ಗುಬ್ಬಿ : ಮಂಗಳೂರಿನ ಕಥಾಬಿಂದು ಪ್ರಕಾಶನ ಕೊಡ ಮಾಡುವ ಶಿಕ್ಷಕ ರತ್ನ ಪ್ರಶಸ್ತಿಗೆ ಶಿಕ್ಷಕಿ ಗೀತಾ ಲೋಕೇಶ್ ರವರು ಭಾಜನರಾಗಿದ್ದಾರೆ.

ತಾಲ್ಲೂಕಿನ ಸಿಎಸ್ ಪುರ ಗ್ರಾಮದ  ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ  ಶಿಕ್ಷಕ ವೃತ್ತಿಗೆ ಮಾತ್ರ ಸೀಮಿತವಾಗದೆ, ಸಾಹಿತ್ಯ ಕ್ಷೇತ್ರದಲ್ಲೂ ಬಹಳಷ್ಟು ಸಾಧನೆ ಮಾಡಿದ್ದಾರೆ.ಅಂತರಾಳ ಕವನ ಸಂಕಲನ ಚೆಲುವಿನ ಭಾಷ್ಯ ಚಿತ್ರ ಕವನ ಸಂಕಲನಗಳು ಲೋಕಾರ್ಪಣೆ ಗೊಂಡಿವೆ.

ಇವರಿಗೆ 2024 ನೇ ಸಾಲಿನ  ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಉತ್ತಮ ಶಿಕ್ಷಕ ಪ್ರಶಸ್ತಿ ಕಾವ್ಯಶ್ರೀ ಪ್ರಶಸ್ತಿ,ಸಾವಿತ್ರಿ ಬಾಯಿ ಫುಲೆ ಸಂಘದಿಂದ ಸೇವಾತೃಪ್ತಿ ಪ್ರಶಸ್ತಿ, ಸಾಧನಕೇರಿಯ ಸಾಧಕ ರತ್ನ ,ಸಾಧನ ಶ್ರೀ ಇನ್ನೂ ಹಲವಾರು ಪ್ರಶಸ್ತಿಗಳು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಇವರಿಗೆ ಅಕ್ಟೋಬರ್ 26 ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ  *ಭಾವಸಿಂಚನ*  ಮೂರನೇ ಕವನ ಸಂಕಲನವನ್ನು ಬಿಡುಗಡೆ ಮಾಡುತ್ತಿದ್ದಾರೆ ಮತ್ತು 

*ಶಿಕ್ಷಕರತ್ನ* ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here