ಗುಬ್ಬಿ : ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮಾದಕ ವಸ್ತುಗಳ ದಾಸರಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಮದ್ಯಾಹ್ನ ನಡೆದ ನಶ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಅತಿಯಾಗಿ ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ತೊಂದರೆಗಳನ್ನು ಎದುರಿಸುತ್ತಿದ್ದು, ಜೀವನವನ್ನೇ ದುರಂತದ ಕಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು. 

2019 ರ ಅಂಕಿ ಅಂಶಗಳ ಮಾಹಿತಿ ಪ್ರಕಾರ ಭಾರತ ದೇಶದಲ್ಲಿ ಸುಮಾರು 7.2 ಕೋಟಿ ಜನರು ಈ ಮಾದಕ ವಸ್ತುಗಳು ಬಳಸುತ್ತಿದ್ದು, ಇದರಲ್ಲಿ ಶೇಕಡಾ 90 ರಷ್ಟು ಮಂದಿ ಅತಿಯಾದ ಆರೋಗ್ಯ ತೊಂದರೆ ಹಾಗೂ ಸಾವಿನ ಮನೆಯನ್ನು ತಟ್ಟುತ್ತಿದ್ದಾರೆ. ಇದಕ್ಕೆ ಕಾರಣ ನಶಾ ಹೆಸರಲ್ಲಿ ಬಳಸುತ್ತಿರುವ ವಸ್ತುಗಳು ಎಂದು ತಿಳಿಸಿದರು. ಅಲ್ಲದೆ  ಕೇಂದ್ರ ಸರ್ಕಾರ 2020 ಆಗಸ್ಟ್ 15 ರಂದು ನಶ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಇದರಂತೆ ನಶ ಮುಕ್ತ ಕರ್ನಾಟಕ, ನಶ ಮುಕ್ತ ತುಮಕೂರು ಎಂಬ ಅಭಿಯಾನಗಳನ್ನು ಮಾಡಲಾಗುತ್ತದೆ ಎಂದರು.

ಜೀವಶಾಸ್ತ್ರ ಉಪನ್ಯಾಸಕ ದಿವಾಕರ್ ಮಾತನಾಡಿ, 2020 ರಲ್ಲಿ ಪ್ರಾರಂಭವಾದ ನಶಾ ಮುಕ್ತ ಭಾರತ ಎಂಬ ಅಭಿಯಾನ ಕೇವಲ ಸರ್ಕಾರಿ ಕಾರ್ಯಕ್ರಮವಾಗಿದೆ ಇದರ ಉದ್ದೇಶವನ್ನು ಈಡೇರಿಸುವ ಸಲುವಾಗಿ ಯುವ ಸಮುದಾಯ ಅತ್ಯಂತ ಉತ್ಸುಕತೆಯಿಂದ ಪಾಲ್ಗೊಳ್ಳಬೇಕಿದೆ ಎಂದು ತಿಳಿಸಿದರು. ಮುಖ್ಯವಾಗಿ ಶಾಲಾ ಕಾಲೇಜುಗಳ ಮಕ್ಕಳು ಧೂಮಪಾನ ಹಾಗು ಡ್ರಗ್ಸ್, ಕೆಫಿನ್, ಗಾಂಜಾ ಇತ್ಯಾದಿ ಮಾದಕ  ವಸ್ತುಗಳಿಗೆ ದಾಸರಾಗದೆ ಶಿಕ್ಷಣ ಹಾಗೂ ವೃತ್ತಿಯ ಮೇಲೆ ಗಮನ ಕೊಟ್ಟು ಉತ್ತಮ ಜೀವನಕ್ಕೆ ಅವಕಾಶ ಮಾಡಿಕೊಡಬೇಕಿದೆ ಎಂದು ತಿಳಿಸಿದರು . 

ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮಂಜುನಾಥ್ ಎಂ.ಕೆ, ಎಸ್ ಆರ್ ಎ ಕಾಲೇಜಿನ ಪ್ರಾಂಶುಪಾಲ ಸತೀಶ್.ಸಿ.ಜಿ., ಸಿಐಟಿ ಕಾಲೇಜಿನ ಪ್ರಾಂಶುಪಾಲ ಮನೋಜ್ ಕುಮಾರ್,  ಆರೋಗ್ಯ ಇಲಾಖೆ ಅಧಿಕಾರಿ ರಮೇಶ್, ಉಪನ್ಯಾಸಕರಾದ ರಮೇಶ್, ಮಂಜುನಾಥ್, ಮಮತಾ, ಮಂಜಣ್ಣ, ದೇವರಾಜು, ಇತರರಿದ್ದರು.

LEAVE A REPLY

Please enter your comment!
Please enter your name here