್ರೀವಾಸವಿದೇವಿಗೆ ಕ್ಷೀರಾಭಿಷೇಕ ನೆರವೇರಿಸಲಾಯಿತು.ವಿಷ್ಣು ಸಹಸ್ರನಾಮ, ಕುಂಕುಮ ಅರ್ಚನೆ, ಪುಷ್ವಾರ್ಚನೆ, ಶ್ರೀವಾಸವಿ ದೇವಿಗೆ ಅರ್ಪಿಸಲಾಯಿತು.ಗಣಪತಿ ಹೋಮ, ನವಗ್ರಹ ಹೋಮ, ವಾಸ್ತು ಹೋಮ ಪೂರ್ಣಾವಧಿ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ನೀಡಲಾಯಿತು.
ನಂತರ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.





