ಗುಬ್ಬಿ : ಜಗತ್ತಿನಲ್ಲಿ ರಾಮಾಯಣವನ್ನು ಬರೆದವರು ಮಹರ್ಷಿ ವಾಲ್ಮೀಕಿ ಅವರು ಅವರ ಆದರ್ಶಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು ತಿಳಿಸಿದರು.
ಗುಬ್ಬಿ ತಾಲೂಕಿನ ಉದ್ದೇಹೊಸಕೆರೆ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನಲ್ಲಿ 10 ಗ್ರಂಥಗಳಲ್ಲಿ ಪವಿತ್ರವಾದ ಗ್ರಂಥ ಮಹರ್ಷಿ ವಾಲ್ಮೀಕಿ ಗ್ರಂಥವಾಗಿದೆ. ರಾಮಾಯಣ ಗ್ರಂಥವನ್ನು ಪ್ರತಿಯೊಬ್ಬರೂ ಕೂಡ ಪೂಜಿಸಬೇಕಿದೆ ಆದಿಕವಿ ಮಹರ್ಷಿ ವಾಲ್ಮೀಕಿಯು ರಾಮಾಯಣವನ್ನು ರಚಿಸಿ ಎಲ್ಲರಿಗೂ ಸರಿಯಾದ ಮಾರ್ಗದರ್ಶನ ನಡೆಯುವಂತೆ ತೋರಿಸಿಕೊಟ್ಟಿದ್ದಾರೆ ಆದ್ದರಿಂದ ನಾವೆಲ್ಲರೂ ಕೂಡ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನ ಮೈಗೂಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕೂಡ ಸಾಗಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ನಾಗರಾಜ್ ಅವರನ್ನು ಮಹರ್ಷಿ ವಾಲ್ಮೀಕಿ ಗೆಳೆಯರ ಬಳಗದವರು ಅಭಿನಂದಿಸಿದರು.
ಮಹರ್ಷೀ ವಾಲ್ಮೀಕಿ ಭಾವಚಿತ್ರವನ್ನುಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತ್ತು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಂಘದ ಅಧ್ಯಕ್ಷ ರಾಮಚಂದ್ರ , ಉಪಾಧ್ಯಕ್ಷ ದೊಡ್ಡಯ್ಯ , ಕಾರ್ಯದರ್ಶಿ ಮಂಜುನಾಥ್ , ಖಜಾಂಚಿ ಹರೀಶ್ ಮುಖಂಡರಾದ ದಯಾನಂದ್ , ರವೀಶ್ , ಸಿದ್ದಲಿಂಗಪ್ಪ, ಕಾಂತರಾಜು ಹಾಗೂ ವಾಲ್ಮೀಕಿ ಸಂಘದ ಮುಖಂಡರುಗಳು ಭಾಗವಹಿಸಿದ್ದರು.